AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TTD Online Booking: ತಿರುಪತಿ ಭಕ್ತರಿಗೆ ಸಿಹಿ ಸುದ್ದಿ; ಜುಲೈ ತಿಂಗಳ 300ರೂ. ದರ್ಶನ ಟಿಕೆಟ್ ಕೋಟಾ ಬಿಡುಗಡೆ; ಕೂಡಲೇ ಬುಕ್ ಮಾಡಿ

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ 2026ರ ಜುಲೈ ತಿಂಗಳ ದರ್ಶನ ಕೋಟಾವನ್ನು TTD ಬಿಡುಗಡೆ ಮಾಡಿದೆ. 300ರೂ. ವಿಶೇಷ ಪ್ರವೇಶ ದರ್ಶನ ಹಾಗೂ ಕೊಠಡಿ ಬುಕಿಂಗ್ ಇಂದಿನಿಂದ ಆರಂಭವಾಗುತ್ತಿದೆ. ಭಕ್ತರು ಮಧ್ಯವರ್ತಿಗಳನ್ನು ನಂಬದೆ, TTD ಅಧಿಕೃತ ವೆಬ್‌ಸೈಟ್ ಮೂಲಕವೇ ಟಿಕೆಟ್ ಕಾಯ್ದಿರಿಸಲು ಸೂಚಿಸಲಾಗಿದೆ. ರಜೆಗಳ ಕಾರಣ ಅಧಿಕ ಬೇಡಿಕೆ ಇರುವುದರಿಂದ, ಬೇಗನೆ ಬುಕ್ ಮಾಡಿಕೊಳ್ಳಿ.

TTD Online Booking: ತಿರುಪತಿ ಭಕ್ತರಿಗೆ ಸಿಹಿ ಸುದ್ದಿ; ಜುಲೈ ತಿಂಗಳ 300ರೂ. ದರ್ಶನ ಟಿಕೆಟ್ ಕೋಟಾ ಬಿಡುಗಡೆ; ಕೂಡಲೇ ಬುಕ್ ಮಾಡಿ
ತಿರುಪತಿImage Credit source: gemini ai
ಅಕ್ಷತಾ ವರ್ಕಾಡಿ
|

Updated on:Apr 24, 2026 | 10:26 AM

Share

ತಿರುಪತಿ: ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೆ ಪ್ರಮುಖ ಅಪ್‌ಡೇಟ್ ಇಲ್ಲಿದೆ. 2026ರ ಜುಲೈ ತಿಂಗಳ ದರ್ಶನ ಕೋಟಾವನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಇಂದು (ಏಪ್ರಿಲ್ 24) ಅಧಿಕೃತವಾಗಿ ಬಿಡುಗಡೆ ಮಾಡುತ್ತಿದೆ. ಆದ್ದರಿಂದ ತಡಮಾಡದೇ ಟಿಕೆಟ್​ ಬುಕ್​ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಹಂತ ಹಂತವಾಗಿ ಇಲ್ಲಿ ತಿಳಿದುಕೊಳ್ಳಿ.

ಟಿಕೆಟ್ ಬುಕ್ಕಿಂಗ್ ಸಮಯದ ವಿವರ:

ನೀವು ಜುಲೈ ತಿಂಗಳಲ್ಲಿ ದರ್ಶನ ಪಡೆಯಲು ಯೋಜಿಸುತ್ತಿದ್ದರೆ, ಸಮಯದ ಬಗ್ಗೆ ವಿಶೇಷ ಗಮನವಿರಲಿ. 300 ರೂ.ವಿಶೇಷ ಪ್ರವೇಶ ದರ್ಶನ ಇಂದು ಬೆಳಿಗ್ಗೆ 10:00 ಗಂಟೆಗೆ ಆನ್‌ಲೈನ್ ಕೋಟಾ ಬಿಡುಗಡೆಯಾಗಿದೆ. ಇದಲ್ಲದೇ ತಿರುಮಲ ಮತ್ತು ತಿರುಪತಿಯಲ್ಲಿನ ಕೊಠಡಿಗಳ ಬುಕ್ಕಿಂಗ್ ಇಂದು ಮಧ್ಯಾಹ್ನ 3:00 ಗಂಟೆಗೆ ಲಭ್ಯವಾಗಲಿದೆ.

ಮಧ್ಯವರ್ತಿಗಳ ಬಗ್ಗೆ ಎಚ್ಚರವಿರಲಿ:

ದರ್ಶನ ಟಿಕೆಟ್, ಅರ್ಜಿತ ಸೇವೆಗಳು ಅಥವಾ ವಸತಿ ಸೌಕರ್ಯದ ಹೆಸರಿನಲ್ಲಿ ಭಕ್ತರನ್ನು ವಂಚಿಸುವ ಜಾಲದ ಬಗ್ಗೆ ಟಿಟಿಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಬ್ರೋಕರ್ ಅಥವಾ ಮಧ್ಯವರ್ತಿಗಳ ಮೂಲಕ ಟಿಕೆಟ್ ಪಡೆಯಲು ಪ್ರಯತ್ನಿಸಬೇಡಿ. ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮೂಲಕವೇ ಬುಕ್ಕಿಂಗ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಬುಕ್ಕಿಂಗ್ ಮಾಡುವುದು ಹೇಗೆ?

  • ಟಿಟಿಡಿಯ ಅಧಿಕೃತ ವೆಬ್‌ಸೈಟ್ ttdevasthanams.ap.gov.in ಗೆ ಭೇಟಿ ನೀಡಿ.
  • ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗ್ ಇನ್ ಆಗಿ.
  • ಲಭ್ಯವಿರುವ ದಿನಾಂಕಗಳಲ್ಲಿ ಹಸಿರು ಬಣ್ಣದ ಸ್ಲಾಟ್ ಅನ್ನು ಆಯ್ಕೆ ಮಾಡಿ.
  • ಭಕ್ತರ ಆಧಾರ್ ಕಾರ್ಡ್ ವಿವರಗಳನ್ನು ಸರಿಯಾಗಿ ನಮೂದಿಸಿ.
  • ಆನ್‌ಲೈನ್ ಮೂಲಕ ಹಣ ಪಾವತಿಸಿ, ನಿಮ್ಮ ಟಿಕೆಟ್ ಅನ್ನು ಪ್ರಿಂಟ್ ಪಡೆದುಕೊಳ್ಳಿ.

ನೆನಪಿರಲಿ: ಜುಲೈ ತಿಂಗಳಲ್ಲಿ ರಜೆಗಳು ಹೆಚ್ಚಿರುವುದರಿಂದ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಆದ್ದರಿಂದ ಟಿಕೆಟ್‌ಗಳು ಅತಿ ವೇಗವಾಗಿ ಖಾಲಿಯಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿಯೇ ಲಾಗ್ ಇನ್ ಆಗಿ ಸಿದ್ಧರಿರುವುದು ಉತ್ತಮ. ಇದಲ್ಲದೇ ಹೊರಡುವ ಮುನ್ನ ಟಿಟಿಡಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 24 April 26

Follow Us