Vastu Tips for Money: ಪರ್ಸ್‌ನಲ್ಲಿ ಈ 4 ವಸ್ತುಗಳಿದ್ದರೆ ಜೀವನದಲ್ಲಿ ಹಣಕ್ಕೆಂದು ಕೊರತೆಯಾಗದು!

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಸಾಲ ಹೆಚ್ಚಾಗುತ್ತಿದೆಯೇ? ವಾಸ್ತು ಸಲಹೆಗಳ ಮೂಲಕ ಆರ್ಥಿಕ ಸಮಸ್ಯೆಯಿಂದ ಹೊರಬರಲು ಸಾಧ್ಯ. ನಿಮ್ಮ ಪರ್ಸ್‌ನಲ್ಲಿ ಅಕ್ಕಿ ಕಾಳು, ಕುಬೇರ ಯಂತ್ರ, ಗೋಮತಿ ಚಕ್ರ ಮತ್ತು ಬೆಳ್ಳಿ ನಾಣ್ಯಗಳನ್ನು ಇರಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ. ಇದು ಸಂಪತ್ತು ಆಕರ್ಷಿಸಿ, ಹಣದ ಹರಿವನ್ನು ಹೆಚ್ಚಿಸಿ ಆರ್ಥಿಕ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

Vastu Tips for Money: ಪರ್ಸ್‌ನಲ್ಲಿ ಈ 4 ವಸ್ತುಗಳಿದ್ದರೆ ಜೀವನದಲ್ಲಿ ಹಣಕ್ಕೆಂದು ಕೊರತೆಯಾಗದು!
ವಾಸ್ತು ಸಲಹೆ

Updated on: Dec 21, 2025 | 6:36 PM

ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೈಯಲ್ಲಿ ಉಳಿಯುವುದೇ ಇಲ್ಲ, ಜೊತೆಗೆ ಸಾಲವೂ ಹೆಚ್ಚಾಗುತ್ತಾ ಹೋಗುತ್ತಿದೆ ಎಂಬ ಸಮಸ್ಯೆಯನ್ನು ನೀವೂ ಕೂಡ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಾಸ್ತು ಸಲಹೆ ಅನುಸರಿಸುವುದು ಅಗತ್ಯ. ಕೆಲವು ಸರಳ ಪರಿಹಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಪ್ರಗತಿಗೆ ಅನೇಕ ಅವಕಾಶಗಳನ್ನು ತರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ನಾಲ್ಕು ವಸ್ತುಗಳನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುವುದರಿಂದ ನೀವು ಆರ್ಥಿಕ ಸಮಸ್ಯೆಯಿಂದ ಹೊರಬರಬಹುದಾಗಿದೆ.

ಅಕ್ಕಿ ಕಾಳು:

ವಾಸ್ತು ಶಾಸ್ತ್ರದ ಪ್ರಕಾರ, ಅಕ್ಕಿ ಕಾಳುಗಳನ್ನು ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಯಾವಾಗಲೂ ನಿಮ್ಮ ಪರ್ಸ್​ನಲ್ಲಿ ಅಕ್ಕಿ ಕಾಳುಗಳನ್ನು ಇರಿಸಿ. ಈ ಸರಳ ಪರಿಹಾರವು ನಿಮಗೆ ಲಕ್ಮೀ ದೇವಿಯ ಆಶೀರ್ವಾದವನ್ನು ತರುತ್ತದೆ, ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ನಿಮ್ಮ ಪರ್ಸ್​ನಲ್ಲಿ ಯಾವಾಗಲೂ ಹಣದಿಂದ ತುಂಬಿರುತ್ತದೆ.

ಕುಬೇರ ಯಂತ್ರ:

ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ಸಂಪತ್ತಿನ ದೇವತೆಯಾಗಿರುವಂತೆ, ಕುಬೇರನನ್ನು ಸಹ ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಯಾವಾಗಲೂ ಕುಬೇರ ಯಂತ್ರವನ್ನು ನಿಮ್ಮ ಪರ್ಸ್​ನಲ್ಲಿ ಇರಿಸಿ, ಅದು ನಿಮ್ಮ ಕೈಯಲ್ಲಿ ಹಣವನ್ನು ಉಳಿಸಿಕೊಳ್ಳುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಗೋಮತಿ ಚಕ್ರ:

ಗೋಮತಿ ಚಕ್ರವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ, ಆದ್ದರಿಂದ ವಾಸ್ತು ಶಾಸ್ತ್ರವು ಗೋಮತಿ ಚಕ್ರವನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುಕೊಳ್ಳಲು ಸಲಹೆ ನೀಡುತ್ತದೆ. ನಿಮ್ಮ ಕೈಚೀಲದಲ್ಲಿ ಗೋಮತಿ ಚಕ್ರವಿದ್ದರೆ, ನೀವು ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.

ಬೆಳ್ಳಿ ನಾಣ್ಯ:

ವಾಸ್ತು ಶಾಸ್ತ್ರವು ಹೇಳುವಂತೆ, ಬೆಳ್ಳಿ ನಾಣ್ಯವನ್ನು ಯಾವಾಗಲೂ ಪರ್ಸ್​ನಲ್ಲಿ ಇಟ್ಟುಕೊಳ್ಳಬೇಕು, ಏಕೆಂದರೆ ಅದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಮತ್ತು ಪರ್ಸ್​ ಹಣದಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ