ಹಣಕಾಸಿನ ಗುರಿ ಸಾಧಿಸಲು ಮತ್ತು ಹಣಗಳಿಸಲು ನಿಮಗೆ ನೆರವಾಗಬಲ್ಲ ವಿಚಾರಗಳು ಇಲ್ಲಿವೆ
ನಿಮ್ಮ ಹಣಕಾಸಿನ ಗುರಿಯನ್ನು ಸಾಧಿಸುವುದಕ್ಕಾಗಿ ಮತ್ತು ಆ ಮೂಲಕ ಹಣಗಳಿಸಲು ನಿಮಗೆ ನೆರವಾಗಬಲ್ಲ ವಿಚಾರಗಳನ್ನು ತಿಳಿಯೋಣ…
ಹಣವನ್ನು ಗಳಿಸುವುದು ಎಷ್ಟು ಮುಖ್ಯವಾದದ್ದೋ ಸರಿಯಾದ ಹಣಕಾಸು ಯೋಜನೆ ರೂಪಿಸುವುದು ಕೂಡ ಅಷ್ಟೇ ಮಹತ್ವದ್ದು. ವಿವಿಧ ಹಣಕಾಸು ಚಟುವಟಿಕೆಗಳ ಮೂಲಕ ನಿಮ್ಮ ಹೂಡಿಕೆಗಳನ್ನು ನಿರ್ವಹಣೆ ಮಾಡುವುದು ವೈಯಕ್ತಿಕ ಹಣಕಾಸು ಅಥವಾ ಪರ್ಸನಲ್ ಫೈನಾನ್ಸ್. ಇದು ನಿಮ್ಮ ಹಣಕಾಸು ಗುರಿಯನ್ನು ಸಾಧಿಸುವ ಕುರಿತಾದ ಸಿದ್ಧತೆಯನ್ನು ಸೂಚಿಸುತ್ತದೆ. ನಿಮ್ಮ ಹಣಕಾಸಿನ ಗುರಿಯನ್ನು ಸಾಧಿಸುವುದಕ್ಕಾಗಿ ಮತ್ತು ಆ ಮೂಲಕ ಹಣಗಳಿಸಲು ನಿಮಗೆ ನೆರವಾಗಬಲ್ಲ ವಿಚಾರಗಳನ್ನು ತಿಳಿಯೋಣ…
ತುರ್ತುನಿಧಿ ಸ್ಥಾಪಿಸುವುದು ಅಗತ್ಯ
ಹಣವಂತ ಸಮಸ್ಯೆಗಳನ್ನು ಪರಿಹರಿಸಬಲ್ಲದು. ಪರಿಸ್ಥಿತಿ ಹೀಗಿರುವಾಗ, ತುರ್ತು ನೀತಿಯೊಂದನ್ನು ಸ್ಥಾಪಿಸಿಡುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಬ್ಯಾಂಕ್ ಖಾತೆಯೊಂದನ್ನು ತೆಗೆದು ಸಣ್ಣ ಮೊತ್ತವನ್ನು ಪ್ರತಿ ತಿಂಗಳು ಠೇವಣಿ ಇಡಬಹುದು. ಹೀಗೆ ಠೇವಣಿ ಇಟ್ಟ ಹಣವನ್ನು ತುರ್ತುಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಬಹುದು.
ಹೆಚ್ಚು ಬಡ್ಡಿಯ ಸಾಲವನ್ನು ಕೊನೆಗೊಳಿಸಿ
ಜನರು ಅಗತ್ಯಕ್ಕನುಗುಣವಾಗಿ ವೈಯಕ್ತಿಕ ಸಾಲ, ಸಾಲ ಹಾಗೂ ಗೃಹ ಸಾಲಗಳನ್ನು ಪಡೆಯುತ್ತಾರೆ. ಇದನ್ನು ದೀರ್ಘಾವಧಿಗೆ ಮರುಪಾವತಿಸುವ ಆಯ್ಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ. ಸ್ವಯಂ ಚಾಲಿತ ಸಾಲ ಮರುಪಾವತಿ ವ್ಯವಸ್ಥೆಯನ್ನು ಆಯ್ದುಕೊಳ್ಳುವ ಮೂಲಕ ಪ್ರತಿ ತಿಂಗಳು ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬಹುದು. ಇದಲ್ಲದೆ, ಪ್ರತಿ ವರ್ಷ ಸಾಲದ ಭಾಗವನ್ನು ಅವಧಿ ಪೂರ್ವ-ಪಾವತಿ ಮಾಡಬಹುದು. ಸಾಲವನ್ನು ಬೇಗನೆ ಮರು ಪಾವತಿಸುವುದರಿಂದ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುವುದಲ್ಲದೆ ಬಡ್ಡಿಯ ಹಣವನ್ನೂ ಉಳಿಸಿಕೊಳ್ಳಬಹುದು.
ನಿವೃತ್ತಿ ಜೀವನಕ್ಕಾಗಿ ಉಳಿತಾಯ
ವಯಸ್ಸಾದ ನಂತರ ಉಳಿತಾಯದ ಹಣವೇ ನಿಮ್ಮನ್ನು ಕಾಪಾಡುತ್ತದೆ. ಪರಿಸ್ಥಿತಿಯಲ್ಲಿ ನಿವೃತ್ತಿ ನಂತರದ ಜೀವನಕ್ಕಾಗಿ ಯೋಜನೆ ರೂಪಿಸುವುದು ಅತ್ಯಗತ್ಯ. ನೀವು ಭವಿಷ್ಯನಿಧಿ ಖಾತೆದಾರರಾಗಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಭವಿಷ್ಯ ನಿಧಿಗೆ ಹೆಚ್ಚಿಸಬಹುದು. ನೀವು ಭವಿಷ್ಯನಿಧಿ ಖಾತೆ ಹೊಂದದೇ ಇದ್ದಲ್ಲಿ ಆರ್ ಡಿ, ಪಿ ಪಿ ಎಫ್, ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಂತಹ ಹಲವು ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಈ ಮೂಲಕ ಪ್ರತಿ ತಿಂಗಳ ಸಂಬಳದಲ್ಲಿ ಉತ್ತಮ ನಿಧಿಯೊಂದನ್ನು ಸ್ಥಾಪಿಸುತ್ತಾ ಹೋಗಬಹುದು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿಗೆ ಪ್ರತಿಫಲವನ್ನು ತಂದುಕೊಡಬಹುದು. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಎಫ್ಡಿ, ಆರ್ಡಿಗಳಲ್ಲಿ ಹೂಡಿಕೆ ಮಾಡಿ ಪಡೆಯುವ ಪ್ರತಿಫಲಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಆದಾಗ್ಯೂ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಆಳವಾದ ಅಧ್ಯಯನ ಮಾಡಿಕೊಳ್ಳುವುದು ಅಗತ್ಯ.
ವಿಮೆ ಪಾಲಿಸಿಯಲ್ಲಿ ಹೂಡಿಕೆ
ನೀವು ಮತ್ತು ನಿಮ್ಮ ಕುಟುಂಬದವರನ್ನು ಅನಿರೀಕ್ಷಿತ ಅಪಘಾತಗಳಿಂದ ರಕ್ಷಿಸಿಕೊಳ್ಳುವಲ್ಲಿ ವಿಮೆ ಪಾಲಿಸಿಯನ್ನು ಮಾಡಿಕೊಳ್ಳುವುದು ನೆರವಿಗೆ ಬರಲಿದೆ. ಸಣ್ಣ ವಯಸ್ಸಿನಲ್ಲಿ ಕಡಿಮೆ ಪ್ರೇಮಿಂನ ಪಾಲಿಸಿ ಮಾಡಿಕೊಳ್ಳುವುದು ಉತ್ತಮ. ಇದನ್ನು ಹೊರತುಪಡಿಸಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಕೂಡ ಚಿಕಿತ್ಸಾ ವೆಚ್ಚದ ಹೊರೆಯನ್ನು ಕಡಿಮೆ ಮಾಡಲಿದೆ.
ನಿಮ್ಮ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: IIFL