ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ನಿಮ್ಮ ಪರ್ಸ್‌ನಲ್ಲಿ ನೀವೇ ಮಾಡುತ್ತಿರುವ ಈ ತಪ್ಪುಗಳೇ ಕಾರಣ!

ಪರ್ಸ್ ನಿರ್ವಹಣೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸದಿರುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಹಳೆಯ ಬಿಲ್‌ಗಳು, ಹಣವನ್ನು ಮುದುಡಿಡುವುದು, ದೇವತೆಗಳ ಫೋಟೋ ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಹಣವನ್ನು ವ್ಯವಸ್ಥಿತವಾಗಿಟ್ಟು, ನಾಣ್ಯ-ನೋಟುಗಳನ್ನು ಪ್ರತ್ಯೇಕಿಸಿ. ಸ್ವಸ್ತಿಕ ಅಥವಾ ಓಂ ಚಿಹ್ನೆ ಇಡುವುದು ಸಮೃದ್ಧಿ ತರುತ್ತದೆ. ಈ ಸರಳ ವಾಸ್ತು ಸಲಹೆಗಳಿಂದ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.

ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?  ನಿಮ್ಮ ಪರ್ಸ್‌ನಲ್ಲಿ ನೀವೇ ಮಾಡುತ್ತಿರುವ ಈ ತಪ್ಪುಗಳೇ ಕಾರಣ!
ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?
Image Credit source: Getty Images

Updated on: Oct 23, 2026 | 10:01 AM

ಸಾಕಷ್ಟು ಜನ ಹಣ ಗಳಿಸಿದರೂ ಅದನ್ನು ಸರಿಯಾಗಿ ನಿರ್ವಹಿಸಲು ವಿಫಲರಾಗುತ್ತಾರೆ ಮತ್ತು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರು ಬಳಸುವ ಪರ್ಸ್​​​​ (Wallet) ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾದರೆ, ಪರ್ಸ್‌ನಲ್ಲಿ ಯಾವ ವಸ್ತುಗಳು ಇರಬಾರದು ಮತ್ತು ಆರ್ಥಿಕ ನಷ್ಟವನ್ನು ತಡೆಯಲು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಳೆಯ ಬಿಲ್‌ ಮತ್ತು ರಶೀದಿಗಳನ್ನು ಪರ್ಸ್‌ನಲ್ಲಿಡಬೇಡಿ:

ಅನೇಕರು ಶಾಪಿಂಗ್ ಮಾಡಿದ ನಂತರ ಬರುವ ಹಳೆಯ ಬಿಲ್‌ಗಳು ಮತ್ತು ರಶೀದಿಗಳನ್ನು ತಮ್ಮ ಪರ್ಸ್‌ನಲ್ಲೇ ಉಳಿಸಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾ ತಪ್ಪು. ಈ ರೀತಿ ಹಳೆಯ ಬಿಲ್‌ಗಳು ಮತ್ತು ಖರ್ಚಿನ ಚೀಟಿಗಳನ್ನು ಪರ್ಸ್‌ನಲ್ಲಿ ಇಡುವುದರಿಂದ ಸಾಲದ ಹೊರೆ ಹೆಚ್ಚಾಗುವುದಲ್ಲದೆ, ಗಳಿಕೆಯ ನಷ್ಟಕ್ಕೂ ಕಾರಣವಾಗುತ್ತದೆ.

ಹಣವನ್ನು ಅಸಡ್ಡೆಯಿಂದ ಮುದುಡಿಡಬೇಡಿ:

ಕೆಲವರು ಹಣವನ್ನು ಯಾವುದೇ ಕ್ರಮವಿಲ್ಲದೆ ಮುದುಡಿ ಪರ್ಸ್‌ನಲ್ಲಿ ತುರುಕುತ್ತಾರೆ. ಆದರೆ ವಾಸ್ತು ಪ್ರಕಾರ ಹಣವನ್ನು ಈ ರೀತಿ ಅಸಡ್ಡೆಯಿಂದ ಇಡುವುದು ಒಳ್ಳೆಯದಲ್ಲ. ಇದು ಹಣದ ಮೇಲಿನ ಗೌರವವನ್ನು ಕಡಿಮೆ ಮಾಡುವುದಲ್ಲದೆ, ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹಣವನ್ನು ಸದಾ ವ್ಯವಸ್ಥಿತವಾಗಿ ಮಡಚಿಡಬೇಕು.

ನಾಣ್ಯಗಳು ಮತ್ತು ನೋಟುಗಳನ್ನು ಪ್ರತ್ಯೇಕವಾಗಿರಿಸಿ:

ಹಣದ ನಿರ್ವಹಣೆಗೆ ಸಂಬಂಧಿಸಿದಂತೆ ವಾಸ್ತು ಕೆಲವು ನಿಯಮಗಳನ್ನು ಸೂಚಿಸಿದೆ. ಪರ್ಸ್​​ ಒಂದು ಬದಿಯಲ್ಲಿ ನಾಣ್ಯಗಳನ್ನು ಮತ್ತು ಇನ್ನೊಂದು ಬದಿಯಲ್ಲಿ ನೋಟುಗಳನ್ನು ಪ್ರತ್ಯೇಕವಾಗಿ ಇಡಬೇಕು. ಈ ಸರಳ ಅಭ್ಯಾಸವು ನಿಮ್ಮ ಬಳಿ ಹಣ ನಿಲ್ಲುವಂತೆ ಮಾಡುವುದಲ್ಲದೆ, ಲಕ್ಷ್ಮಿ ದೇವಿಯ ಕೃಪಾಶೀರ್ವಾದವನ್ನೂ ತಂದುಕೊಡುತ್ತದೆ.

ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ದೇವತೆಗಳು ಹಾಗೂ ಪೂರ್ವಜರ ಫೋಟೋಗಳನ್ನು ಪರ್ಸ್‌ನಲ್ಲಿಡಬೇಡಿ:

ಸಾಮಾನ್ಯವಾಗಿ ಕೆಲವರು ತಮ್ಮ ಕೈಚೀಲದಲ್ಲಿ ದೇವತೆಗಳು, ಗುರುಗಳು ಅಥವಾ ಮೃತರಾದ ಪೂರ್ವಜರ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಪರ್ಸ್‌ನಲ್ಲಿ ಇಂತಹ ಫೋಟೋಗಳನ್ನು ಇಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಪರ್ಸ್‌ನಲ್ಲಿ ಮೃತರ ಫೋಟೋಗಳನ್ನು ಇಡಬಾರದು. ಇದರ ಬದಲಿಗೆ ಪರ್ಸ್‌ನಲ್ಲಿ ‘ಸ್ವಸ್ತಿಕ’ ಅಥವಾ ‘ಓಂ’ ಚಿಹ್ನೆಯನ್ನು ಇಟ್ಟುಕೊಳ್ಳುವುದು ಅತ್ಯಂತ ಮಂಗಳಕರ ಮತ್ತು ಶುಭ ಫಲಗಳನ್ನು ನೀಡುತ್ತದೆ.

ಆರ್ಥಿಕ ಸಮೃದ್ಧಿಗಾಗಿ ವಾಸ್ತು ಪರಿಹಾರಗಳು:

ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸಲು, ನಿಮ್ಮ ಪರ್ಸ್‌ನಲ್ಲಿ ಒಂದು ಸಣ್ಣ ಚದರ ಆಕಾರದ ಚಿನ್ನ ಅಥವಾ ಹಿತ್ತಾಳೆಯ ತುಂಡನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಅಲ್ಲದೆ, ಪ್ರತಿ ಗುರುವಾರ ಆ ಚಿನ್ನ ಅಥವಾ ಹಿತ್ತಾಳೆಯ ತುಂಡನ್ನು ಹೊರತೆಗೆದು ಗಂಗಾಜಲದಿಂದ ಶುಚಿಗೊಳಿಸಬೇಕು. ಈ ಪರಿಹಾರವು ನಿಮ್ಮ ಸಾಲದ ಬಾಧೆಯಿಂದ ಮುಕ್ತಿ ನೀಡಿ, ಸುಖ-ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us