ನಮ್ಮ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಸಾಹೇಬರು ಅವತ್ತು ಹಂಗೆ ತಲೆ ಓಡಿಸಿದ್ದಕ್ಕೇ ಪಾಕಿಸ್ತಾನದ ವಿರುದ್ಧ ಟೈ ಆಗಿದ್ದ ಮ್ಯಾಚ್ನಲ್ಲಿ ನಾವು ನಿರಾಯಾಸವಾಗಿ ಗೆದ್ದಿದ್ದು ಅಥವಾ ಪಾಕಿಸ್ತಾನ ಸೋತು ತಬ್ಬಿಬ್ಬಾಗಿದ್ದು!‘ ಎಂಬ ಅರ್ಥದಲ್ಲಿ ಭಾರತದ ತಂಡದ ಮಾಜಿ ಟೆಸ್ಟ್ ಪ್ಲೇಯರ್, ಕನ್ನಡಿಗ ರಾಬಿನ್ ಉತ್ತಪ್ಪ ತಮ್ಮ ನಾಯಕನ ಜಾಣ್ಮೆಯನ್ನು ಕೊಂಡಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ 2007 T20 World Cup ನಡೆಯುತ್ತಿತ್ತು. ಪಾಕಿಸ್ತಾನ ತಂಡ ನಮ್ಮ ಎದುರಾಳಿಯಾಗಿತ್ತು. ಪಂದ್ಯ 141ರನ್ ಟೈನಲ್ಲಿ ಸಮವಾಗಿತ್ತು. ಆಗ ನಾನು ಬೌಲ್ ಮಾಡಿದೆ. ನಾನು ನನ್ನ ಜೀವಮಾನದಲ್ಲಿ ಎಸೆದ ಮೂರೇ ಮೂರು ಬಾಲುಗಳು ಅವು. ಮತ್ತು ಅದು ಇತಿಹಾಸದ ಪುಟದಲ್ಲಿ ಸುಭದ್ರವಾಗಿ ದಾಖಲಾಗಿದೆ. ಅದಕ್ಕೆ ಕಾರಣ ನಮ್ಮ ಕೂಲ್ ಕ್ಯಾಪ್ಟನ್ ಧೋನಿಯೇ! ಎಂದು 34 ವರ್ಷದ ರಾಬಿನ್ ಉತ್ತಪ್ಪ ಇತ್ತೀಚೆಗೆ ಮೆಲುಕು ಹಾಕಿದ್ದಾರೆ.
Tell Tale picture story ಇಲ್ಲಿದೆ ಓದಿ-ನೋಡಿ!
ಎಂ ಎಸ್ ಧೋನಿ ಟೆಕ್ನಿಕ್ ಸಿಂಪಲ್ ಆಗಿತ್ತು! ಸ್ಮಾರ್ಟ್ ಆಗಿತ್ತು.. ಅಷ್ಟೇ ಕರಾರುವಕ್ಕಾಗಿತ್ತು! ಮೊದಲ ಬಾರಿಗೆ ಭಾರತ ತಂಡದ ಸಾರಥ್ಯ ವಹಿಸಿದ್ದ ಧೋನಿ, ವಿಕೆಟ್ ಕೀಪರ್ ಆಗಿ ಸೀದಾ ವಿಕೆಟ್ ಹಿಂದುಗಡೆ, ನಿರ್ದಿಷ್ಟ ಜಾಗದಲ್ಲಿ ಮೊಣಕಾಲುಗಳ ಮೇಲೆ ಅಚಲವಾಗಿ ನಿಂತುಬಿಟ್ಟರು. ಮತ್ತು ಅವರು ನನಗೆ ಹೇಳಿದ್ದು ಇಷ್ಟು.. ನನ್ನನ್ನೇ ಗುರಿಯಾಗಿಟ್ಟುಕೊಂಡು ಬಾಲ್ ಎಸೆಯುತ್ತಿರು. ಆ ಕಡೆ, ಈ ಕಡೆ ನೋಡಲೇಬೇಡ ಎಂದು ಪಿಸುಗುಟ್ಟಿದರು.. ಅಷ್ಟೇ.
ನಾನು ಅವರು ಹೇಳಿದ್ದನ್ನಷ್ಟೇ ಮಾಡಿದೆ. ಮುಂದಿನದು ಇತಿಹಾಸವಾಯಿತು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ. ಸಾಮಾನ್ಯವಾಗಿ ವಿಕೆಟ್ ಕೀಪರ್ಗಳು ವಿಕೆಟ್ಗಳಿಂದ ತುಂಬಾ ದೂರದಲ್ಲಿ ನಿಂತುಬಿಡುತ್ತಾರೆ. ಆದ್ರೆ ಸೂಕ್ಷ್ಮಮತಿಯ ಧೋನಿ ತಾವು ನಿಲ್ಲಬೇಕಾದ ಜಾಗ ಯಾವುದು ಎಂಬುದನ್ನು ಆಲೋಚಿಸಿ, ಜಸ್ಟ್ ವಿಕೆಟ್ ಹಿಂದೆಯೇ ನಿಂತು ಬೌಲರ್ಗೆ ನೇರ ಗುರಿಯನ್ನು ಹಾಕಿಕೊಟ್ಟಿದ್ದರು ಎಂದು ಉತ್ತಪ್ಪ ಹೇಳಿದ್ದಾರೆ.
ಆದೇ ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಸಾಮಾನ್ಯವಾಗಿ ಯಾವಾಗಲೂ ವಿಕೆಟ್ ಕೀಪರ್ ಎಲ್ಲಿ ನಿಲ್ಲುತ್ತಾರೋ ಅಲ್ಲಿ ದೂರದಲ್ಲಿ, ವಿಕೆಟ್ಗೆ ಪಕ್ಕದಲ್ಲಿ ಕಾಣುವಂತೆ ನಿಂತುಬಿಟ್ಟಿದ್ದರು. ಪಾಕ್ನ ಮೂವರೂ ಬೌಲರ್ಗಳು ಗೊತ್ತು-ಗುರಿಯಿಲ್ಲದೆ ಬಾಲ್ ಎಸೆದಿದ್ದೇ ಎಸೆದಿದ್ದು.. ವಿಕೆಟ್ಗೆ ಮಾತ್ರ ಅದು ತಾಕಲೇ ಇಲ್ಲ ಎಂದು ಉತ್ತಪ್ಪ ಅಂದಿನ ಪಂದ್ಯವನ್ನು ಮೆಲುಕು ಹಾಕುತ್ತಾ, ತಮ್ಮ ಡಿಬಾಸ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Published On - 1:15 pm, Sat, 23 May 20