Video: ಬಿಹಾರದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಏಕಶಿಲಾ ಶಿವಲಿಂಗ
ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ 33 ಅಡಿ ಎತ್ತರದ, 210 ಟನ್ ತೂಕದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಿಂದ 2,100 ಕಿ.ಮೀ. ಪ್ರಯಾಣಿಸಿರುವ ಈ ಶಿವಲಿಂಗವು ದೇವಾಲಯಕ್ಕೆ ವಿಶೇಷ ಆಕರ್ಷಣೆಯಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇಶಾದ್ಯಂತದ ಭಕ್ತರು ಆಗಮಿಸಲಿದ್ದಾರೆ.
ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ತಯಾರಿಸಿದ 33 ಅಡಿ ಎತ್ತರ, 210 ಟನ್ ತೂಕದ ಏಕಶಿಲಾ ಶಿವಲಿಂಗವು ರಸ್ತೆ ಮೂಲಕ ಸುಮಾರು 2,100 ಕಿಲೋಮೀಟರ್ ದೂರದಲ್ಲಿರುವ ಚಂಪಾರಣ್ಯಕ್ಕೆ ತೆರಳಿದೆ. ಇದು ವಿರಾಟ್ ರಾಮಾಯಣ ಮಂದಿರಕ್ಕೆ ವಿಶೇಷ ಆಕರ್ಷಣೆಯಾಗಲಿದೆ. ದೇಶಾದ್ಯಂತದ ಪ್ರಮುಖ ಸಂತರು, ವಿದ್ವಾಂಸರು ಮತ್ತು ಸಾವಿರಾರು ಭಕ್ತರು ಪ್ರಾಣ ಪ್ರತಿಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಾಲಯ ಟ್ರಸ್ಟ್ ತಿಳಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 04, 2025 10:35 AM