ಗೌರವ್ ಗುಪ್ತಾಗೆ ಶೋಸ್ಟಾಪರ್ ಆಗಿ ನೆಟ್ಟಿಗರಿಂದ ಭಯಂಕರ ಟ್ರೋಲ್ ಆಗಿರುವ ಕರೀನಾ ಕಪೂರ್ ಖಾನ್!

ರವಿವಾರದಂದು ಕರೀನಾ, ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಜಗಮಗ ಮಿಂಚುತ್ತಿದ್ದ ಬೆಳ್ಳಿ ಬಣ್ಣದ ಗೌನ್ನಲ್ಲಿ ಸೊಂಟ ಬಳುಕಿಸುತ್ತಾ ರ್ಯಾಂಪ್ ವಾಕ್ ಮಾಡಿದಾಗ ನೋಡುಗರು ವ್ಹಾಹ್! ಎಂದು ಉದ್ಗಾರ ತೆಗೆದರು

ಕಪೂರ್ ಖಾಂದಾನಿನ ಪ್ರಾಯಶ: ಎಲ್ಲರಿಗಿಂತ ಸುಂದರ ಮಹಿಳೆ ಕರೀನಾ ಕಪೂರ್ ಅವರಿಗೆ ವಯಸ್ಸು 41 ಅಗಿ ಎರಡು ಮಕ್ಕಳ ತಾಯಿಯಾದರೂ, ಮುಖದಲ್ಲಿ ಕಳೆ, ಇಪ್ಪತ್ತರ ತರುಣಿಯಾಗಿದ್ದಾಗ ಹೊಂದಿದ್ದ ಮೈಮಾಟ, ನಡೆ ಥಳುಕು-ಬಳುಕು ಕೊಂಚವೂ ಬದಲಾಗಿಲ್ಲ ಮಾರಾಯ್ರೇ. ಈಗ ಆವರು ಪಟೌಡಿ ಖಾಂದಾನಿನ ಸೊಸೆ, ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ದಿವಂಗತ ಎಮ್ ಎ ಕೆ ಪಟೌಡಿ ಮತ್ತು ಎಪ್ಪತ್ತರ ದಶಕದ ಸುಂದರ ನಟಿ ಶರ್ಮಿಳಾ ಟ್ಯಾಗೋರ್ ಅವರ ಮಗ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ಮತ್ತು ತೈಮೂರ್ ಹಾಗೂ ಜಹಾಂಗೀರ್ ಹೆಸರಿನ ಮಕ್ಕಳ ತಾಯಿ.

ರವಿವಾರದಂದು ಕರೀನಾ, ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಜಗಮಗ ಮಿಂಚುತ್ತಿದ್ದ ಬೆಳ್ಳಿ ಬಣ್ಣದ ಗೌನ್ನಲ್ಲಿ ಸೊಂಟ ಬಳುಕಿಸುತ್ತಾ ರ್ಯಾಂಪ್ ವಾಕ್ ಮಾಡಿದಾಗ ನೋಡುಗರು ವ್ಹಾಹ್! ಎಂದು ಉದ್ಗಾರ ತೆಗೆದರು. ಎರಡನೇ ಮಗುವಿಗೆ ಜನ್ಮ ನೀಡಿದ ಕೆಲವೇ ತಿಂಗಳುಗಳ ನಂತರ ಕರೀನಾ ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಗೌರವ್ ಗುಪ್ತಾ ಅವರಿಗೆ ಶೋಸ್ಟಾಪರ್ ಆಗಿ ಕಾಣಿಸಿಕೊಂಡರು. ರ್ಯಾಂಪ್ ಮಾಡುವಾಗ ಕರೀನಾ ಆತ್ಮವಿಶ್ವಾಸದಿಂದ ಬೀಗುತ್ತಿದ್ದರು.

ಅದರೆ ಶೋ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಉಡುಪು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆ ನೀಡಿದ್ದರೆ, ತಮ್ಮ ಟ್ರೇಡ್ ಮಾರ್ಕ್ ಕಫ್ತಾನ್ ಉಡುಗೆಯಲ್ಲಿ ರ್ಯಾಂಪ್ ಮಾಡುತ್ತಿದ್ದೆ ಎಂದು ಹೇಳಿದರು.

ನಿಮಗೆ ನೆನಪಿರಬಹುದು, ಕರೀನಾ ಮೊದಲ ಮಗುವಿನ ಗರ್ಭಿಣಿಯಾಗಿದ್ದಾಗಲೂ ರ್ಯಾಂಪ್ ವಾಕ್ ಮಾಡಿದ್ದರು.

ಆದರೆ, ಕರೀನಾ ಅವರ ಈ ರ್ಯಾಂಪ್ ವಾಕ್ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ ಮಾರಾಯ್ರೇ. ನೆಟ್ಟಿಗರು ಅವರ ಬಗ್ಗೆ ಏನೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ನೆಟ್ಟಿಗ, ‘ಆಂಟಿ, ನಿಮ್ಮ ಸಮಯ ಮುಗಿದುಹೋಗಿದೆ,’ ಅಂತ ಹೇಳಿದ್ದಾನೆ. ಮತ್ತೊಬ್ಬ, ‘ನಾನು ಕರೀನಾರನ್ನು ಇಷ್ಟಪಡ್ತೀನಿ, ಆದರೆ, ಅವರ ಕೇಶವಿನ್ಯಾಸ, ಉಡುಗೆ, ಮೇಕ್ ಆಪ್, ನಡಿಗೆ ಎಲ್ಲವೂ ಭಯಂಕರ ಕೆಟ್ಟದ್ದಾಗಿದೆ, ಅವರ ದೇಹ ತೂಕ ಜಾಸ್ತಿಯಾಗಿ ಕೊಂಚ ದಪ್ಪ ಅನಿಸುತ್ತಿದ್ದಾರೆ’ ಎಂದು ಹೇಳಿದ್ದಾನೆ.

ಇನ್ನೊಬ್ಬ, ‘ಮೌಶೀ ಜೀ, ನಿಮ್ಮ ಮೇಕಪ್, ಡ್ರೆಸ್, ವಾಕ್ ಮತ್ತು ನೀವು ಎಲ್ಲ ಬಕ್ವಾಸ್ ಆಗಿದೆ,’ ಎಂದಿದ್ದಾನೆ. ಮತ್ತೊಬ್ಬ, ‘ಅಜ್ಜೀ, ಏನಜ್ಜೀ ನಿನ್ನ ಅವತಾರ,’ ಅಂದಿದ್ದಾನೆ. ಹಾಗೆಯೇ ಇನ್ನೊಬ್ಬ ನೆಟ್ಟಿಗ, ‘ಅವರು ಬಹಳ ಭಯಾನಕವಾಗಿ ಕಾಣುತ್ತಿದ್ದಾರೆ,’ ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ:  ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಜಲಾವೃತ; ವಿಡಿಯೋ ನೋಡಿ

Click on your DTH Provider to Add TV9 Kannada