AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vybhava Lakshmi Rajayoga: ವೈಭವ ಲಕ್ಷ್ಮಿ ರಾಜಯೋಗ; ಶುಕ್ರ-ಚಂದ್ರರ ಸಂಯೋಗದಿಂದ ಈ 4 ರಾಶಿಗೆ ಕುಬೇರ ಯೋಗ!

ಏಪ್ರಿಲ್ 17ರಂದು ಮೇಷ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಅಪರೂಪದ ಸಂಯೋಗದಿಂದ 'ವೈಭವ ಲಕ್ಷ್ಮಿ ರಾಜಯೋಗ' ಸೃಷ್ಟಿಯಾಗಲಿದೆ. ಈ ಶುಭ ಯೋಗವು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದ್ದು, ವಿಶೇಷವಾಗಿ ಮೇಷ, ಕರ್ಕಾಟಕ, ಧನು, ಕುಂಭ ರಾಶಿಗಳ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಥಿಕ ಲಾಭ, ಆರೋಗ್ಯ ಸುಧಾರಣೆ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಈ ರಾಶಿಗಳಿಗಿರಲಿದೆ.

Vybhava Lakshmi Rajayoga: ವೈಭವ ಲಕ್ಷ್ಮಿ ರಾಜಯೋಗ; ಶುಕ್ರ-ಚಂದ್ರರ ಸಂಯೋಗದಿಂದ ಈ 4 ರಾಶಿಗೆ ಕುಬೇರ ಯೋಗ!
ವೈಭವ ಲಕ್ಷ್ಮಿ ರಾಜಯೋಗ
ಅಕ್ಷತಾ ವರ್ಕಾಡಿ
|

Updated on: Apr 17, 2026 | 12:19 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ಮಾನವನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಪ್ರಸ್ತುತ ಶುಕ್ರನು ಈಗಾಗಲೇ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಆದರೆ, ಏಪ್ರಿಲ್ 17 ರಂದು ಮನಃಕಾರಕ ಚಂದ್ರನು ಸಹ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಮೂಲಕ ಮೇಷ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಅಪರೂಪದ ಸಂಯೋಜನೆ ಏರ್ಪಡುತ್ತಿದೆ.

ಈ ಸಂಯೋಗವು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲ್ಪಟ್ಟಿರುವ ‘ವೈಭವ ಲಕ್ಷ್ಮಿ ರಾಜಯೋಗ’ವನ್ನು ಸೃಷ್ಟಿಸುತ್ತಿದೆ. ಈ ರಾಜಯೋಗದ ಪ್ರಭಾವದಿಂದಾಗಿ ವಿಶೇಷವಾಗಿ ನಾಲ್ಕು ರಾಶಿಗಳ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ಆ ಅದೃಷ್ಟವಂತ ರಾಶಿಗಳು ಇಲ್ಲಿವೆ:

ಮೇಷ ರಾಶಿ (Aries):

ಮೇಷ ರಾಶಿಯವರಿಗೆ ಈ ಸಮಯವು ‘ಸುವರ್ಣ ಕಾಲ’ ಎನ್ನಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದ್ದು, ದೈಹಿಕವಾಗಿ ಸಕ್ರಿಯರಾಗಿರುತ್ತೀರಿ. ಬರಬೇಕಿದ್ದ ಬಾಕಿ ಹಣ ಸಮಯಕ್ಕೆ ಸರಿಯಾಗಿ ಕೈ ಸೇರಲಿದೆ. ಉದ್ಯಮಿಗಳಿಗೆ ದೊಡ್ಡ ಮಟ್ಟದ ಪ್ರಾಜೆಕ್ಟ್‌ಗಳು ಸಿಗಲಿವೆ. ಹಳೆಯ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ನಿಮ್ಮದಾಗಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಮತ್ತು ಜೀವನದಲ್ಲಿ ಸಂತೋಷ ನೆಲೆಸಲಿದೆ.

ಕರ್ಕಾಟಕ ರಾಶಿ (Cancer):

ಚಂದ್ರನು ನಿಮ್ಮ ರಾಶ್ಯಾಧಿಪತಿಯಾಗಿರುವುದರಿಂದ, ಈ ಸಂಯೋಗವು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಹೂಡಿಕೆ ಮಾಡಲು ಇದು ಸಕಾಲ. ಈ ಹಿಂದೆ ನೀವು ಮಾಡಿದ ಹೂಡಿಕೆಗಳಿಂದ ಈಗ ನಿರೀಕ್ಷೆಗೂ ಮೀರಿ ಲಾಭ ಬರಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಕೌಟುಂಬಿಕ ಮತ್ತು ವೃತ್ತಿ ಜೀವನದ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳುವಿರಿ. ಸಕಲ ಸೌಕರ್ಯಗಳು ಲಭ್ಯವಾಗಿ ದಿನಗಳು ಸುಗಮವಾಗಿ ಸಾಗಲಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧನು ರಾಶಿ (Sagittarius):

ಧನು ರಾಶಿಯವರಿಗೆ ಇದು ವಿಜಯೋತ್ಸವದ ಸಮಯ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಲಭಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಶುಭ ವಾರ್ತೆ ಕಾದಿದೆ. ಶತ್ರುಗಳ ಕಾಟ ಕಡಿಮೆಯಾಗಿ ನಿಮ್ಮ ಹಾದಿ ಸುಗಮವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಅನಿರೀಕ್ಷಿತವಾಗಿ ಹಣದ ಹರಿವು ಉಂಟಾಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ.

ಕುಂಭ ರಾಶಿ (Aquarius):

ಕುಂಭ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ಲಾಭ ಕಂಡುಬರಲಿದೆ. ನಿಮ್ಮ ಕೆಲಸದ ಬಗ್ಗೆ ನೀವು ತೋರುವ ಏಕಾಗ್ರತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ವ್ಯಾಪಾರಸ್ಥರಿಗೆ ಈ ಅವಧಿಯು ಗರಿಷ್ಠ ಲಾಭ ತಂದುಕೊಡಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕುಂಭ ರಾಶಿಯವರಿಗೆ ಎಲ್ಲ ದಿಕ್ಕುಗಳಿಂದಲೂ ಶುಭ ಫಲಗಳೇ ಲಭಿಸಲಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us