ವಿವಾಹ ಪಂಚಮಿ ದಿನ ವಿವಾಹ ಮುಹೂರ್ತಕ್ಕೆ ಸುಯೋಗ! ಆದರೂ ಅಂದು ಮದುವೆ ಮಾಡಲು ಜನ ಹಿಂಜರಿಯುತ್ತಾರೆ, ಏಕೆ?

| Updated By: ಸಾಧು ಶ್ರೀನಾಥ್​

Updated on: Nov 26, 2021 | 6:31 AM

ಸ್ವತಃ ಸೀತಾರಾಮ ದಂಪತಿಯೇ ತಮ್ಮ ಜೀವನದಲ್ಲಿ ಅಷ್ಟೊಂದು ಕರ್ಷ ಕಾರ್ಪಣ್ಯಗಳನ್ನು ಎದುರಿಸಬೇಕಾಯಿತು ಎಂದು ಜನರು ಅಂದು ತಾವೂ ಸಹ ಅದೇ ಶುಭದಿನದಂದು ಮದುವೆಯಾಗಿ ಕಷ್ಟಗಳನ್ನು ಅನುಭವಿಸುವುದು ಬೇಡವೆಂದು ಅಂದು ಮದುವೆಯಾಗುವುದಕ್ಕೆ ಹಿಂಜರಿಯುತ್ತಾರೆ.

ವಿವಾಹ ಪಂಚಮಿ ದಿನ ವಿವಾಹ ಮುಹೂರ್ತಕ್ಕೆ ಸುಯೋಗ! ಆದರೂ ಅಂದು ಮದುವೆ ಮಾಡಲು ಜನ ಹಿಂಜರಿಯುತ್ತಾರೆ, ಏಕೆ?
ವಿವಾಹ ಪಂಚಮಿ ದಿನ ಹೆಸರಿಗೆ ತಕ್ಕಂತೆ ವಿವಾಹ ದಿನವಾಗಿದೆ, ಆದರೆ ಅಂದು ಮದುವೆ ಆಗುವುದು ಅಶುಭ, ಯಾಕೆ ಗೊತ್ತಾ?
Follow us on

ವಿವಾಹ ಪಂಚಮಿ ದಿನ (Vivah Panchami 2021) ಹೆಸರಿಗೆ ತಕ್ಕಂತೆ ವಿವಾಹ ದಿನವಾಗಿದೆ. ಆದರೆ ಅಂದು ಮದುವೆ ಆಗುವುದು ಅಶುಭ, ಅಂದು ಮದುವೆ ಮುಹೂರ್ತ ಇಡುವುದಿಲ್ಲ. ವಿವಾಹ ಬಂಧನದಲ್ಲಿ ಏನೇ ಅಡಚಣೆಗಳು ಬರುತ್ತಿದೆ ಅಂದರೆ ಅದನ್ನೆಲ್ಲಾ ಹೋಗಲಾಡಿಸಿಕೊಳ್ಳಲು ವಿವಾಹ ಪಂಚಮಿ ದಿನ ತುಂಬಾ ಶುಭದಾಯಕ ಮತ್ತು ಪ್ರಶಸ್ತವಾಗಿರುತ್ತದೆ. ಆದರೆ ಅಂದು ಜನ ಮದುವೆ ಮಾಡುವುದಕ್ಕೆ ಒಪ್ಪುವುದಿಲ್ಲ. ಯಾಕೆ ಗೊತ್ತಾ? ತಿಳಿಯೋಣ ಬನ್ನೀ. ಅಂದಹಾಗೆ ಶ್ರೀರಾಮ ಮತ್ತು ಸೀತಾದೇವಿ ವಿವಾಹ ವಾರ್ಷಿಕೋತ್ಸವ ದಿನವೇ ವಿವಾಹ ಪಂಚಮಿ ದಿನ. ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಪಂಚಮಿ ದಿನ ಈ ಮಹೋತ್ಸವ ಆಚರಿಸಲಾಗುತ್ತದೆ. ವಿವಾಹ ಪಂಚಮಿ ದಿನ ಶ್ರೀ ಸೀತಾರಾಮ ಮಂದಿರಗಳಲ್ಲಿ ಬಹಳಷ್ಟು ಸಂಭ್ರಮದಿಂದ ವಿವಾಹ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಈ ದಿನದ ಇನ್ನೊಂದು ವಿಶೇಷ ಅಂದರೆ ತುಳಸಿದಾಸರು ತಮ್ಮ ಮಹತ್ವದ ರಾಮಚರಿತಮಾನಸ ಕೃತಿ ರಚನೆಯನ್ನು ಪೂರ್ಣಗೊಳಿಸಿದ ದಿನವೂ ಇದೇ ಆಗಿದೆ.

ರಾಮಚರಿತಮಾನಸ ಶ್ರೀರಾಮ ಪ್ರಭು ಮತ್ತು ಸೀತಾಮಾತೆಗೆ ಅತ್ಯಂತ ಪ್ರಿಯವಾಗಿದೆ. ಹಾಗಾಗಿ ಭಕ್ತರು ಅಂದು ರಾಮಚರಿತಮಾನಸವನ್ನುಪಠಣ ಮಾಡುತ್ತಾರೆ. ಇದರಿಂದ ಭಕ್ತರ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಮನೆ ಮಾಡುತ್ತದೆ. ಈ ಬಾರಿ ವಿವಾಹ ಪಂಚಮಿ ದಿನ ಮುಂದಿನ ತಿಂಗಳು ಡಿಸೆಂಬರ್ 8ರಂದು ಬುಧವಾರ ಬಂದಿದೆ. ಭೃಗು ಸಂಹಿತೆ ಪ್ರಕಾರ ವಿವಾಹ ಪಂಚಮಿ ಮುಹೂರ್ತವು ಮದುವೆಗಳಿಗೆ ನಂದದ ಮುಹೂರ್ತ ದಿನವಾಗಿದೆ. ಅಂದರೆ ಅಂದು ಯಾರು ಬೇಕಾದರೂ ಮದುವೆ ಆಗುವುದಕ್ಕೆ ಪ್ರಶಸ್ತ ದಿನವಾಗಿದೆ. ಆದರೂ ಈ ವಿಶೇಷ ದಿನದಂದು ಮದುವೆ ಮಾಡಿಸಲು ಜನ ಹಿಂಜರಿಯುತ್ತಾರೆ. ಯಾಕೆ ಹೀಗೆ?

ಸೀತಾರಾಮ ಕಲ್ಯಾಣದ ದಿನವೇ ವಿವಾಹ ಪಂಚಮಿ ದಿನ, ಅಂದು ವಿವಾಹ ಮುಹೂರ್ತಕ್ಕೆ ಸುಯೋಗ! ಆದರೂ ಅಂದು ಮದುವೆ ಮಾಡಲು ಜನ ಹಿಂಜರಿಯುತ್ತಾರೆ. ಯಾಕೆ ಹೀಗೆ?

ಕಾರಣ ಒಂದು:
ಶ್ರೀರಾಮ ಪ್ರಭು ಮತ್ತು ಸೀತಾಮಾತೆ ಅಂದರೆ ಜನರಿಗೆ ಆದರ್ಶಪ್ರಾಯ ಜೀವನ ನಡೆಸುವ ದಂಪತಿ ಎಂಬುದಾಗಿದೆ. ಜನ ಜೀವನದಲ್ಲಿ ಉನ್ನತ ಮೌಲ್ಯ, ಪ್ರೇಮ, ಸಮರ್ಪಣಾಭಾವದ ಜೀವನಪಾಠ ಕಲಿಸಿದವರು. ಈ ಆದರ್ಶ ದಂಪತಿ ವಿವಾಹ ಪಂಚಮಿ ದಿನ ಮದುವೆಯಾಗಿದ್ದರೂ ಜನ ಸಹ ಇದೇ ಶುಭ ಘಳಿಗೆಯಲ್ಲಿ ಮದುವೆ ಆಗುವುದನ್ನು ಬಯಸುವುದಿಲ್ಲ. ಏಕೆಂದರೆ ವಿವಾಹದ ಬಳಿಕವಷ್ಟೇ ಆದರ್ಶದ ಶ್ರೀರಾಮ ಪ್ರಭು ಮತ್ತು ಸೀತಾಮಾತೆ ತಮ್ಮ ವಿವಾಹ ಜೀವನದಲ್ಲಿ ಬೇರ್ಪಡುತ್ತಾರೆ. ತುಂಬಾ ಕಷ್ಟಗಳನ್ನು ಎದುರಿಸುತ್ತಾರೆ.

14 ವರ್ಷ ವನವಾಸ ಮಾಡುತ್ತಾರೆ. ಅದಾದ ಮೇಲೆ ಸೀತಾಮಾತೆ ಅಗ್ನಿಪರೀಕ್ಷೆಗೂ ಒಳಗಾಗಬೇಕಾಗುತ್ತದೆ. ಸಾಮಾಜಿಕ ಮಾನ್ಯತೆಗಳಿಗೆ ಬೆಲೆ ಕೊಡುತ್ತಾ, ನಿಷ್ಪಕ್ಷವಾದ ನಡುವಳಿಕೆಯಿಂದ ಮರ್ಯಾದಾ ಪುರುಷೋತ್ತಮ ತನ್ನ ಗರ್ಭವತಿ ಪತ್ನಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ಇದಾದನಂತರ ಸೀತಾಮಾತೆ ತನ್ನ ಜೀವನವನ್ನು ಕಾಡಿನಲ್ಲಿ ಕಳೆಯಬೇಕಾಗುತ್ತದೆ. ಮುಂದೆ ಮಕ್ಕಳನ್ನು ಸಹ ಕಾಡಿನಲ್ಲಿಯೇ ಬೆಳೆಸುವ ಪಡಿಪಾಟಲು ಪಡಬೇಕಾಗುತ್ತದೆ. ಸ್ವತಃ ಸೀತಾರಾಮ ದಂಪತಿಯೇ ತಮ್ಮ ಜೀವನದಲ್ಲಿ ಅಷ್ಟೊಂದು ಕರ್ಷ ಕಾರ್ಪಣ್ಯಗಳನ್ನು ಎದುರಿಸಬೇಕಾಯಿತು ಎಂದು ಜನರು ಅಂದು ತಾವೂ ಸಹ ಅದೇ ಶುಭದಿನದಂದು ಮದುವೆಯಾಗಿ ಕಷ್ಟಗಳನ್ನು ಅನುಭವಿಸುವುದು ಬೇಡವೆಂದು ಅಂದು ಮದುವೆಯಾಗುವುದಕ್ಕೆ ಹಿಂಜರಿಯುತ್ತಾರೆ.

ಕಾರಣ ಎರಡು:
ಪ್ರಭು ಶ್ರೀರಾಮ ಮತ್ತು ಸೀತಾದೇವಿಯ ಮದುವೆಯ ಕಥಾನಕ ಹೀಗಿದೆ. ಇದು ರಾಮಚರಿತಮಾನಸ ಕೃತಿಯಲ್ಲಿ ದಾಖಲಾಗಿದೆ. ಅದನ್ನು ಓದಬೇಕು. ಅದರಿಂದ ಕುಟುಂಬದಲ್ಲಿನ ದುಃಖ ದೂರವಾಗುತ್ತದೆ. ಸುಖ ಸಂಪತ್ತು ವೃದ್ಧಿಸುತ್ತದೆ. ವಿವಾಹ ಪಂಚಮಿ ಪ್ರಸಂಗದ ಪ್ರಕಾರ ತ್ರೇತಾಯುಗದಲ್ಲಿ ವಿಷ್ಣು ಭಗವಂತ ದಶರಥ ರಾಜನ ವಂಶದಲ್ಲಿ ಜೇಷ್ಠ ಪುತ್ರನಾಗಿ ರಾಮನ ರೂಪದಲ್ಲಿ ಜನಿಸಿದ. ತಾಯಿ ಲಕ್ಷ್ಮಿಯು ಜನಕ ಮಹಾರಾಜನ ಮನೆಯಲ್ಲಿ ಸೀತಾಮಾತೆಯ ರೂಪದಲ್ಲಿ ಜನಿಸಿದಳು. ಮಂದಿರಲ್ಲಿ ಸೀತಾಮಾತೆ ಧನಸ್ಸನ್ನು ಸಲೀಸಾಗ ಎತ್ತುತ್ತಾಳೆ. ಅದುವರೆಗೂ ಪರಶುರಾಮ ಮಾತ್ರವೇ ಹಾಗೆ ಧನಸ್ಸನ್ನು ಎತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನಕ ಮಹಾರಾಜ ಒಂದು ವಾಗ್ದಾನ ಮಾಡುತ್ತಾನೆ. ಯಾರು ಭಗವಂತ ವಿಷ್ಣುವಿನ ಆ ಧನಸ್ಸನ್ನು ಎತ್ತುತ್ತಾರೋ ಅವರಿಗೆ ಮಾತ್ರವೇ ಸೀತಾಮಾತೆಯನ್ನು ಕೊಟ್ಟು ಮದುವೆ ಮಾಡಿಸುವುದಾಗಿ ಹೇಳುತ್ತಾನೆ.

ಕಾರಣ ಮೂರು:
ಸೀತಾದೇವಿಯ ಸ್ವಯಂವರ ಆಯೋಜಿಸಿದ್ದಾಗ ವಶಿಷ್ಠ ಮಹರ್ಷಿಯ ಜೊತೆಯಲ್ಲಿ ರಾಮ ಮತ್ತು ಲಕ್ಷಣ ಸಹ ಪ್ರೇಕ್ಷಕರಾಗಿ ಆಸೀನರಾಗಿರುತ್ತಾರೆ. ಸ್ವಯಂವರದ ಅಂಗವಾಗಿ ಅನೇಕ ಮಹಾಮಹಿಮ ರಾಜರು ಧನಸ್ಸನ್ನು ಎತ್ತುವ ಪ್ರಯತ್ನ ನಡೆಸುತ್ತಾರೆ. ಆದರೆ ಅವೆಲ್ಲಾ ನಿಷ್ಫಲವಾಘುತ್ತದೆ. ಧನಸ್ಸನ್ನು ಎತ್ತುವುದಿರಲಿ, ಅಲುಗಾಡಿಸಲೂ ಆಗುವುದಿಲ್ಲ. ಆಗ ಜನಕ ಮಹಾರಾಜ ತನ್ನ ಮಗಳ ಬಗ್ಗೆ ಯೋಚಿಸುತ್ತಾ, ಕರುಣಾಜನಕವಾಗಿ ಸ್ವಯಂವರ ಸಭೆಯಲ್ಲಿ ಯಾರೂ ಧನಸ್ಸನ್ನು ಎತ್ತುವ ಮಹಾಮಹಿಮರು, ಯೋಗ್ಯರು ಇಲ್ಲವೇ ಎಂದು ಪ್ರಶ್ನಿಸುತ್ತಾನೆ. ಆಗ ಜನಕ ಮಹಾರಾಜನನ್ನು ನೋಡುತ್ತಾ ವಶಿಷ್ಠ ಮಹರ್ಷಿಯು ಸ್ವಯಂವರದಲ್ಲಿ ಭಾಗಿಯಾಗುವಂತೆ ರಾಮನಿಗೆ ಸೂಚಿಸುತ್ತಾರೆ. ಗುರುವಿನ ಆಜ್ಞೆ ಶಿರಸಾವಹಿಸಿ ಪಾಲಿಸುತ್ತಾ ಮರ್ಯಾದಾ ಪುರುಷೋತ್ತಮ ಶ್ರೀರಾಮ ಧನಸ್ಸನ್ನು ಸಲೀಸಾಗಿ ಎತ್ತುತ್ತಾನೆ. ಅದರ ಮೇಲೆ ಬಾಣ ಹೂಡುತ್ತಾನೆ. ಆಗ ಧನಸ್ಸು ಮುರಿದು ಹೋಗುತ್ತದೆ. ಅದರಿಂದ ಶ್ರೀರಾಮ ಬಲಾಢ್ಯನೆಂಬುದು ಸೀತಾಮಾತೆಗೆ ಅರಿವಾಗುತ್ತದೆ. ಆಗ ರಾಮನ ಮೇಲೆ ಮೋಹಗೊಳ್ಳುತ್ತಾಳೆ. ತಕ್ಷಣವೇ ಜಯಮಾಲೆಯನ್ನು ರಾಮನ ಕೊರಳಿಗೆ ಹಾಕುತ್ತಾಳೆ. ತನ್ಮೂಲಕ ಸೀತಾ ರಾಮ ಕಲ್ಯಾಣ ನೆರವೇರುತ್ತದೆ.