ಶಾರುಖ್ ಖಾನ್​ರನ್ನು ಬೈಜೂಸ್ ಲರ್ನಿಂಗ್ ಆ್ಯಪ್​ ಡ್ರಾಪ್ ಮಾಡಿದ ಬಳಿಕ ನಟನ ಬೆಂಬಲಕ್ಕೆ ನಿಂತ ಸೆಲಿಬ್ರಿಟಿಗಳು

ಅತ್ತ ಶಾರುಖ್ ಮಗನ ವಿಚಾರಣೆ ಜೈಲಿನಲ್ಲಿ ನಡೆಯುತ್ತಿದ್ದರೆ, ಅವರನ್ನು ತಮ್ಮ ಉತ್ಪಾದನೆಗಳ ಜಾಹೀರಾತಿಗಾಗಿ ಉಪಯೋಗಿಸಿಕೊಳ್ಳುತ್ತಿರುವ ಕಂಪನಿಗಳು ಅವರನ್ನೊಳಗೊಂಡ ಜಾಹೀರಾತು ಪ್ರಸಾರವಾಗುವುದನ್ನು ತಡೆಹಿಡಿಯಲಾರಂಭಿಸಿವೆ

ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ ಸಿ ಬಿ) ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್​ನನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸಿ ಹತ್ತು ದಿನಗಳಾಗಿದೆ, ಅವನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಈ ಹತ್ತು ದಿನಗಳ ಅವಧಿಯಲ್ಲಿ ಶಾರುಖ್ ಹೊರಗಡೆ ಕಾಣಿಸಿಕೊಂಡಿಲ್ಲ. ಅವರು ಬಹಳ ಯಾತನೆಪಡುತ್ತಿದ್ದಾರೆ. ಶಾರುಖ್ ಅವರ ಪತ್ನಿ ಮತ್ತು ಇನ್ನಿಬ್ಬರು ಮಕ್ಕಳು ಸಹ ದುಃಖ ಮತ್ತು ಶಾಕ್​ನಲ್ಲಿದ್ದಾರೆ. ಆರ್ಯನ್ ಖಾನ್ ಫೋನಿನಲ್ಲಿ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಎನ್ ಸಿ ಬಿ ಮತ್ತು ಮುಂಬೈ ಪೊಲೀಸ್ ವಿಚಾರಣೆ ನಡೆಸುತ್ತಿವೆ. ಏತನ್ಮಧ್ಯೆ, ಶಾರುಖ್ ತಮ್ಮ ಶೂಟಿಂಗ್ ಕಮಿಟ್ಮೆಂಟ್​ಗಳನ್ನು ಸ್ಥಗಿತಗೊಳಿಸಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಸ್ಪೇನ್ ನಲ್ಲಿ ನಡೆಯಬೇಕಿದ್ದ ಶೂಟಿಂಗ್ ಸಹ ಮುಂದೂಡಿದ್ದಾರೆ.

ಅತ್ತ ಶಾರುಖ್ ಮಗನ ವಿಚಾರಣೆ ಜೈಲಿನಲ್ಲಿ ನಡೆಯುತ್ತಿದ್ದರೆ, ಅವರನ್ನು ತಮ್ಮ ಉತ್ಪಾದನೆಗಳ ಜಾಹೀರಾತಿಗಾಗಿ ಉಪಯೋಗಿಸಿಕೊಳ್ಳುತ್ತಿರುವ ಕಂಪನಿಗಳು ಅವರನ್ನೊಳಗೊಂಡ ಜಾಹೀರಾತು ಪ್ರಸಾರವಾಗುವುದನ್ನು ತಡೆಹಿಡಿಯಲಾರಂಭಿಸಿವೆ. ಬೈಜೂಸ್ ಲರ್ನಿಂಗ್ ಆಪ್ ಸಂಸ್ಥೆಯು ತನ್ನ ಆಡ್ ಅನ್ನು ನಿಲ್ಲಿಸಿದೆ ಮತ್ತು ಶಾರುಖ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಡ್ರಾಪ್ ಮಾಡುವ ನಿರ್ಧಾರಕ್ಕೆ ಬಂದಿದೆ.

ಈ ಸಂಗತಿ ಬಹಿರಂಗಗೊಳ್ಳುತ್ತಿದ್ದಂತೆ, ಕೆಲ ಸೆಲಿಬ್ರಿಟಿಗಳು ಶಾರುಖ್ ಪರ ನಿಂತು ಬೈಜೂಸ್ ಕ್ರಮವನ್ನು ಟೀಕಿಸುತ್ತಿದ್ದಾರೆ. ಅಲಿ ಫಜಲ್, ಫರ್ಹಾ ಅಲಿ ಖಾನ್ ಮತ್ತು ಬೇರೆ ಸೆಲಿಬ್ರಿಟಿಗಳು ಶಾರುಖ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಅಲಿ ಅವರು ಪಿಂಕ್ ಲಾಯ್ಡ್ ಅವರ ಲೆಜೆಂಡರಿ ಹಾಡನ್ನು ಟ್ವೀಟ್ ಮಾಡಿ ಬೈಜೂಸ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಟ್ವೀಟನ್ನು ರೀಟಾ ಚಡ್ಡಾ ರೀಟ್ವೀಟ್ ಮಾಡಿದ್ದಾರೆ.

ಫರ್ಹಾ ಖಾನ್, ‘ಸಂಸ್ಥೆಗಳು ಶಾರುಖ್ ತಮ್ಮ ಬ್ರ್ಯಾಂಡ್ ಜಾಹೀರಾತುಗಳಿಂದ ತೆಗೆದು ಹಾಕುತ್ತಿರುವ ಬಗ್ಗೆ ಕೇಳಿಸಿಕೊಂಡೆ. ಆದರೆ ಅವರಿಗೆ ಗೊತ್ತಿರದ ವಿಷಯವೇನೆಂದರೆ, ಬ್ರ್ಯಾಂಡ್ ಎಸ್ ಆರ್ ಕೆ ಅವರ ಬ್ರ್ಯಾಂಡ್ಗಿಂತ ದೊಡ್ಡದು,’ ಎಂದು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಆರ್ಯನ್ ಆರ್ಥರ್ ರೋಡ್ ಜೈಲಿನಲ್ಲೇ ಬಂಧಿಯಾಗಿರುತ್ತಾನೆ. ಬುಧವಾರದಂದು ಎನ್ ಸಿ ಬಿ ತನ್ನ ಉತ್ತರವನ್ನು ಸಲ್ಲಿಸಲಿದೆ.

ಇದನ್ನೂ ಓದಿ:  ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ

Click on your DTH Provider to Add TV9 Kannada