ಈ ಯಾತ್ರಾಸ್ಥಳದಲ್ಲಿ 99 ಲಕ್ಷ 99 ಸಾವಿರದ 999 ವಿಗ್ರಹಗಳು ಇವೆ! ಕೋಟಿಗೆ ಒಂದೇ ಒಂದು ವಿಗ್ರಹ ಕಡಿಮೆಯಿದೆ! ಏನಿದರ ಮರ್ಮ?

| Updated By: ಆಯೇಷಾ ಬಾನು

Updated on: Aug 18, 2021 | 8:09 AM

Unakoti: ಭಾರತದ ಈಶಾನ್ಯ ಭಾಗದಲ್ಲಿ ತ್ರಿಪುರಾದ ಉನಾಕೋಟಿ ಎಂಬ ಯಾತ್ರಾರ್ಥಿ ಸ್ಥಳದಲ್ಲಿ 99,99,999 ವಿಗ್ರಹಗಳು ಶತಶತಮಾನಗಳ ಹಿಂದೆಯೇ ನಿರ್ಮಾಣಗೊಂಡಿವೆ! ಆದರೆ ಕೋಟಿ ವಿಗ್ರಹಕ್ಕೆ ಒಂದೇ ಒಂದು ಕಡಿಮೆಯಿದೆ!

ಈ ಯಾತ್ರಾಸ್ಥಳದಲ್ಲಿ 99 ಲಕ್ಷ 99 ಸಾವಿರದ 999 ವಿಗ್ರಹಗಳು ಇವೆ! ಕೋಟಿಗೆ ಒಂದೇ ಒಂದು ವಿಗ್ರಹ ಕಡಿಮೆಯಿದೆ! ಏನಿದರ ಮರ್ಮ?
ಆ ಯಾತ್ರಾಸ್ಥಳದಲ್ಲಿ 99 ಲಕ್ಷ 99 ಸಾವಿರದ 999 ವಿಗ್ರಹ ಇವೆ! ಕೋಟಿಗೆ ಒಂದೇ ಒಂದು ವಿಗ್ರಹ ಕಡಿಮೆಯಿದೆ! ಏನಿದರ ಮರ್ಮ?
Follow us on

ಭಾರತದ ಈಶಾನ್ಯ ಭಾಗದಲ್ಲಿ ನಿಜಕ್ಕೂ ಹಲವಾರು ಪೌರಾಣಿಕ ದೇಗುಲಗಳು ಸ್ಥಾಪಿತವಾಗಿವೆ. ಅಸ್ಸಾಂ, ತ್ರಿಪುರಾ ಹೀಗೆ ಅನೇಕ ಈಶಾನ್ಯ ರಾಜ್ಯಗಳಲ್ಲಿ ನೂರಾರು ವರ್ಷಗಳ ಐತಿಹ್ಯವಿರುವ ಭಕ್ತಿ ಪರಾಕಾಷ್ಠೆಯ ದೇವಸ್ಥಾನಗಳು ಇವೆ. ನೆರೆಯ ನೇಪಾಳದಲ್ಲಿಯೂ ಹಿಂಗೂ ದೇಗುಲಗಳಿಗೆ ಕೊರತೆಯೇನೂ ಇಲ್ಲ. ಇದೆಲ್ಲದರ ಮಧ್ಯೆ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಒಂದು ತೀರ್ಥ ಸ್ಥಳ ಇದೆ (Unakoti District, Tripura). ಅದನ್ನು 7 ರಿಂದ 9 ನೇ ಶತಮಾನ ನಡುವಣ ಕಾಲದಲ್ಲಿ ನಿರ್ಮಿಸಲಾಗಿದೆ. ಅದರ ಹೆಸರು ಉನಾಕೋಟಿ.

ಈ ಉನಾಕೋಟಿ ಯಾತ್ರಾರ್ಥಿ ಸ್ಥಳದಲ್ಲಿ ಭಕ್ತಿಭಾವ ಉಕ್ಕಿ ಹರಿಯುತ್ತಿದೆ. ಜೊತೆಗೆ ಇಲ್ಲಿಒಂದು ವೈಶಿಷ್ಟ್ಯವೂ ಇದೆ. ಇದು ಮೂಲತಃ ಶೈವ ಸಂಪ್ರದಾಯದ ದೇಗುಲ. ಅಂದ್ರೆ ಇದು ಶಿವನ ದೇವಾಲಯ. ಕಲ್ಲಿನ ಕೆತ್ತನೆಗಳಿಂದ ಮಾಡಿದ, ಉಬ್ಬುಶಿಲ್ಪಗಳು ಹರಿಯುವ ನೀರಿನ ಜಲಪಾತಗಳು ಯಾತ್ರಾರ್ಥಿ ಸ್ಥಳದ ಸೊಬಗನ್ನು ಹೆಚ್ಚಿಸಿವೆ.

ಈ ಯಾತ್ರಾರ್ಥಿ ಸ್ಥಳಕ್ಕೆ ಉನಾಕೋಟಿ (Unakoti) ಎಂಬ ಹೆಸರು ಯಾಕೆ ಬಂದಿದೆ ಎಂಬುದೂ ಸೋಜಿಗದ ವಿಚಾರ. ಉನಾಕೋಟಿ ಅಂದರೆ ಒಂದು ಕೋಟಿಗೆ ಒಂದೇ ಒಂದು ಕಡಿಮೆ ಎಂದು ಅರ್ಥ. ಅಂದರೆ ಇಲ್ಲಿ 99 ಲಕ್ಷ 99 ಸಾವಿರದ 999 ವಿಗ್ರಹಗಳು, ಮೂರ್ತಿಗಳು ಶತಶತಮಾನಗಳ ಹಿಂದೆಯೇ ನಿರ್ಮಾಣಗೊಂಡಿವೆ. ಪ್ರತಿ ವರ್ಷ ಇಲ್ಲಿ ಏಪ್ರಿಲ್​ ತಿಂಗಳಲ್ಲಿ ಅಶೋಕಾಷ್ಟಮಿ ಮೇಳ (Ashokastami Mela) ಜರುಗುತ್ತದೆ. ಅಗರ್ತಲಾದಿಂದ (Agartala) 178 ಕಿಮೀ ದೂರದಲ್ಲಿದೆ ಉನಾಕೋಟಿ.

ಉನಾಕೋಟಿ ಸ್ಥಳ ಮಹಾತ್ಮೆ ಏನು?

ಉನಾಕೋಟಿ ತೀರ್ಥಸ್ಥಳದಲ್ಲಿ ಒಂದು ಕೋಟಿ ವಿಗ್ರಹಗಳು ಇಲ್ಲ; ಒಂದೇ ಒಂದು ವಿಗ್ರಹ ಕಡಿಮೆಯಿದೆ! ಏಕೆ ಗೊತ್ತಾ?
ಹಿಂದೂ ಪುರಾಣಗಳ ಪ್ರಕಾರ ಒಮ್ಮೆ ಶಿವ (Lord Shiva) ಕಾಶಿಗೆ ಹೊರಟಿರುತ್ತಾನೆ. ಪ್ರಯಾಣದಲ್ಲಿ ಶಿವ ಸೇರಿದಂತೆ ಒಂದು ಕೋಟಿ ದೇವ ದೇವತೆಗಳು ಜೊತೆಯಾಗಿದ್ದರು. ಒಂದು ರಾತ್ರಿ ಇದೇ ಸ್ಥಳದಲ್ಲಿ ಅವರೆಲ್ಲ ತಂಗಿದ್ದರು. ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎಲ್ಲರೂ ಎದ್ದು ಕಾಶಿಗೆ ಪ್ರಯಾಣ ಮುಂದುವರಿಸಬೇಕು ಎಂದು ಹಿಂದಿನ ರಾತ್ರಿಯೇ ಶಿವ ಅವರಿಗೆಲ್ಲ ಸೂಚನೆ ನೀಡಿದ್ದ.

ಆದರೆ ಬೆಳಗ್ಗೆ ವೇಳೆಗೆ ಶಿವನನ್ನು ಬಿಟ್ಟು ಬೇರೆ ಯಾರೂ ಎದ್ದು ಪ್ರಯಾಣಕ್ಕೆ ಸಿದ್ಧವಾಗಿರಲಿಲ್ಲ. ಇದರಿಂದ ಕೋಪಗೊಂಡ ಶಿವ ಅವರನ್ನೆಲ್ಲಾ ಅಲ್ಲಿಯೇ ಬಿಟ್ಟು, ಅವರಿಗೆಲ್ಲಾ ಶಪಿಸುತ್ತಾ ತಾನು ಏಕಾಂಗಿಯಾಗಿ ಕಾಶಿಯತ್ತ (Kashi) ಪ್ರಯಾಣ ಬೆಳೆಸಿದ್ದ. ಆದರೆ ಹೋಗುವ ಮೊದಲು ಉಳಿದ 99 ಲಕ್ಷ 99 ಸಾವಿರದ 999 ದೇವ-ದೇವತೆಗಳು ( 99,99,999 gods and goddesses) ಕಲ್ಲಾಗಿ, ವಿಗ್ರಹಗಳಾಗಿ ಅಲ್ಲೇ ಉಳಿಯಲಿ ಎಂದು ಶಾಪ ನೀಡಿದ್ದರಂತೆ.

ಇದರ ಫಲವಾಗಿಯೇ ಉನಾಕೋಟಿಯಲ್ಲಿ ಅವರೆಲ್ಲಾ ಕಲ್ಲಿನ ಮೂರ್ತಿಗಳಾಗಿ ಉಳಿದಿದ್ದಾರೆ (Excluding Shiva – 99 lakh 99 thousand 999 gods). ಮತ್ತು ಶಿವ ಅಲ್ಲಿ ನಿಲ್ಲದೇ ಹೋದ್ದರಿಂದ ಒಂದು ಕೋಟಿಗೆ ಆ ಒಂದು ಸಂಖ್ಯೆ ಕಡಿಮೆಯಾಗಿದೆ!  (Including Shiva 1 crore ) ಕಾಲಾಂತರದಲ್ಲಿ ಇದೊಂದು ಪೌರಾಣಿಕ ಯಾತ್ರಾರ್ಥಿ ಸ್ಥಳವಾಗಿ ಮಾರ್ಪರ್ಟ್ಟಿದೆ. ಇಲ್ಲಿ ಎರಡು ರೀತಿಯ ದೇವ ಮೂರ್ತಿಗಳನ್ನು ಕಾಣಬಹುದು. ಒಂದು, ಕಲ್ಲಿನಿಂದ ಕೆತ್ತಿದ ಮೂರ್ತಿಗಳು ಮತ್ತೊಂದು ಕಲ್ಲು-ಬಂಡೆಗಳ ವಿಗ್ರಹಗಳು. ತ್ರಿಪುರಾ ರಾಜ್ಯದಲ್ಲಿ ಉನಾಕೋಟಿ ಜಿಲ್ಲೆಯಲ್ಲಿ ಉನಾಕೋಟಿ ಎಂಬ ಸ್ಥಳವು ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಸದಾ ಹಸಿರುಮಯವಾಗಿ ಪ್ರಶಾಂತವಾಗಿದೆ.

ಉನಾಕೋಟಿ ಕಾಲಾಂತರದಲ್ಲಿ ಇದೊಂದು ಪೌರಾಣಿಕ ಯಾತ್ರಾರ್ಥಿ ಸ್ಥಳವಾಗಿ ಮಾರ್ಪರ್ಟ್ಟಿದೆ.

ಕಲ್ಲಿನಿಂದ ಕೆತ್ತಿದ ವಿಗ್ರಹಗಳಲ್ಲಿ ಶಿವ ಮತ್ತು ಗಣೇಶನ ಸುಂದರ ಮೂರ್ತಿಗಳನ್ನು ಕಾಣಬಹುದು. ಉನಾಕೋಟೀಶ್ವರ ಕಾಲ ಭೈರವ (Unakotiswara Kal Bhairava) ಎಂಬ ವಿಗ್ರಹವು 30 ಅಡಿ ಎತ್ತರದ್ದಾಗಿದೆ. ತಲೆಯ ಮೇಲಿರುವ ಕೆತ್ತನೆಗಳು 10 ಅಡಿ ಎತ್ತರದ್ದಾಗಿವೆ.

ಉನಾಕೋಟಿ ಯಾತ್ರಾ ಸ್ಥಳವು (Shiva pilgrimage) ಶತಮಾನಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅನೇಕ ಕಲ್ಲಿನ ಕೆತ್ತನೆಗಳೂ ಹಾಳಾಗಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India- ASI) ಇತ್ತೀಚೆಗೆ ಇದನ್ನು ಪಾರಂಪರಿಕ ಸ್ಥಳ (heritage site) ಎಂದು ಗುರುತಿಸಿ, ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಅದಾದ ಮೇಲೆ ಕೇಂದ್ರ ಸರ್ಕಾರವೂ ಸಹ ಇತ್ತೀಚೆಗೆ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಪುನರುತ್ಥಾನ ಕಾರ್ಯ ಭರದಿಂದ ನಡೆದಿದೆ. ಇದರಿಂದ ಉನಾಕೋಟಿ ಯಾತ್ರಾ ಸ್ಥಳವು ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

(unakoti in Tripura where 99 lakh 99 thousand 999 idols established Ashokastami Mela held every year)

Published On - 8:09 am, Wed, 18 August 21