
ಜಗತ್ತಿನಲ್ಲಿ ಶಿವನನ್ನು ಪೂಜಿಸುವ ಲಕ್ಷಾಂತರ ದೇವಾಲಯಗಳನ್ನು ನೀವು ನೋಡಿರುತ್ತೀರಾ. ಆದರೆ ಇದು ಅಂತಿಂತ ದೇವಸ್ಥಾನವಲ್ಲ. ಕುತೂಹಲ, ಚಮತ್ಕಾರಿಕ, ಊಹೆಗೂ ಮೀರಿದ ವಿಸ್ಮಯವನ್ನು ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದೆ. ಎಷ್ಟೇ ಆಧುನೀಕರಣ ಆದರೂ ಈ ವಿಸ್ಮಯವನ್ನು ಭೇದಿಸಲಾಗಿಲ್ಲ. ಸಂಶೋಧಕರಿಗೆ, ಇತಿಹಾಸ ತಜ್ಞರಿಗೆ ಈ ದೇವಸ್ಥಾನವೊಂದು ಜ್ಞಾನ ಭಂಡಾರವಾಗಿದೆ. ಈ ದೇವಾಲಯದ ನೆರಳು ಭೂಮಿ ಮೇಲೆ ಬೀಳಲ್ಲ ಅದು ಸಾವಿರ ವರ್ಷಗಳಷ್ಟು ಹಳೆಯ ದೇವಸ್ಥಾನ. ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ಎದ್ದು ನಿಂತಿದೆ. ಅಡಿಪಾಯವಿಲ್ಲದೆ (ಫೌಂಡೇಶನ್) ತನ್ನ ನೆರಳನ್ನೂ ಭೂಮಿಗೆ ಸೋಕಿಸದೆ, 216 ಅಡಿ ಎತ್ತರವಿರುವ ಬೃಹತ್ ಆಕಾರದಲ್ಲಿರುವ ಈ ದೇವಸ್ಥಾನವು ತನ್ನ ಅಮೋಘ ವಾಸ್ತುಶಿಲ್ಪ, ಕೆತ್ತನೆಗಳಿಂದ ಇಂದಿಗೂ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ. ಆಧುನಿಕ ಆರ್ಕಿಟೆಕ್ಚರ್ಗಳಿಗೆ ಇಂದಿಗೂ ಅದೊಂದು ವಿಸ್ಮಯದ ಗೂಡಾಗಿದೆ. ಹತ್ತಾರು ಆರ್ಕಿಟೆಕ್ಚರುಗಳು ದಿನಾಲೂ ಈ ದೇವಸ್ಥಾನವನ್ನು ಎಡತಾಕುತ್ತಿರುತ್ತಾರೆ. ಅದೆಷ್ಟು ಸಲ ಇಲ್ಲಿ ಪ್ರವಾಹ ಬಂದಿದೆಯೋ, ಅದೆಷ್ಟು ರಾಜ, ಮಹಾರಾಜರು ಇದರ ಮೇಲೆ ದಾಳಿ ಮಾಡಿದ್ದಾರೋ… ಆದರೆ ಈ ದೇವಸ್ಥಾನದ ಯಾವ ಭಾಗವೂ ಕುಸಿದಿಲ್ಲ. ವಿಶ್ವದ ಏಕೈಕ ಏಕ ಶಿಲಾ ಶಿವ ಲಿಂಗ, ಹಾಗೂ ಪ್ರಪಂಚದ 2ನೇ ಏಕ ಶಿಲಾ ನಂದಿಯನ್ನು ಇಲ್ಲಿ ನೋಡಬಹುದು. ಹೌದು, ನಾನು ಇಷ್ಟೊತ್ತು ಹೇಳಿದ್ದು ಬೆಂಗಳೂರಿನಿಂದ ಕೇವಲ 390 ಕಿಲೋ ಮೀಟರ್ ದೂರದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯದ ಬಗ್ಗೆ. ಇದು ತಮಿಳುನಾಡಿನಲ್ಲಿದೆ. ಕಾವೇರಿ ನದಿಯ ತಟದಲ್ಲಿರುವ ತಂಜಾವೂರಿನ ಬೃಹದೀಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ. ಇದನ್ನು ಪೆರಿಯ ಕೋವಿಲ್, ರಾಜರಾಜೇಶ್ವರ ದೇವಸ್ಥಾನ ಮತ್ತು ರಾಜರಾಜೇಶ್ವರಂ ಎಂದೂ...