AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಎಸ್ ಎನ್ ಎಲ್ ಪುನಶ್ಚೇತನಗೊಳ್ಳುತ್ತಿದೆಯೇ? ಕೇಂದ್ರ ಸಚಿವ ಅಶ್ವಿನಿ ವೈಷ್ಣವ್  4ಜಿ ಸೇವೆ ಬಗ್ಗೆ ಮಾತಾಡುತ್ತಿದ್ದಾರೆ!

ಬಿ ಎಸ್ ಎನ್ ಎಲ್ ಪುನಶ್ಚೇತನಗೊಳ್ಳುತ್ತಿದೆಯೇ? ಕೇಂದ್ರ ಸಚಿವ ಅಶ್ವಿನಿ ವೈಷ್ಣವ್  4ಜಿ ಸೇವೆ ಬಗ್ಗೆ ಮಾತಾಡುತ್ತಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 12, 2021 | 8:17 PM

Share

ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿ ಎಸ್ ಎನ್ ಎಲ್) ಕುರಿತು ಕೆಲ ವರ್ಷಗಳಿಂದ ನಾವು ಹಲವಾರು ವದಂತಿಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಅದರ ಆಪರೇಷನ್ ಮುಚ್ಚಲಾಗುತ್ತದೆ, ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ, ಅದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಹೇಳಲಾಗಿದೆ ಎಂಬ ವದಂತಿಗಳು ನಿಮ್ಮ ಕಿವಿಗೂ ಬಿದ್ದಿರಬಹುದು. ಹಾಗೆ ನೋಡಿದರೆ, ಬಿ ಎಸ್ ಎನ್ ಎಲ್ ನೆಟ್ ವರ್ಕ್ಗೆ ಚಂದಾದಾರರಾಗಿರುವರು ಅದು ನೀಡುವ ಸೇವೆ ಬಗ್ಗೆ ಯಾವತ್ತೂ ಸಂತೋಷದಿಂದ ಮಾತಾಡಿದ ಉದಾಹರಣೆಗಳಿಲ್ಲ. ಮೊದಲು ಬಿ ಎಸ್ ಎನ್ […]

ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿ ಎಸ್ ಎನ್ ಎಲ್) ಕುರಿತು ಕೆಲ ವರ್ಷಗಳಿಂದ ನಾವು ಹಲವಾರು ವದಂತಿಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಅದರ ಆಪರೇಷನ್ ಮುಚ್ಚಲಾಗುತ್ತದೆ, ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ, ಅದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಹೇಳಲಾಗಿದೆ ಎಂಬ ವದಂತಿಗಳು ನಿಮ್ಮ ಕಿವಿಗೂ ಬಿದ್ದಿರಬಹುದು. ಹಾಗೆ ನೋಡಿದರೆ, ಬಿ ಎಸ್ ಎನ್ ಎಲ್ ನೆಟ್ ವರ್ಕ್ಗೆ ಚಂದಾದಾರರಾಗಿರುವರು ಅದು ನೀಡುವ ಸೇವೆ ಬಗ್ಗೆ ಯಾವತ್ತೂ ಸಂತೋಷದಿಂದ ಮಾತಾಡಿದ ಉದಾಹರಣೆಗಳಿಲ್ಲ. ಮೊದಲು ಬಿ ಎಸ್ ಎನ್ ಎಲ್ ಚಂದಾದಾರರಾಗಿದ್ದವರು, ಅದನ್ನು ಬಿಟ್ಟು ಬೇರೆ ನೆಟ್ ವರ್ಕ್​ಗೆ ಶಿಫ್ಟ್ ಅಗಿರುವ ಎಷ್ಟೋ ದೃಷ್ಟಾಂತಗಳು ನಮ್ಮ ಎದುರಿವೆ.

ಆದರೆ, ನಮಗೆ ಈಗ ಸಿಕ್ಕಿರುವ ಮಾಹಿತಿ ಈ ಎಲ್ಲ ಅಂಶಗಳಿಗೆ ತದ್ವಿರುದ್ಧವಾಗಿದೆ. ಯಾಕೆ ಗೊತ್ತಾ? ಬಿ ಎಸ್ ಎನ್ ಎಲ್ 4ಜಿ ನೆಟ್ ವರ್ಕ್ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸುವ ದಿಶೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ. ಇದು ನಂಬಲು ಸ್ವಲ್ಪ ಕಷ್ಟದ ವಿಷಯವಾದರೂ ನಿಜ.

ಹಿಂದೆ, ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿದ್ದು ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಪುಟದಲ್ಲಿ ರೇಲ್ವೇಸ್, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರು ಟ್ವೀಟೊಂದನ್ನು ಮಾಡಿ, ‘ಭಾರತದಲ್ಲೇ ವಿನ್ಯಾಸಗೊಂಡು ತಯಾರಾಗಿರುವ ಬಿ ಎಸ್ ಎನ್ ಎಲ್ 4ಜಿ ನೆಟ್ ವರ್ಕ್ನಿಂದ ಮೊಟ್ಟ ಮೊದಲ ಕರೆ ಮಾಡಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ್ ವಿಶನ್ ರೂಪು ತಳೆಯುತ್ತಿದೆ,’ ಎಂದು ಹೇಳಿದ್ದಾರೆ.

ಬಿ ಎಸ್ ಎನ್ ಎಲ್ ಪುನಶ್ಚೇತನಗೊಂಡು ಬೇರೆ ನೆಟ್ ವರ್ಕ್ಗಳನ್ನು ಹಿಂದಿಕ್ಕಿ ಜನಪ್ರಿಯ ನೆಟ್ ವರ್ಕ್ ಅನಿಸಿಕೊಂಡರೆ, ಭಾರತೀಯರೆಲ್ಲ ಸಂತೋಷಪಡುತ್ತಾರೆ. ಆದರೆ ವಿಪರ್ಯಾಸದ ಸಂಗತಿಯೆಂದರೆ, ಇತರ ಸಂಸ್ಥೆಗಳೆಲ್ಲ 5ಜಿ ಸೇವೆ ನೀಡುವತ್ತ ದಾಪುಗಾಲು ಇಟ್ಟಿದ್ದರೆ, ಬಿ ಎಸ್ ಎನ್ ಎಲ್ ಇನ್ನೂ 2 ವರ್ಷಗಳ ನಂತರ 4ಜಿ ಸೇವೆ ಒದಗಿಸುತ್ತದಂತೆ.

ಇದನ್ನೂ ಓದಿ:  Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್