Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್

ಮನೆಯ ಮಾಲೀಕ ತಿಂಡಿ ತಿನ್ನುಸುವವರೆಗೆ ಆಹಾರ ಸೇವಿಸುವುದಿಲ್ಲ ಎಂದು ಹಠ ಹಿಡಿದು ಕುಳಿತ ಮುದ್ದಾದ ಬೆಕ್ಕಿನ ಮರಿಯ ವಿಡಿಯೋ ವೈರಲ್​ ಆಗಿದೆ. ಅದ್ಭುತ ವಿಡಿಯೋ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ಇದೆ ನೀವೂ ನೋಡಿ...

Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್
ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ
Follow us
| Updated By: shruti hegde

Updated on:Oct 10, 2021 | 10:20 AM

ಸಾಮಾನ್ಯವಾಗಿ ಮುದ್ದಾದ ಬೆಕ್ಕುಗಳ ಆಟ, ತುಂಟಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಅದೆಷ್ಟೋ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತವೆ. ಮನೆಯ ಮಾಲೀಕ ಹೇಳಿದಂತೆಯೇ ಕೇಳುವ ಈ ಮುದ್ದಾದ ಬೆಕ್ಕಿನ ಮರಿ ಆತ ಕೈಯಾರೆ ತಿಂಡಿ ತಿನಿಸಿದರೆ ಮಾತ್ರ ಆಹಾರ ಸೇವಿಸುತ್ತೇನೆ ಅನ್ನುತ್ತಿದೆ. ಎಷ್ಟು ಪ್ರಯತ್ನಿಸಿದರೂ ಸಹ ಬೆಕ್ಕಿನ ಮರಿ ಆಹಾರ ಸೇವಿಸುತ್ತಿಲ್ಲ. ಈ ಮುದ್ದಾದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಮನೆಯ ಮಾಲೀಕ ಮೊದಲಿಗೆ ಬಟ್ಟಲಿನಲ್ಲಿ ತಿಂಡಿ ನೀಡುತ್ತಾರೆ ಆದರೆ ಬೆಕ್ಕು ಮುಖವನ್ನು ತಿರುಗಿಸಿಕೊಳ್ಳುತ್ತದೆ. ಪುನಃ ಬಟ್ಟಲಿನಲ್ಲಿಯೇ ಆಹಾರ ನೀಡುತ್ತಾರೆ ಆದರೂ ಸಹ ಬೆಕ್ಕಿನ ಮರಿ ತಿಂಡಿ ತಿನ್ನುವುದಿಲ್ಲ. ಬಳಿಕ ಕೈಗಳಿಂದ ಆಹಾರ ನೀಡುವಂತೆ ತೋರಿಸುತ್ತದೆ. ಆ ನಂತರ ಮನೆಯ ಮಾಲೀಕ ಕೈಗಳಲ್ಲಿ ಆಹಾರ ತಿನ್ನಿಸುತ್ತಾನೆ. ಈ ಮುದ್ದಾದ ವಿಡಿಯೋ ಹಲವರಿಗೆ ಇಷ್ಟವಾಗಿದ್ದು ಮುದ್ದಾದ ಬೆಕ್ಕಿನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಅತ್ಯಂತ ಮುದ್ದಾದ ವಿಡಿಯೋ ಎಂದು ಓರ್ವರು ಹೇಳಿದ್ದಾರೆ. ಈ ಬೆಕ್ಕಿನ ಮರಿಯನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ ಎಂದು ಮತ್ತೊರ್ವರು ತಿಳಿಸಿದ್ದಾರೆ. ಕೆಲವರು ಮುದ್ದಾದ ಬೆಕ್ಕನ್ನು ಇಷ್ಟಪಟ್ಟಿದ್ದು ಹೃದಯದ ಎಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Viral Video: ಚಿನ್ನದ ಅಂಗಡಿಯಲ್ಲಿ ಸರ ಕದ್ದು ಪರಾರಿಯಾಗಲು ಸಿದ್ಧರಾಗಿದ್ದ ದಂಪತಿ; ಅಟ್ಟಾಡಿಸಿಕೊಂಡು ಹೋದ ಶ್ವಾನದ ವಿಡಿಯೋ ವೈರಲ್

Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್

Published On - 10:19 am, Sun, 10 October 21