ಕುಮಾರ ಪರ್ವತದ ತಪ್ಪಲಿನಲ್ಲಿ ನಡೆಯುತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವರ ಪಾದುಕೆ ಪೂಜೆ, ಇದರ ಹಿಂದಿದೆ ಪುರಾಣ ಕಥೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 05, 2024 | 6:49 PM

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಸ್ಥಳ. ಅದರಲ್ಲಿಯೂ ಹಲವಾರು ರೀತಿಯ ಪವಾಡಗಳಿಗೆ ಹೆಸರಾದ ಈ ದೇವಸ್ಥಾನದಲ್ಲಿ ಕೆಲ ರೋಚಕ ಕಥೆಯೂ ಅಡಗಿದೆ. ಸರಿ ಸುಮಾರು 5,000 ಹಳೆಯ ಇತಿಹಾಸವನ್ನು ಹೊಂದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಕುಮಾರಧಾರ ನದಿ ದಡದಲ್ಲಿರುವ ಪವಿತ್ರ ಕ್ಷೇತ್ರವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣಗಳು ತರ್ಕವನ್ನೇ ಮೀರಿಸುವಂತಹುದ್ದಾಗಿದೆ.

ಕುಮಾರ ಪರ್ವತದ ತಪ್ಪಲಿನಲ್ಲಿ ನಡೆಯುತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವರ ಪಾದುಕೆ ಪೂಜೆ, ಇದರ ಹಿಂದಿದೆ ಪುರಾಣ ಕಥೆ
Follow us on

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಸ್ಥಳ. ಅದರಲ್ಲಿಯೂ ಹಲವಾರು ರೀತಿಯ ಪವಾಡಗಳಿಗೆ ಹೆಸರಾದ ಈ ದೇವಸ್ಥಾನದಲ್ಲಿ ಕೆಲ ರೋಚಕ ಕಥೆಯೂ ಅಡಗಿದೆ. ಸರಿಸುಮಾರು 5,000 ಹಳೆಯ ಇತಿಹಾಸವನ್ನು ಹೊಂದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಕುಮಾರಧಾರ ನದಿ ದಡದಲ್ಲಿರುವ ಪವಿತ್ರ ಕ್ಷೇತ್ರವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣಗಳು ತರ್ಕವನ್ನೇ ಮೀರಿಸುವಂತಹುದ್ದಾಗಿದೆ.

ಸುಬ್ರಹ್ಮಣ್ಯ ದೇವಸ್ಥಾನ ಎಷ್ಟು ಪರಿಚಿತವೋ ಹಾಗೆಯೇ ಅಲ್ಲಿನ ಕುಮಾರ ಪರ್ವತವೂ ಕೂಡ ಅಷ್ಟೇ ಪ್ರಸಿದ್ದಿ ಪಡೆದಿರುವಂತ ಜಾಗವಾಗಿದೆ. ಇದರ ತಪ್ಪಲಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾದುಕೆ ಇದ್ದು ಅಲ್ಲಿ ಪೂರ್ವ ಶಿಷ್ಟ ಸಂಪ್ರದಾಯದಂತೆ ದೇಗುಲದ ವತಿಯಿಂದ ವರ್ಷಕ್ಕೆ ಒಂದು ಬಾರಿ ಮಾತ್ರ ಪೂಜೆ ನೆರವೇರುತ್ತದೆ.

“ಬಹುಳ ಷಷ್ಠಿ” ಯಂದು ನಡೆಯುವ ಈ ಪೂಜೆಗೆ ಊರಿನವರು ಅರ್ಚಕರೊಂದಿಗೆ ಆ ಸ್ಥಳಕ್ಕೆ ಹೋಗಿ ಪೂಜೆಯನ್ನು ನೆರವೇರಿಸಿ ಬರುತ್ತಾರೆ. ಈ ಪೂಜೆಗೂ ಅನೇಕ ರೀತಿಯ ಇತಿಹಾಸವಿದೆ ಎನ್ನಲಾಗುತ್ತದೆ.

ಪೌರಾಣಿಕ ಹಿನ್ನೆಲೆಯೇನು?

ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ (ಚಂಪಾಷಷ್ಠಿ)ಯ ದಿನ ಇಂದ್ರನು ತನ್ನ ಮಗಳಾದ ದೇವಸೇನಾಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಸಮ್ಮತಿಸಿದ ಸುಬ್ರಹ್ಮಣ್ಯನು ಅಲ್ಲಿಯೇ ಆಕೆಯನ್ನು ವಿವಾಹವಾಗುತ್ತಾನೆ. ಬಳಿಕ ನೆರೆದಿರುವವರು ಅವನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಕುಮಾರ ಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಮೂಡಿಬಂದಿರುವುದು ಕಾಣುತ್ತದೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ “ಬಹುಳ ಷಷ್ಠಿ” ಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಇನ್ನು ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರ ಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣದಲ್ಲಿ ಉಲ್ಲೇಖಿಸಾಲಾಗಿದೆ.

ಈ ಪರ್ವತದ ಮೇಲಿರುವ ಶಿವನ ದೇವಸ್ಥಾನದಲ್ಲಿಯೂ ಕೂಡ ವರ್ಷದಲ್ಲಿ ಒಂದು ಬಾರಿ ಪೂಜೆ ನಡೆಯುತ್ತದೆ ಎನ್ನಲಾಗುತ್ತದೆ. ದೇಶದ ಮೂಲೆ ಮೂಲೆಯಿಂದ ಚಾರಣ ಪ್ರಿಯರು ಪ್ರಕೃತಿ ಮಾತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕುಮಾರ ಪರ್ವತಕ್ಕೆ ಬರುತ್ತಾರೆ. ಇದು ಕೇವಲ ಚಾರಣಕಷ್ಟೇ ಅಲ್ಲ ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ಸ್ಥಳವಾಗಿದೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಆದಾಯ ಗಳಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ಈ ವಿಷಯಕ್ಕೆ ಸಂಬಂಧ ಪಟ್ಟಂತೆ namma_subrahmanya ಮತ್ತು kumara_parvatha ಎಂಬ ಇನ್ಟಾಗ್ರಾಮ್​​​ ಖಾತೆಯಲ್ಲಿ ಪೂಜೆ ನಡೆಯುತ್ತಿರುವ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ವಿಕ್ಷಿಸಿದವರು ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಕೆಲವರು ಅಲ್ಲಿನ ಹಿನ್ನಲೆ ತಿಳಿದುಕೊಂಡು ಅಚ್ಚರಿ ಪಟ್ಟಿದ್ದಾರೆ. ಏನೇ ಇರಲಿ ಚಾರಣಿಗರಿಗೆ ಇಂತಹ ವಿಷಯಗಳು ತುಂಬಾ ಸಹಕಾರಿಯಾಗಿದೆ. ಅಲ್ಲದೆ ಈ ಜಾಗದ ಹಿನ್ನಲೆ ತಿಳಿಯದವರಿಗೂ ಕೂಡ ಇದೊಂದು ಉಪಯುಕ್ತ ಮಾಹಿತಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:13 pm, Fri, 5 January 24