AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್

ಬೆಕ್ಕು ಪಕ್ಷಿಗಳನ್ನು ಓಡಿಸುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಬೆಕ್ಕನ್ನು ಪುಟ್ಟ ಗಿಳಿಯೊಂದು ಹೆದರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾರೆ, ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಈ ವೀಡಿಯೊವನ್ನು ಒಮ್ಮೆ ನೋಡಿ.

Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್
ವಿಡಿಯೋ ವೈರಲ್
TV9 Web
| Edited By: |

Updated on: Oct 09, 2021 | 9:42 AM

Share

ಪ್ರಾಣಿಗಳಿಗೆ ಹೆದರಿ ಪಕ್ಷಿಗಳು ಓಡುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಅದು ಬದಲಾಗಿದೆ. ಪ್ರಾಣಿ-ಪಕ್ಷಿಗಳ ನಡುವಿನ ಒಡನಾಟ ಹೆಚ್ಚು ಜನಪ್ರಿಯವಾಗುತ್ತಿದೆ. ಇನ್ನು ಪ್ರಾಣಿಗಳ ಜತೆಗೆ ಪಕ್ಷಿಗಳು ತುಂಟಾಟವಾಡುವುದು, ತಮಗಿಂತ ದೊಡ್ಡ ಪ್ರಾಣಿಗಳನ್ನು, ಪುಟ್ಟ ಪಕ್ಷಿಯೊಂದು ಹೆದರಿಸುವುದು ಅಚ್ಚರಿಯಂತೆ ಕಂಡುಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದೆ. ಗಿಳಿಗೆ ಹೆದರಿ ಬೆಕ್ಕೊಂದು ಓಡುವ ದೃಶ್ಯ ನೆಟ್ಟಿಗರು ಹುಬ್ಬೆರಿಸುವಂತೆ ಮಾಡಿದೆ.

ಬೆಕ್ಕು ಪಕ್ಷಿಗಳನ್ನು ಓಡಿಸುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಬೆಕ್ಕನ್ನು ಪುಟ್ಟ ಗಿಳಿಯೊಂದು ಹೆದರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾರೆ, ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಈ ವೀಡಿಯೊವನ್ನು ಒಮ್ಮೆ ನೋಡಿ.

ಈ ವಿಡಿಯೋದಲ್ಲಿ ಬೆಕ್ಕೊಂದು ತನ್ನ ಗಮನ ಬೇರೆಡೆಗೆ ಹರಿಸುತ್ತಾ ತನ್ನ ಬಾಲವನ್ನು ಅತ್ತಿಂದ ಇತ್ತ ಅಲುಗಾಡಿಸುತ್ತಿದೆ. ಹೀಗಿರುವಾಗ ಹಿಂದಿನಿಂದ ಬಂದ ಗಿಳಿ ಅಲುಗಾಡುತ್ತಿರುವ ಬಾಲವನ್ನು ತನ್ನ ಕೊಕ್ಕಿನಿಂದ ಕಚ್ಚಲು ಪ್ರಯತ್ನಿಸುತ್ತದೆ. ಇದು ಸಾಧ್ಯವಾಗದಾಗ ತನ್ನ ಕಾಲುಗಳಿಂದಲೂ ಬಾಲವನ್ನು ಮೆಟ್ಟಲು ಪ್ರಯತ್ನಿಸುತ್ತದೆ. ಹೀಗೆ ಗಿಳಿಯ ಚಲನವಲನ ತಿಳಿದ ಬೆಕ್ಕು ಒಮ್ಮೆಗೆ ತಿರುಗಿ ನೋಡುತ್ತದೆ. ಮತ್ತೆ ತನ್ನ ಗಮನವನ್ನು ಮೊದಲಿನೆಡೆಗೆ ಹರಿಸುತ್ತದೆ.

ಇಷ್ಟಕ್ಕೆ ಸುಮ್ಮನಾಗದ ಗಿಳಿ ಮತ್ತೆ ತಾನು ಹೊಸದೇನೋ ನೋಡಿದಂತೆ ಬಾಲವನ್ನು ಗಟ್ಟಿಯಾಗಿ ತನ್ನ ಕೊಕ್ಕುಗಳಿಂದ ಹಿಡಿಯಲು ಮುಂದಾಗುತ್ತದೆ. ಆಗ ಬೆಕ್ಕು ಹೆದರಿ ಅಲ್ಲಿಂದ ಪರಾರಿಯಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಹಾಗೂ ತಮ್ಮ ಪ್ರತಿಕ್ರಿಯೆಯನ್ನು ಕಮೆಂಟ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಆದರೆ ಈ ವಿಡಿಯೋ ಅದೆಲ್ಲವುಗಳಿಂದ ಭಿನ್ನವಾಗಿದೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇದುವರೆಗೆ 13,800 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಕೆಲವು ಕುತೂಹಲಕಾರಿ ಕಮೆಂಟ್‌ಗಳು ಬಂದಿವೆ. ಒಬ್ಬ ವ್ಯಕ್ತಿಯು ನಗುವ ಎಮೋಜಿಯೊಂದಿಗೆ ಹೀಗೆ ಕಮೆಂಟ್ ಮಾಡಿದ್ದಾರೆ ‘ಇದು ಬಹುಶಃ ನಾನು ನೋಡಿದ ಏಕೈಕ ಪಕ್ಷಿ ಬೆಕ್ಕನ್ನು ಹೆದರಿಸಿರುವುದು’. ಇನ್ನೊಬ್ಬ ವ್ಯಕ್ತಿಯು ವ್ಯಂಗ್ಯ ಮಾಡಿದ್ದು ‘ಆಪತ್ತು ತಪ್ಪಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಸಾರ್ವಜನಿಕ ಶೌಚಾಲಯದಿಂದ ಹೊರಬರುತ್ತಿರುವ ದೈತ್ಯ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು; ವಿಡಿಯೋ ವೈರಲ್​

Viral Video: ಹಾವು ರಕ್ಷಕನ ಕೌಶಲ್ಯ ನೋಡಿ ಆಶ್ಚರ್ಯಗೊಂಡ ನೆಟ್ಟಿಗರು; ವಿಡಿಯೋ ವೈರಲ್​

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ