ಎಮ್ ಜಿ ಮೋಟಾರ್ ಇಂಡಿಯ ಮಿಡ್-ಸೈಜ್ ಎಸ್​ಯುವಿ ಎಮ್ ಜಿ ಅಸ್ಟರ್ ಕಾರನ್ನು ಲಾಂಚ್ ಮಾಡಿದೆ

ಎಮ್ ಜಿ ಆಸ್ಟರ್ ಕಾರಿನ ಬುಕಿಂಗ್ ಅಕ್ಟೋಬರ್ 21 ರಿಂದ ಆರಂಭವಾಗಲಿದೆ. ಮಧ್ಯಮ ಗಾತ್ರದ ಎಸ್ ಯು ವಿಯನ್ನು ಎಮ್ ಜಿ ಮೊಟಾರ್ ಅಧಿಕೃತ ವೆಬ್ ಸೈಟ್ ಇಲ್ಲವೇ ಸಂಸ್ಥೆಯ ಅಧಿಕೃತ ಡೀಲರ್ ಮೂಲಕ ಬುಕ್ ಮಾಡಬಹುದಾಗಿದೆ

ಎಮ್ ಜಿ ಮೊಟಾರ್ ಇಂಡಿಯ ಹೊಸ ಅಸ್ಟರ್ ಕಾರನ್ನು ಭಾರತದಲ್ಲಿ ಸೋಮವಾರದಂದು ಲಾಂಚ್ ಮಾಡಿದೆ. ಸೊಗಸಾಗಿ ಕಾಣುತ್ತಿರುವ ಈ ಕಾರಿನ ಎಕ್ಸ್ ಶೋ ರೂಮ್ (ದೆಹಲಿಯಲ್ಲಿ) ಬೆಲೆ ರೂ 9.78 ಲಕ್ಷ ಎಂದು ಹೇಳಲಾಗುತ್ತಿದೆ. ಎಮ್ ಜಿ ಆಸ್ಟರ್ನ ಟಾಪ್-ಆಫ್-ದಿ-ಲೈನ್ ಕಾರಿನ ಬೆಲೆ ರೂ. 16.78 ಲಕ್ಷದವರೆಗೆ ಆಗಲಿದೆ. ಈಗಾಗಲೇ ಸಂಸ್ಥೆಯು ಮಾರ್ಕೆಟ್​ಗೆ ಬಿಡುಗಡೆ ಮಾಡಿರುವ ಎಮ್ ಜಿ ಹೆಕ್ಟರ್ (ಹೆಕ್ಟರ್ 5-ಸೀಟರ್ ಮತ್ತು ಹೆಕ್ಟರ್ ಪ್ಲಸ್6/7-ಸೀಟರ್), ಎಮ್ಜಿ ಜೆಡ್ ಎಸ್ ಇವಿ, ಮತ್ತು ಫ್ಲ್ಯಾಗ್ಶಿಪ್ ಎಮ್ ಜಿ ಗ್ಲಾಸ್ಟರ್ ಕಾರುಗಳ ಸಾಲಿಗೆ ಎಮ್ ಜಿ ಆಸ್ಟರ್ ಸೇರಲಿದೆ. ಮಿಡ್-ಸೈಜ್ ಸೆಗ್ಮೆಂಟ್ ನಲ್ಲಿ ಪ್ರವೇಶ ಪಡೆದಿರುವ ಎಮ್ ಜಿ ಅಸ್ಟರ್ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಕ್, ವೋಕ್ಸ್ ವ್ಯಾಗನ್ ಟೈಗುನ್, ನಿಸ್ಸಾನ್ ಕಿಕ್ಸ್ ಮತ್ತು ರಿನಾಲ್ಟ್ ಡಸ್ಟರ್ ಜೊತೆ ಸ್ಪರ್ಧೆಗೆ ಬೀಳಲಿದೆ.

ಭಾರತದಲ್ಲಿ ಎಮ್ ಜಿ ಆಸ್ಟರ್ ಕಾರಿನ ಬುಕಿಂಗ್ ಅಕ್ಟೋಬರ್ 21 ರಿಂದ ಆರಂಭವಾಗಲಿದೆ. ಮಧ್ಯಮ ಗಾತ್ರದ ಎಸ್ ಯು ವಿಯನ್ನು ಎಮ್ ಜಿ ಮೊಟಾರ್ ಅಧಿಕೃತ ವೆಬ್ ಸೈಟ್ ಇಲ್ಲವೇ ಸಂಸ್ಥೆಯ ಅಧಿಕೃತ ಡೀಲರ್ ಮೂಲಕ ಬುಕ್ ಮಾಡಬಹುದಾಗಿದೆ.

ಕಾರನ್ನು ಪೂರ್ವ-ಕಾಯ್ದಿರಿಸುವಿಕೆಯ ಅವಕಾಶವನ್ನು ಸಂಸ್ಥೆಯು ಸೋಮವಾದಿಂದಲೇ ಕಲ್ಪಿಸಿದೆ. ಎಮ್ ಜಿ ಮೋಟಾರ್ ಇಂಡಿಯ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳ ಆವಧಿಯಲ್ಲಿ ಮೊದಲ ಬ್ಯಾಚ್​​ನ ಭಾಗವಾಗಿ ಸುಮಾರು 5,000 ಎಮ್ ಜಿ ಆಸ್ಟರ್ ಕಾರುಗಳನ್ನು ವಿತರಿಸುವ ಇರಾದೆ ಹೊಂದಿದೆ.

ಎಮ್ ಜಿ ಆಸ್ಟರ್ ಕಾರಿನಲ್ಲಿ ಎರಡು ಎಂಜಿನ್ ಆಫ್ಷನ್​ಗಳಿವೆ. ಮೊದಲನೆಯದ್ದು 1.5 ಲೀಟರ್ ವಿಟಿಐ-ಟೆಕ್ ಸ್ವಾಭಾವಿಕ ಎನಿಸುವ ಪೆಟ್ರೋಲ್ ಎಂಜಿನ್ ಅಗಿದ್ದು ಇದು 110 ಪಿಎಸ್ ಗರಿಷ್ಠ ಪವರ್ ಮತ್ತು 144ಎನ್ ಎಮ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಎಮ್ ಟಿ ಇಲ್ಲವೇ ಒಂದು ಸಿವಿಟಿ ಅಟೋಮ್ಯಾಟಿಕ್ ಜೊತೆ ಹೊಂದಿಸಬಹುದಾಗಿದೆ.

ಲಭ್ಯವಿರುವ ಮತ್ತೊಂದು ಎಂಜಿನ್ ಎಂದರೆ, 140 ಪಿಎಸ್ ಗರಿಷ್ಠ ಪವರ್ ಮತ್ತು 220 ಎನ್ ಎಮ್ ಪೀಕ್ ಟಾರ್ಕ್ ಉತ್ಪಾದಿಸುವ 1.3 ಲೀಟರ್ ಬ್ರಿಟ್ ಡೈನಮಿಕ್ 220 ಟರ್ಬೋ ಮಿಲ್. ಕೇವಲ 6-ಸ್ಪೀಡ್ ಎಟಿ ಟಾರ್ಕ್ ಕನ್ವರ್ಟರ್ ಜೊತೆ ಮಾತ್ರ ಇದನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ:  Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್​

Click on your DTH Provider to Add TV9 Kannada