ಭಾರ್ತಿ ಏರ್‌ಟೆಲ್ ಸಂಸ್ಥೆಯು ದೇಶದ 8 ನಗರಗಳಾದ ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್, ಬೆಂಗಳೂರು, ವಾರಣಾಸಿ, ಸಿಲಿಗುರಿ, ಮತ್ತು ನಾಗಪುರಗಳಲ್ಲಿ ತನ್ನ 5ಜಿ ಸೇವೆಗಳನ್ನು ಕಾರ್ಯಾರಂಭಗೊಳಿಸಿದೆ. ಕಂಪನಿಯು ತನ್ನ ಈ ಸೇವೆಗಳನ್ನು ದೇಶಾದ್ಯಂತ ಒದಗಿಸುವ ಪ್ರಕ್ರಿಯೆನ್ನು ಮುಂದುವರೆಸುತ್ತಿರುವಂತೆ ಈ ನಗರಗಳ ಗ್ರಾಹಕರು ಏರ್‌ಟೆಲ್ 5ಜಿ ಪ್ಲಸ್‌ನ ಕಟಿಂಗ್ ಎಡ್ಜ್ ಸೇವೆಗಳನ್ನು ಹಂತ-ಹಂತವಾಗಿ ಆನಂದಿಸಲಿದ್ದಾರೆ. ಈ ಸೇವೆಗಳು ದೇಶದೆಲ್ಲೆಡೆ ವ್ಯಾಪಕವಾಗಿ ಹರಡುವವರೆಗೆ 5ಜಿ ತಂತ್ರಜ್ಞಾನವನ್ನು ಚಾಲನೆಗೊಳಿಸಲಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ಏರ್‌ಟೆಲ್ 5ಜಿ ಪ್ಲಸ್‌ನ ತ್ವರಿತಗತಿಯ ಸೇವೆಗಳ ಅನುಭವವನ್ನು ಸದ್ಯ ಚಾಲನೆಯಲ್ಲಿರುವ ತಮ್ಮ ಡೇಟಾ ಪ್ಲಾನ್‌ಗಳಲ್ಲೇ ಪಡೆಯಲಿದ್ದಾರೆ.
ಏರ್‌ಟೆಲ್ 5ಜಿ ಪ್ಲಸ್ ಸೇವೆಗಳೊಂದಿಗೆ ಮುಂದಿನ ತಲೆಮಾರಿನ ಸಂಪರ್ಕ ಸೌಲಭ್ಯ
ಏರ್‌ಟೆಲ್ 5ಜಿ ಪ್ಲಸ್ ಸೇವೆಯು ವಿಶ್ವಾದ್ಯಂತ ವ್ಯಾಪಕ ಸ್ವೀಕೃತಿಯನ್ನು ಪಡೆದ ಹಾಗೂ ಅತ್ಯಂತ ಅಭಿವೃದ್ಧಿ ಹೊಂದಿದ ಪರಿಸರ ವ್ಯವಸ್ಥೆಯನ್ನೊಳಗೊಂಡ ತಂತ್ರಜ್ಞಾನದ ಆಧಾರದ ಮೇಲೆ ನಡೆಯುತ್ತದೆ. ಏರ್‌ಟೆಲ್ 5ಜಿ ತಂತ್ರಜ್ಞಾನವು ಚಾಲನೆಗೊಂಡಿರುವ ಯಾವುದೇ ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರು ತಮ್ಮ ಸದ್ಯದ 4ಜಿ ಸಿಮ್‌ನಲ್ಲೇ ಏರ್‌ಟೆಲ್ 5ಜಿ ಪ್ಲಸ್ ಅನುಭವವನ್ನು ತಕ್ಷಣವೇ ಹೊಂದಲು ಇದು ಅನುವು ಮಾಡಿಕೊಡುತ್ತದೆ. ಏರ್‌ಟೆಲ್ 5ಜಿ ಸಂಪರ್ಕ ಜಾಲದೊಂದಿಗೆ 20ರಿಂದ 30 ಪಟ್ಟು ವೇಗದ ಜೊತೆಗೆ ಅತ್ಯದ್ಭುತ ಧ್ವನಿಯ ಅನುಭವ ಮತ್ತು ಕರೆಸಂಪರ್ಕದ ವಾಗ್ದಾನವನ್ನು ಏರ್‌ಟೆಲ್ ನೀಡುತ್ತದೆ. ಇದರೊಂದಿಗೆ, ಈ ಹೊಸ ತಂತ್ರಜ್ಞಾನವು ಪರಿಸರಸ್ನೇಹಿಯೂ ಆಗಿರಲಿದೆ.
ಏರ್‌ಟೆಲ್ 5ಜಿ ಪ್ಲಸ್ ಸೇವೆಗಳ ಅನುಭವ ಹೊಂದಲು ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ನಗರದಲ್ಲಿ 5ಜಿ ಸೇವೆಗಳ ಲಭ್ಯತೆ ಇದೆಯೇ ಹಾಗೂ ನಿಮ್ಮ ಸ್ಮಾರ್ಟ್‌ಫೋನ್ 5ಜಿ ಸೇವೆಗಳಿಗೆ ಸಿದ್ಧಗೊಂಡಿದೆಯೇ ಎಂಬುದನ್ನ ನಿಮ್ಮ ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಪರಿಶೀಲಿಸಿಕೊಳ್ಳಿ. ಒಂದು ವೇಳೆ, ಇವೆರಡೂ ಸೌಲಭ್ಯಗಳು ಲಭ್ಯವಿದ್ದರೆ, ಆಗ ನೀವು “ನೆಟ್‌ವರ್ಕ್ ಸೆಟಿಂಗ್ಸ್”ನಿಂದ 5ಜಿ ಸಂಪರ್ಕಜಾಲವನ್ನು ಆರಿಸಿಕೊಳ್ಳಬಹುದು. ಏರ್‌ಟೆಲ್ 5ಜಿ ಪ್ಲಸ್ ಸೇವೆಗಳು ಇತರ ಅನೇಕ ವೈಶಿಷ್ಟ್ಯಗಳೊಂದಿಗೆ ಹೈ-ಡಿಫಿನಿಷನ್ ವಿಡಿಯೋ ಸ್ಟ್ರೀಮಿಂಗ್, ಅನೇಕ ಜನರೊಂದಿಗೆ ಚಾಟಿಂಗ್, ಗೇಮಿಂಗ್, ಮತ್ತು ಭಾವಚಿತ್ರಗಳನ್ನು ತ್ವರಿತಗತಿಯಲ್ಲಿ ಅಪ್‌ಲೋಡ್ ಮಾಡುವಂತಹ ಸೌಲಭ್ಯಗಳನ್ನು ನೀಡುತ್ತದೆ.
ಏರ್‌ಟೆಲ್ 5ಜಿ ಪ್ಲಸ್: ಅನೇಕ ವರ್ಷಗಳ ಯಶಸ್ವಿ ಪರೀಕ್ಷೆಗಳಿಂದ ಮತ್ತು ಪ್ರಯೋಗಾರ್ಥ ಪರೀಕ್ಷೆಗಳಿಂದ ಜನ್ಮತಳೆದ ಉತ್ಪನ್ನ
ದೂರಸಂಪರ್ಕ ತಂತ್ರಜ್ಞಾನದ ದಿಗ್ಗಜ ಕಂಪನಿಯಾದ ಭಾರ್ತಿ ಏರ್‌ಟೆಲ್ ಭಾರತದ ಎಲ್ಲಾ ನಗರಗಳನ್ನು 2023ರ ವೇಳೆಗೆ 5ಜಿ ಸಂಪರ್ಕಜಾಲದೊಳಗೆ ತರುವ ಗುರಿಯನ್ನು ಹೊಂದಿದ್ದು ಮಾರ್ಚ್ 2024ರ ವೇಳೆಗೆ ದೇಶದ ಉದ್ದಗಲಕ್ಕೂ 5ಜಿ ಸೇವೆಗಳನ್ನು ಒದಗಿಸಲಿದೆ.
ಏರ್‌ಟೆಲ್ 5ಜಿ ಸೇವೆಗಳನ್ನು ಚಾಲನೆಗೊಳಿಸುವ ಬಗ್ಗೆ ಮಾತನಾಡಿದ ಭಾರ್ತಿ ಏರ್‌ಟೆಲ್‌ನ ನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಗಳಾದ ಗೋಪಾಲ್ ಮಿತ್ತಲ್‌ರವರು “ಏರ್‌ಟೆಲ್ ಸಂಸ್ಥೆಯು ಕಳೆದ 27 ವರ್ಷಗಳಿಂದ ಭಾರತದ ದೂರಸಂಪರ್ಕ ಕ್ರಾಂತಿಯ ಮುಂಚೂಣಿಯಲ್ಲಿದೆ. ನಮ್ಮ ಗ್ರಾಹಕರಿಗೆ ಶ್ರೇಷ್ಠ ಅನುಭವವನ್ನು ನೀಡಲು ಅತ್ಯುತ್ತಮ ಸಂಪರ್ಕ ಜಾಲವನ್ನು ನಿರ್ಮಿಸಿರುವುದು ಈ ದಿಸೆಯಲ್ಲಿನ ನಮ್ಮ ಪ್ರಯಾಣದಲ್ಲಿ ನಾವು ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿರುವುದನ್ನು ಈ ದಿನವು ಗುರುತಿಸಲಿದೆ. ನಮ್ಮೆಲ್ಲಾ ಪ್ರಯತ್ನಗಳ ಕೇಂದ್ರದಲ್ಲಿ ನಮ್ಮ ಗ್ರಾಹಕರು ಇರುತ್ತಾರೆ” ಎಂದು ಹೇಳಿದ್ದಾರೆ.
ಕಳೆದೊಂದು ವರ್ಷದಲ್ಲಿ, ಏರ್‌ಟೆಲ್ ಕಂಪನಿಯು 5ಜಿ ಸೇವೆಗಳ ಶಕ್ತಿಯನ್ನು ಅನೇಕ ಪ್ರಬಲವಾದ ಬಳಕೆಯ ವಿಷಯಗಳಲ್ಲಿ ಪ್ರದರ್ಶಿಸಿದೆ. ಇದು ವೃತ್ತಿಪರ ಪರಿಸರಗಳಲ್ಲಿ ಹಾಗೂ ಉದ್ಯಮ-ವ್ಯವಹಾರಗಳಲ್ಲಿ ಕ್ರಾಂತಿಯನ್ನೇ ತರುವ ಸಾಮರ್ಥ್ಯವನ್ನು ಹೊಂದಿದೆ. ದೂರಸಂಪರ್ಕ ಇಲಾಖೆಯು ಒದಗಿಸಿರುವ ಪ್ರಾಯೋಗಿಕ ಸಂಪರ್ಕ ಜಾಲಗಳ ಮೇಲೆ ಏರ್‌ಟೆಲ್ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಲೈವ್ 5ಜಿ ಸಂಪರ್ಕ ಜಾಲವನ್ನು ದೇಶದ ಮೊದಲ 5ಜಿ ಆಧಾರಿತ ಹೋಲೋಗ್ರಾಮ್ ಅನ್ನು ಮತ್ತು ಅಪೋಲೋ ಆಸ್ಪತ್ರೆಗಳ ಪಾಲುದಾರಿಕೆಯೊಂದಿಗೆ 5ಜಿ ಸಂಪರ್ಕ ಹೊಂದಿದ ದೇಶದ ಮೊಟ್ಟಮೊದಲ ಆಂಬ್ಯುಲೆನ್ಸ್ ಸೇವೆಗಳ ಸೌಲಭ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಬಾಷ್ ಕಂಪನಿಯ ಪಾಲುದಾರಿಕೆಯೊಂದಿಗೆ ದೇಶದ ಮೊಟ್ಟಮೊದಲ ಖಾಸಗಿ 5ಜಿ ಪರೀಕ್ಷಾ ಸಂಪರ್ಕ ಜಾಲವನ್ನೂ ಸಹ ಏರ್‌ಟೆಲ್ ಸ್ಥಾಪಿಸಿತು.
ಕಳೆದೊಂದು ವರ್ಷದಲ್ಲಿ, ಏರ್‌ಟೆಲ್ ಕಂಪನಿಯು 5ಜಿ ಸೇವೆಗಳ ಶಕ್ತಿಯನ್ನು ಅನೇಕ ಪ್ರಬಲವಾದ ಬಳಕೆಯ ವಿಷಯಗಳಲ್ಲಿ ಪ್ರದರ್ಶಿಸಿದೆ. ಇದು ವೃತ್ತಿಪರ ಪರಿಸರಗಳಲ್ಲಿ ಹಾಗೂ ಉದ್ಯಮ-ವ್ಯವಹಾರಗಳಲ್ಲಿ ಕ್ರಾಂತಿಯನ್ನೇ ತರುವ ಸಾಮರ್ಥ್ಯವನ್ನು ಹೊಂದಿದೆ. ದೂರಸಂಪರ್ಕ ಇಲಾಖೆಯು ಒದಗಿಸಿರುವ ಪ್ರಾಯೋಗಿಕ ಸಂಪರ್ಕ ಜಾಲಗಳ ಮೇಲೆ ಏರ್‌ಟೆಲ್ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಲೈವ್ 5ಜಿ ಸಂಪರ್ಕ ಜಾಲವನ್ನು ದೇಶದ ಮೊದಲ 5ಜಿ ಆಧಾರಿತ ಹೋಲೋಗ್ರಾಮ್ ಅನ್ನು ಮತ್ತು ಅಪೋಲೋ ಆಸ್ಪತ್ರೆಗಳ ಪಾಲುದಾರಿಕೆಯೊಂದಿಗೆ 5ಜಿ ಸಂಪರ್ಕ ಹೊಂದಿದ ದೇಶದ ಮೊಟ್ಟಮೊದಲ ಆಂಬ್ಯುಲೆನ್ಸ್ ಸೇವೆಗಳ ಸೌಲಭ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿತು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಬಾಷ್ ಕಂಪನಿಯ ಪಾಲುದಾರಿಕೆಯೊಂದಿಗೆ ದೇಶದ ಮೊಟ್ಟಮೊದಲ ಖಾಸಗಿ 5ಜಿ ಪರೀಕ್ಷಾ ಸಂಪರ್ಕ ಜಾಲವನ್ನೂ ಸಹ ಏರ್‌ಟೆಲ್ ಸ್ಥಾಪಿಸಿತು
Published On - 3:11 pm, Fri, 21 October 22