
1. ಮೇಷ ರಾಶಿ (Aries): ಗಂಡನ ಆಯ್ಕೆಗಾಗಿ ಮೇಷ ರಾಶಿಯವರು ಅತ್ಯುತ್ತಮ ಜನ. ಯುವತಿಯರ ಮನ್ ಪಸಂದ್ ಇವರೇ. ಇವರಲ್ಲಿರುವ ವಿಶೇಷ ಏನೆಂದರೆ ಇವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಎತ್ತಿದ ಕೈ. ಅದು ಮನೆಗೆಲಸಕ್ಕೂ ಸೈ; ಲವ್ ಲೈಫ್ಗೂ ಸೈ. ಇವರು ಅತ್ಯುತ್ತಮ ಗಂಡ ಎನ್ನುವುದರಲ್ಲಿ ಎರಡು ಮಾತಿಲ್ಲ!

2. ಮಿಥುನ ರಾಶಿ (Gemini): ಹೆಂಡತಿ ಬಯಸುವುದು ತನ್ನ ಗಂಡ ಎಷ್ಟೇ ಬ್ಯುಸಿಯಾಗಿದ್ದರೂ ತನ್ನನ್ನು ಎಡತಾಕುತ್ತಿರಬೇಕು ಎಂಬುದು. ಇದು ಎಲ್ಲ ಮಹಿಳೆಯರ ಸುಪ್ತ ಅಭಿಲಾಷೆ. ಅದಕ್ಕೆ ಹೇಳಿಮಾಡಿಸಿದವರು ಈ ಮಿಥುನ ರಾಶಿಯವರು. ತಾವೆಷ್ಟೇ ಬ್ಯುಸಿಯಾಗಿದ್ದರೂ ಮನದನ್ನೆಯತ್ತಲೇ ಇವರ ಧ್ಯಾನವೆಲ್ಲ. ಮನೆ-ಸಂಸಾರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ರಾಶಿಯವರು ಹೆಂಡತಿಗೆ ನಿಷ್ಠರಾಗಿರುತ್ತಾರೆ. ಮಹಿಳೆಯರು ಬಯಸುವುದು ಇದನ್ನೇ ಅಲ್ಲವೇ!?

3. ಸಿಂಹ ರಾಶಿ (Leo): ಇವರು ಬಾಹ್ಯ ಪ್ರಪಂಚದಲ್ಲಿ, ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿ ಗಟ್ಟಿಗರು, ಕಠಿಣವಾಗಿ ವರ್ತಿಸುವವರು. ಅದೇ ಹೆಂಡತಿಯ ವಿಷಯದಲ್ಲಿ, ಮನೆಯ ವಿಚಾರದಲ್ಲಿ ತುಂಬಾ ಸಾಫ್ಟ್, ಮೃದು ಮೃದು. ಹೊರಗೆ ಎಷ್ಟೇ ಬ್ಯುಸಿಯಾಗಿದ್ದರೂ ಮೆಲ್ಲ ಮೆಲ್ಲಗೆ ಹೆಂಡತಿಯತ್ತಲೇ ನುಸುಳುವವರು ಇವರು. ಈ ಗುಣವನ್ನೇ ಅಲ್ಲವೇ ಮಹಿಳೆಯರು ತಮ್ಮ ಗಂಡನಿಂದ ಬಯಸುವುದು.

4. ಕನ್ಯಾ ರಾಶಿ (Virgo): ಹೆಂಡತಿಯ ಸಂತೋಷವೇ ತಮ್ಮ ಸಂತೋಷ ಎಂದು ಬಗೆದು ಅವರನ್ನು ಸದಾ ನಗುನಗುತಾ ಇಟ್ಟಿರುತ್ತಾರೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ. ಹೆಂಡತಿಯ ಎಲ್ಲ ಬೇಕು-ಬೇಡಗಳನ್ನು ಇವರು ಅಚ್ಚುಕಟ್ಟಾಗಿ, ಆದ್ಯತೆಯ ಮೇರೆಗೆ ಪೂರೈಸಿ, ತಾನು ಬೆಸ್ಟ್ ಗಂಡ ಎಂದು ಸಾಬೀತುಪಡಿಸುತ್ತಾರೆ.

5. ಮೀನ ರಾಶಿ (Pisces): ಹೆಂಡತಿ-ಮಕ್ಕಳು, ಸಂಸಾರವೇ ಇವರ ಜೀವನ ಸಾರ. ಮನೆಗೆಲಸದಿಂದ ಹಿಡಿದು ದುಡಿದು ಬರುವ ಕಚೇರಿಯವರೆಗೂ ಎಲ್ಲದರಲ್ಲೂ ಇವರ ಕರಾರುವಕ್ಕು ನಡೆ. ಅದುವೇ ಪತ್ನಿಯನ್ನು ಸಂಪ್ರೀತಗೊಳಿಸುವ ಗುಣಸ್ವಭಾವ. ಹಾಗಾಗಿ ಮೀನ ರಾಶಿಯವರು ಸಹ ಮಹಿಳೆಯರ ಫೇವರೀಟ್!
Published On - 12:46 pm, Thu, 25 November 21