
ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ವಸ್ತುಗಳು ನಮ್ಮ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತವೆ. ಅನೇಕರಿಗೆ ಮಲಗುವಾಗ ತಮ್ಮ ಬೆಲೆಬಾಳುವ ಅಥವಾ ನಿತ್ಯ ಬಳಕೆಯ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ, ಶಾಸ್ತ್ರಗಳ ಪ್ರಕಾರ ದಿಂಬಿನ ಕೆಳಗೆ ಕೆಲವು ನಿರ್ದಿಷ್ಟ ವಸ್ತುಗಳನ್ನು ಇಟ್ಟು ಮಲಗುವುದು ಅಶುಭ ಹಾಗೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಮಲಗುವಾಗ ಕೈಚೀಲವನ್ನು (Wallet/Purse) ದಿಂಬಿನ ಕೆಳಗೆ ಇಡುವುದು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ಹಳೆಯ ಬಿಲ್ ಅಥವಾ ರಸೀದಿಗಳನ್ನು ದಿಂಬಿನ ಅಡಿಯಲ್ಲಿಡುವುದು ಹಣಕಾಸಿನ ಚಿಂತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಳೆಯ ಬಿಲ್ಲುಗಳನ್ನು ಫೈಲ್ನಲ್ಲಿ ತೆಗೆದಿಡಿ ಅಥವಾ ಅಗತ್ಯವಿಲ್ಲದಿದ್ದರೆ ಬಿಸಾಕಿ.
ಮನೆ, ವಾಹನ ಅಥವಾ ಲಾಕರ್ನ ಕೀಲಿಗಳನ್ನು (Keys) ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಮನೆಯಲ್ಲಿ ಮಾನಸಿಕ ಒತ್ತಡದ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಹಾಗೆಯೇ, ವಾಚ್ ಅಥವಾ ಗಡಿಯಾರವನ್ನು ದಿಂಬಿನ ಬಳಿ ಇಡುವುದರಿಂದ ಮನಸ್ಸು ಚಂಚಲಗೊಂಡು, ನಿದ್ರಾಹೀನತೆ ಹಾಗೂ ಅಶಾಂತಿ ಉಂಟಾಗುತ್ತದೆ.
ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ತಡರಾತ್ರಿಯವರೆಗೆ ಮೊಬೈಲ್ ಬಳಸಿ ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದು ಸಕಾರಾತ್ಮಕ ಶಕ್ತಿಯನ್ನು ಕುಗ್ಗಿಸುತ್ತದೆ. ಮತ್ತೊಂದೆಡೆ, ಓದುತ್ತಾ ನಿದ್ರೆಗೆ ಜಾರಿ ಪುಸ್ತಕಗಳನ್ನು ದಿಂಬಿನ ಕೆಳಗೆ ಇಡುವುದು ಸೂಕ್ತವಲ್ಲ. ಪುಸ್ತಕಗಳು ಜ್ಞಾನದೇವತೆ ಸರಸ್ವತಿಯ ಸಂಕೇತವಾಗಿದ್ದು, ಹೀಗೆ ಮಾಡುವುದರಿಂದ ಏಕಾಗ್ರತೆ ಹಾಗೂ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Wed, 28 October 26