
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದಾನದ ಮಹತ್ವ ಮತ್ತು ಅದನ್ನು ಸ್ವೀಕರಿಸುವುದರ ಪರಿಣಾಮಗಳ ಬಗ್ಗೆ ಆಳವಾದ ಮಾಹಿತಿಯನ್ನು ನೀಡಿದ್ದಾರೆ. ಸನಾತನ ಧರ್ಮದಲ್ಲಿ ದಾನ ಮಾಡುವುದು ಪುಣ್ಯಕಾರ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ದಾನವು ಪಾಪವನ್ನು ದಹಿಸುತ್ತದೆ ಎಂಬುದು ಧರ್ಮಗ್ರಂಥಗಳಲ್ಲಿ ಸ್ಪಷ್ಟವಾಗಿದೆ.
ಶಕ್ತರಾಗಿರುವ ವ್ಯಕ್ತಿಗಳು, ಅಂದರೆ ಆರೋಗ್ಯವಾಗಿರುವ, ಸ್ವಂತ ಮನೆ ಮತ್ತು ಆದಾಯವಿರುವವರು, ಬಡವರಿಗೆ ಮೀಸಲಾಗಿರುವ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದು ಪಾಪ ಎಂದು ಡಾ. ಗುರೂಜಿಯವರು ವಿವರಿಸಿದ್ದಾರೆ. ರೇಷನ್ ಕಾರ್ಡ್‌ಗಳು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಂತಹ ಸೌಲಭ್ಯಗಳನ್ನು ಅರ್ಹರಿಗೆ ಮಾತ್ರ ನೀಡಬೇಕು. ಶಕ್ತರಾದವರು ಇವುಗಳನ್ನು ಪಡೆದುಕೊಳ್ಳುವುದರಿಂದ ಅವರ ಆರೋಗ್ಯ ಮತ್ತು ಒಟ್ಟಾರೆ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಶಾಸ್ತ್ರಗಳ ಪ್ರಕಾರ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಸಿಗುತ್ತೆ ಅಪಾರ ಪ್ರಯೋಜನ
ಇದರ ಜೊತೆಗೆ, ಬಂಗಾರ, ಅನ್ನ, ಭೂಮಿ ಅಥವಾ ಗೋವುಗಳಂತಹ ದಾನಗಳನ್ನು ಅನರ್ಹರು ಸ್ವೀಕರಿಸುವುದರಿಂದ ಅವರ ಬ್ರಹ್ಮ ತೇಜಸ್ಸು ಕ್ಷೀಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಎಣ್ಣೆ, ಹಾಲು, ಮೊಸರಿನ ದಾನಗಳನ್ನೂ ಸ್ವೀಕರಿಸಬಾರದು. ಬಡ್ಡಿಯನ್ನು ತಿನ್ನುವವರಿಂದ ಪಡೆಯುವ ದಾನವೂ ಕೂಡ ಒಳ್ಳೆಯದಲ್ಲ. ಮೋಸದಿಂದ ಗಳಿಸಿದ ಹಣದಿಂದ ಮಾಡುವ ದಾನವನ್ನು ಸ್ವೀಕರಿಸುವುದೂ ಪಾಪ. ಹಾಗಾಗಿ, ದಾನವನ್ನು ಸ್ವೀಕರಿಸುವಾಗ ಜಾಗೃತಿ ಮತ್ತು ಎಚ್ಚರಿಕೆಯಿಂದ ಇರಬೇಕು ಎಂದು ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ