Vastu Tips for Couples: ಮನೆಯ ಈ 4 ವಾಸ್ತು ದೋಷಗಳು ವಿಚ್ಛೇದನಕ್ಕೆ ಕಾರಣವಾಗಬಹುದು!

ವಾಸ್ತು ದೋಷಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಿ, ದಂಪತಿಗಳ ನಡುವೆ ನಿರಂತರ ಮಾನಸಿಕ ಒತ್ತಡ, ಜಗಳಗಳು, ತಪ್ಪುಗ್ರಹಿಕೆಗಳು ಮತ್ತು ಸಂಬಂಧದ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಚ್ಛೇದನ ತಪ್ಪಿಸಲು ಕೆಲವು ವಾಸ್ತು ಸಲಹೆಗಳನ್ನು ಪಾಲಿಸಬೇಕು. ಆದ್ದರಿಂದ ಈ ಸಮಸ್ಯೆ ಬರದಂತೆ ತಡೆಯಲು ಕೆಲವು ವಾಸ್ತು ಸಲಹೆಯನ್ನು ಅನುಸರಿಸುವುದು ಅಗತ್ಯ.

Vastu Tips for Couples: ಮನೆಯ ಈ 4 ವಾಸ್ತು ದೋಷಗಳು ವಿಚ್ಛೇದನಕ್ಕೆ ಕಾರಣವಾಗಬಹುದು!
ವಾಸ್ತು ದೋಷ ವಿಚ್ಛೇದನ

Updated on: Dec 10, 2025 | 11:43 AM

ವಾಸ್ತು ಪ್ರಕಾರ, ವಾಸ್ತು ದೋಷಗಳು ಮನೆಯಲ್ಲಿ ನಡೆಯುವ ಸಣ್ಣ ತಪ್ಪುಗಳನ್ನೂ ಸಹ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು. ವಾಸ್ತು ದೋಷಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಿ, ದಂಪತಿಗಳ ನಡುವೆ ನಿರಂತರ ಮಾನಸಿಕ ಒತ್ತಡ, ಜಗಳಗಳು, ತಪ್ಪುಗ್ರಹಿಕೆಗಳು ಮತ್ತು ಸಂಬಂಧದ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ವಿಚ್ಛೇದನದಂತಹ ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಈ ಸಮಸ್ಯೆ ಬರದಂತೆ ತಡೆಯಲು ಕೆಲವು ವಾಸ್ತು ಸಲಹೆಯನ್ನು ಅನುಸರಿಸುವುದು ಅಗತ್ಯ.

ವಾಸ್ತು ಪ್ರಕಾರ, ಈಶಾನ್ಯ ದಿಕ್ಕಿನಲ್ಲಿ ಮಲಗುವುದು (ತಲೆ ಹಾಕಿ ಮಲಗುವುದು) ಸಾಮಾನ್ಯವಾಗಿ ಸೂಕ್ತವಲ್ಲ, ಏಕೆಂದರೆ ಇದು ಆಧ್ಯಾತ್ಮಿಕ ಮತ್ತು ಪವಿತ್ರ ದಿಕ್ಕಾಗಿದ್ದು, ನಿದ್ರೆಯ ಶಕ್ತಿಗಳೊಂದಿಗೆ ಘರ್ಷಿಸಬಹುದು, ಇದರಿಂದ ಮಾನಸಿಕ ಗೊಂದಲ, ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈಶಾನ್ಯ ದಿಕ್ಕಿನಲ್ಲಿ ಮುಖ್ಯ ಮಲಗುವ ಕೋಣೆ ಇದ್ದರೆ ಅದು ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಮನೆಯ ಶಕ್ತಿ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದುರ್ಬಲ ಶಕ್ತಿಯ ಹರಿವು ಭಾವನಾತ್ಮಕ ಅಶಾಂತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ

ಇದಲ್ಲದೇ ಮನೆಯ ದಕ್ಷಿಣ ದಿಕ್ಕು ಎಂದಿಗೂ ಕತ್ತಲೆಯಾಗಿರಬಾರದು.ಇದು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯ ದಕ್ಷಿಣ ಭಾಗದಲ್ಲಿ ವಿದ್ಯುತ್ ವಸ್ತುಗಳನ್ನು ಇಡಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ದಕ್ಷಿಣ ಭಾಗವನ್ನು ನೀಲಿ ಅಥವಾ ಬಿಳಿ ಬಣ್ಣದಲ್ಲಿ ಚಿತ್ರಿಸುವುದರಿಂದ ದಂಪತಿಗಳ ನಡುವಿನ ಭಾವನೆಗಳು ಹೆಚ್ಚಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಮನೆಯಲ್ಲಿ ನಿಯಮಿತವಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಲಕ್ಷ್ಮಿ ದೇವಿಯ ಬಳಿ ಗೋಮತಿ ಚಕ್ರಗಳನ್ನು ಇರಿಸಿ ಪೂಜಿಸಿ. ವಾಸ್ತು ತಜ್ಞರು ನೀವು ಯಾವಾಗಲೂ ಲಕ್ಷ್ಮಿ ದೇವಿಗೆ ಒಂದು ಹನಿ ಕುಂಕುಮವನ್ನು ಹಚ್ಚಬೇಕೆಂದು ಸೂಚಿಸುತ್ತಾರೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಿ ದಂಪತಿ ಮಧ್ಯೆ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 10 December 25