AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತ ಪರಮೇಶ್ವರರನ್ನು ಉಪ ಮುಖ್ಯಮಂತ್ರಿ ಮಾಡಬಹುದಾದರೆ ಗೆದ್ದ ಒಬ್ಬ ಮುಸ್ಲಿಂ ನಾಯಕನನ್ನು ಯಾಕೆ ಮಾಡಬಾರದು? ಇಬ್ರಾಹಿಂ

ಸೋತ ಪರಮೇಶ್ವರರನ್ನು ಉಪ ಮುಖ್ಯಮಂತ್ರಿ ಮಾಡಬಹುದಾದರೆ ಗೆದ್ದ ಒಬ್ಬ ಮುಸ್ಲಿಂ ನಾಯಕನನ್ನು ಯಾಕೆ ಮಾಡಬಾರದು? ಇಬ್ರಾಹಿಂ

TV9 Web
| Updated By: ಸುಷ್ಮಾ ಚಕ್ರೆ|

Updated on: Oct 13, 2021 | 9:07 AM

Share

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬ ನಾಯಕನನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಥವಾ ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಪರಿಗಣಿಸದ ಬಗ್ಗೆ ಇಬ್ರಾಹಿ ವಿಷಾದ ವ್ಯಕ್ತಪಡಿಸಿದರು.

ಅಧಿಕಾರದಲ್ಲಿರಲಿ, ಇಲ್ಲದಿರಲಿ ವಿಧಾನ ಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ಸಿ ಎಮ್ ಇಬ್ರಾಹಿಂ ಅವರ ಹೆಸರಿನೊಂದಿಗೆ ಸಿ ಎಮ್ ತಗುಲಿಕೊಂಡೇ ಇರುತ್ತದೆ. ಇಬ್ರಾಹಿಂ ಸದಾ ಸುದ್ದಿಯಲ್ಲಿರುವ ಹಿರಿಯ ನಾಯಕ. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದ ಅವರು ವಾಪಸ್ಸು ತವರಿಗೆ ಹೋಗಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ನೇರಾನೇರ, ನಿರ್ದಾಕ್ಷಿಣ್ಯವಾಗಿ ಮಾತಾಡುವುದು ಅವರ ಸ್ವಭಾವ. ತಮ್ಮ ಪಕ್ಷದವರನ್ನೂ ಇಬ್ರಾಹಿಂ ನಿರ್ಭಿಡೆಯಿದ ಟೀಕಿಸುತ್ತಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡುವಾಗ ತಮ್ಮ ಅಸಮಾಧಾನವನ್ನು ಬಯಲಿಗೆ ಹಾಕಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬ ನಾಯಕನನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಥವಾ ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಪರಿಗಣಿಸದ ಬಗ್ಗೆ ಇಬ್ರಾಹಿ ವಿಷಾದ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಸೋತ ಪರಮೇಶ್ವರ ಅವರನ್ನು ಎಮ್ ಎಲ್ ಸಿ ಮಾಡಿ ಉಪ ಮುಖ್ಯಮಂತ್ರಿ ಮಾಡಬಹುದಾದರೆ ಗೆದ್ದಿರುವ ಒಬ್ಬ ಮುಸ್ಲಿಂ ನಾಯಕನನ್ನು ಯಾಕೆ ಡಿ ಸಿ ಎಮ್ ಮಾಡಬಾರದು ಎಂದು ಅವರು ಪ್ರಶ್ನಿಸಿದರು.

ತಾವು ಹಾಗೆಲ್ಲ ಕೇಳಿದ್ದಕ್ಕೆ ಪಕ್ಷದ ಹಿರಿಯ ನಾಯಕರು ಉಡಾಫೆ ಮತ್ತು ಉದ್ಧಟತನದ ಉತ್ತರಗಳನ್ನು ನೀಡಿದ್ದರಿಂದ ತಮಗೆ ಪಕ್ಷದ ಬಗ್ಗೆ ಭ್ರಮನಿರಸನವಾಗಿದೆ ಎಂದು ಇಬ್ರಾಹಿಂ ಹೇಳಿದರು.

ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಇಬ್ರಾಹಿಂ ಸ್ಪಷ್ಟವಾದ ಉತ್ತರ ನೀಡದೆ ಹಾರಿಕೆ ಮತ್ತು ವಿಡಂಬನಾತ್ಮಕ ಉತ್ತರ ನೀಡಿದರು. ಸಾಮಾನ್ಯವಾಗಿ ಆಮವಾಸ್ಯೆಗಳಂದು ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಪರಿಪಾಠ ಎಂದು ಹೇಳಿದ ಅವರು ಹಿಂದೆ ತಾನು ಜನತಾ ದಳದ ಅಧ್ಯಕ್ಷನಾಗಿದ್ದು ಅಮವಾಸ್ಯೆಯೇ ದಿನವೇ ಎಂದು ನಗುತ್ತಾ ಹೇಳಿದರು.

ಇದನ್ನೂ ಓದಿ:  Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್