
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇರಿಸದಿದ್ದರೆ ನಕಾರಾತ್ಮಕ ಶಕ್ತಿ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರಿ, ಜೀವನದಲ್ಲಿ ಸಂತೋಷವು ಕಣ್ಮರೆಯಾಗುತ್ತದೆ. ಅಂದರೆ ಕುಟುಂಬ ಕ್ರಮೇಣ ಬಡತನದತ್ತ ಸಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ವಾಸ್ತು ಶಾಸ್ತ್ರದಲ್ಲಿ ನಾವು ಧರಿಸುವ ಚಪ್ಪಲಿಗಳ ಬಗ್ಗೆಯೂ ನಿಯಮಗಳಿವೆ. ವಾಸ್ತು ಶಾಸ್ತ್ರಜ್ಞರು ಹೇಳುವಂತೆ ಚಪ್ಪಲಿಗಳನ್ನು ತಪ್ಪಾಗಿ ಇಡುವುದು, ಅಡುಗೆಮನೆ ಅಥವಾ ಪೂಜಾ ಕೋಣೆಯಲ್ಲಿ ಪಾದರಕ್ಷೆಗಳನ್ನು ಧರಿಸುವುದರಿಂದ ಅಶಾಂತಿ, ಅಡೆತಡೆಗಳು ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ.
ಜ್ಯೋತಿಷಿ ಸಂಜೀತ್ ಕುಮಾರ್ ಮಿಶ್ರಾ ಅವರ ಪ್ರಕಾರ, ಅಡುಗೆಮನೆಗೆ ಶೂ ಧರಿಸಿ ಪ್ರವೇಶಿಸುವ ವ್ಯಕ್ತಿಯ ಮೇಲೆ ಗ್ರಹಗಳು ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಶೂಗಳು ಮಾತ್ರವಲ್ಲ, ಹೊರಗೆ ಧರಿಸುವ ಚಪ್ಪಲಿಗಳು ಸಹ ಈ ವರ್ಗಕ್ಕೆ ಸೇರುತ್ತವೆ. ನಿಮಗೆ ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದಿದ್ದರೆ ಅಡುಗೆಮನೆಗೆ ಬಳಸಲೆಂದೇ ಬೇರೆ ಚಪ್ಪಲಿಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಅಥವಾ ಡೋರ್‌ಮ್ಯಾಟ್ ಬಳಸಿ.
ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಹಳೆಯ ಚಪ್ಪಲಿಗಳು ಶನಿ ಮತ್ತು ರಾಹುವನ್ನು ಆಕರ್ಷಿಸುತ್ತವೆ. ಇದು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವಾಗಲೂ ಸ್ವಚ್ಛವಾದ ಬಟ್ಟೆ ಮತ್ತು ಚಪ್ಪಲಿ ಶೂಗಳನ್ನು ಧರಿಸುವುದರಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ.
ಅನೇಕ ಜನರು ಹೊರಗೆಡೆ ಹಾಕಿಕೊಂಡು ಹೋಗಿದ್ದ ಚಪ್ಪಲಿಗಳನ್ನು ಮನೆಯೊಳಗೆ ಹಾಕಿಕೊಂಡು ಬಂದು ಹಾಸಿಗೆಯ ಬಳಿ ಅವುಗಳನ್ನು ತೆಗೆಯುತ್ತಾರೆ, ಅದು ಸರಿಯಲ್ಲ. ಶೆಲ್ಫ್‌ನಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಶೂಗಳನ್ನು ಇರಿಸಿ. ತಲೆಯ ಬಳಿ ಶೂಗಳನ್ನು ಇಟ್ಟುಕೊಳ್ಳುವುದರಿಂದ ಮಾನಸಿಕ ಸಮಸ್ಯೆಗಳ ಜೊತೆಗೆ ಒತ್ತಡವೂ ಹೆಚ್ಚಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ