AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sun and Saturn Conjunction: ಸೂರ್ಯ ಮತ್ತು ಶನಿಯ ಸಂಯೋಗ; ಈ 6 ರಾಶಿಯವರು 1 ತಿಂಗಳು ಜಾಗರೂಕರಾಗಿರಿ

ಸೂರ್ಯ ಮತ್ತು ಶನಿ ಗ್ರಹಗಳ ಸಂಯೋಗವು ಕೆಲವು ರಾಶಿಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ವೃಷಭ, ತುಲಾ, ಮಿಥುನ, ಮಕರ ಮತ್ತು ವೃಶ್ಚಿಕ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳಿ, ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆ ಮತ್ತು ಸಂಬಂಧಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಮುಖ್ಯ. ಈ 30 ದಿನಗಳಲ್ಲಿ ಜಾಗರೂಕತೆಯಿಂದಿರಿ.

Sun and Saturn Conjunction: ಸೂರ್ಯ ಮತ್ತು ಶನಿಯ ಸಂಯೋಗ; ಈ 6 ರಾಶಿಯವರು 1 ತಿಂಗಳು  ಜಾಗರೂಕರಾಗಿರಿ
Sun And Saturn Conjunction
ಅಕ್ಷತಾ ವರ್ಕಾಡಿ
|

Updated on:May 16, 2025 | 10:53 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿ ತಂದೆ ಮತ್ತು ಮಗನಾಗಿದ್ದರೂ, ಇಬ್ಬರೂ ಪರಸ್ಪರ ಬದ್ಧ ವೈರಿಗಳು. ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಸಾತ್ವಿಕ, ಶುಭ ಮತ್ತು ಬೆಳಕಿನ ಮೂಲವೆಂದು ಪರಿಗಣಿಸಲಾಗುತ್ತದೆ, ಆದರೆ ಶನಿಯನ್ನು ತಾಮಸ, ಕಠಿಣ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಜೀವನದಲ್ಲಿ ಹೋರಾಟ ಮತ್ತು ಕತ್ತಲೆಯನ್ನು ಸೃಷ್ಟಿಸುತ್ತದೆ. ಹಾಗಾಗಿ, ಅಂತಹ ಪರಿಸ್ಥಿತಿಯಲ್ಲಿ, ಇವೆರಡರ ಸಂಯೋಗ ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸೂರ್ಯನ ಮೇಲೆ ಶನಿಯ ಓರೆ ನೋಟ:

ಮೇ 15 ರಂದು ಸೂರ್ಯ ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಶನಿಯು ತನ್ನ ದುಷ್ಟ ದೃಷ್ಟಿಯನ್ನು ಸೂರ್ಯನ ಮೇಲೆ ಬೀರುತ್ತಾನೆ. ಇದರ ಪ್ರಭಾವವು ಅನೇಕ ರಾಶಿಗಳಿಗೆ ಹಾನಿಕಾರಕವಾಗಬಹುದು. ಸೂರ್ಯ ಮತ್ತು ಶನಿಯ ಸಂಯೋಜನೆಯು ಕೆಲವು ರಾಶಿಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಯವರು ಇಂದು 30 ದಿನಗಳವರೆಗೆ ಜಾಗರೂಕರಾಗಿರುವುದು ಅಗತ್ಯ.

ವೃಷಭ ರಾಶಿ:

ಸೂರ್ಯ ಮತ್ತು ಶನಿಯ ಈ ಸಂಯೋಜನೆಯ ಪರಿಣಾಮದಿಂದಾಗಿ, ವೃಷಭ ರಾಶಿಯವರು ಅತ್ಯಂತ ಜಾಗರೂಕರಾಗಿರುವುದು ಅಗತ್ಯ. ನಿಮ್ಮ ಅತಿಯಾದ ಕೋಪವು ಕುಟುಂಬ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟುಮಾಡಬಹುದು. ಆದ್ದರಿಂದ, ಈ ರಾಶಿಯ ಜನರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ತುಲಾ ರಾಶಿ:

ತುಲಾ ರಾಶಿಯಲ್ಲಿ ಜನಿಸಿದ ಜನರು ಸೂರ್ಯ ಮತ್ತು ಶನಿಯ ಪ್ರಭಾವದಿಂದಾಗಿ ಕಠಿಣ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ. ಈ ಮೂವತ್ತು ದಿನ ನೋವು ಮತ್ತು ನಿರಾಶೆ ಇರುತ್ತದೆ. ಈ ತಿಂಗಳು ಪೂರ್ತಿ ತಾಳ್ಮೆಯಿಂದಿರಿ. ಅನಗತ್ಯ ಕೋಪ ಮತ್ತು ಆತುರದ ಕ್ರಮಗಳು ಸಮಾಜದಲ್ಲಿ ನಿಮ್ಮ ಸ್ಥಾನವನ್ನು ಮತ್ತಷ್ಟು ಕುಸಿಯುವಂತೆ ಮಾಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಿ.

ಮಿಥುನ ರಾಶಿ:

ಸೂರ್ಯ ಮತ್ತು ಶನಿಯ ಸಂಯೋಗವು ಮಿಥುನ ರಾಶಿಯ ಮೇಲೆ ನೇರ ಪರಿಣಾಮ ಬೀರಲಿದೆ. ಆದ್ದರಿಂದ ಮಿಥುನ ರಾಶಿಯವರು ನಮ್ಮವರೆಂದು ನಂಬಿ ಅಪ್ತರಿಂದಲೇ ಮೋಸ ಹೋಗುವ ಸಾಧ್ಯತೆಯಿದೆ. ಯಾರನ್ನೂ ಅವಲಂಬಿಸಬೇಡಿ. ನಿಮಗಾಗಿ ಕೆಲಸ ಮಾಡುತ್ತಲೇ ಇರಿ. ಕೆಲಸದಲ್ಲಿ ಅಜಾಗರೂಕರಾಗಿರಬೇಡಿ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಮೇಷದಿಂದ ವೃಷಭ ರಾಶಿಗೆ ಬುಧ ಸಂಚಾರ; ಈ 3 ರಾಶಿಗಳ ಲಕ್‌ ಬದಲಾಗಲಿದೆ!

ಮಕರ ರಾಶಿ:

ಈ ಸಮಯದಲ್ಲಿ ಮಕರ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಶನಿಯು ನಿಮ್ಮನ್ನು ಗೊಂದಲಗೊಳಿಸುತ್ತಾನೆ. ಇದರಿಂದಾಗಿ ಕಾರಣಗಳೇ ಇಲ್ಲದೇ ನೀವು ಪದೇ ಪದೇ ಕೋಪಗೊಳ್ಳುವ ಪ್ರಸಂಗ ಎದುರಾಗಬಹುದು. ಆದ್ದರಿಂದ ಸಂಯಮದಿಂದಿರಿ. ಜೊತೆಗೆ ಈ ಸಮಯದಲ್ಲಿ ಹಣಕಾಸಿನ ವ್ಯವಹಾರಗಳಿಂದ ದೂರವಿರಿ. ಯಾಕೆಂದರೆ ನೀವು ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಂಡರೆ, ಅದು ನಿಮಗೆ ನಷ್ಟವನ್ನೇ ಉಂಟುಮಾಡುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರ ಸಂಬಂಧಗಳಲ್ಲಿ ಕಲಹಕ್ಕೆ ಕಾರಣವಾಗಬಹುದು. ನೀವು ಪ್ರೀತಿಪಾತ್ರರಿಂದ ಬೇರ್ಪಡಬೇಕಾಗಬಹುದು. ಆದರೆ ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಪ್ರಯತ್ನಿಸಿ. ಯಾರೊಂದಿಗೂ ಹೆಚ್ಚು ವಾದ ಮಾಡಬೇಡಿ. ಈ ದಿನಗಳಲ್ಲಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 am, Fri, 16 May 25

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು