India vs England: T20 ಸರಣಿಯಲ್ಲಿದ್ದ ಉಭಯ ತಂಡಗಳ ಈ ಐದು ಆಟಗಾರರು ಮುಂಬರುವ T20 ವಿಶ್ವಕಪ್​ನಲ್ಲಿ ಆಡುವುದು ಡೌಟ್

|

Updated on: Mar 21, 2021 | 4:55 PM

India vs England: ಯುವ ಆಟಗಾರ ಇಶಾನ್ ಕಿಶನ್ ಆಗಮನದ ನಂತರ ಅನುಭವಿ ಶಿಖರ್ ಧವನ್ ಟಿ 20 ವಿಶ್ವಕಪ್‌ನಲ್ಲಿ ಆಡುವ ಅವಕಾಶಗಳು ಮುಗಿದಿದೆ.

1 / 6
ಟೀಂ ಇಂಡಿಯಾ

ಟೀಂ ಇಂಡಿಯಾ

2 / 6
ಯುವ ಆಟಗಾರ ಇಶಾನ್ ಕಿಶನ್ ಆಗಮನದ ನಂತರ ಅನುಭವಿ ಶಿಖರ್ ಧವನ್ ಟಿ 20 ವಿಶ್ವಕಪ್‌ನಲ್ಲಿ ಆಡುವ ಅವಕಾಶಗಳು ಮುಗಿದಿದೆ. ಆರಂಭಿಕನಾಗಿ ಆಡುವ ಆಸೆಯನ್ನ ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ ನಂತರ ಧವನ್​ ಆಗಮನ ಮತ್ತಷ್ಟು ಕಷ್ಟಕರವಾಗಲಿದೆ.

3 / 6
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಅಕ್ಷರ್ ಪಟೇಲ್ ಅಕ್ಷರ್ ಪಟೇಲ್​ಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ವಾಸ್ತವವಾಗಿ, ತಂಡದಲ್ಲಿ ರವೀಂದ್ರ ಜಡೇಜಾ ಆಗಮನದಿಂದ ಅಕ್ಷರ್​ಗೆ ಅವಕಾಶ ಸಿಗುವುದು ತೀರ ವಿರಳವಾಗಿದೆ. ಜಡೇಜಾ ಉತ್ತಮ ಬ್ಯಾಟ್ಸ್‌ಮನ್ ಮತ್ತು ಬೌಲರ್ ಹಾಗೂ ಸಾಟಿಯಿಲ್ಲದ ಫೀಲ್ಡರ್ ಕೂಡ ಆಗಿರುವುದು ಜಡೇಜಾ ಅವರಿಗೆ ಪ್ಲಸ್​ ಪಾಯಿಂಟ್​.

4 / 6
ದೀಪಕ್ ಚಹರ್ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಗಲಿಲ್ಲ. ದೀಪಕ್ ಚಹರ್ ಬರಿ ಬೆಂಚ್ ಕಾದಿದ್ದೆ ಬಂತು. ಇಂತಹ ಪರಿಸ್ಥಿತಿಯಲ್ಲಿ, ವಿರಾಟ್ ಕೊಹ್ಲಿಯ ಟಿ 20 ವಿಶ್ವಕಪ್ನ ರಾಡಾರ್ನಿಂದ ದೀಪಕ್ ಚಹರ್ ಹೊರಗುಳಿಯುವ ಸಾಧ್ಯತೆಗಳಿವೆ.

5 / 6
ಸ್ಯಾಮ್ ಬಿಲ್ಲಿಂಗ್ಸ್, ಕಿರು ಸ್ವರೂಪದಲ್ಲಿ ಇಂಗ್ಲೆಂಡ್‌ನ ಅತ್ಯಂತ ದುರದೃಷ್ಟದ ಕ್ರಿಕೆಟಿಗರಲ್ಲಿ ಬಿಲ್ಲಿಂಗ್ಸ್ ಕೂಡ ಒಬ್ಬರು. ಅವರು 5 ವರ್ಷಗಳ ಹಿಂದೆ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಗೊಂಡರು. ಆದರೆ ಇಲ್ಲಿಯವರೆಗೆ ಕೇವಲ 30 ಟಿ 20 ಮತ್ತು 21 ಏಕದಿನ ಪಂದ್ಯಗಳನ್ನು ಮಾತ್ರ ಆಡಲು ಅವರಿಗೆ ಅವಕಾಶ ದೊರೆತಿದೆ. ಭಾರತ ವಿರುದ್ಧದ ಟಿ 20 ಸರಣಿಯಲ್ಲಿ ಒಂದೇ ಒಂದು ಪಂದ್ಯ ಆಡುವ ಅವಕಾಶ ಅವರಿಗೆ ಸಿಗಲಿಲ್ಲ. ಇದರ ನಂತರ, ಟಿ 20 ವಿಶ್ವಕಪ್‌ಗಾಗಿ ಆಡುವ ಅವಕಾಶಗಳು ಕಡಿಮೆಯಾಗಿವೆ.

6 / 6
ರೀಸ್ ಟೋಪ್ಲೆ. ಎಡಗೈ ವೇಗದ ಬೌಲರ್ 2015 ರಲ್ಲಿ ಪಾದಾರ್ಪಣೆ ಮಾಡಿದರೂ ಅವರು ಈವರೆಗೆ ಇಂಗ್ಲೆಂಡ್ ಪರ ಕೇವಲ 6 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಭಾರತದ ವಿರುದ್ಧವೂ ಅವರಿಗೆ ಅವಕಾಶ ಸಿಗಲಿಲ್ಲ. ಅವರು ತಮ್ಮ ತಂಡದ ಟಿ 20 ವಿಶ್ವಕಪ್ ಯೋಜನೆಯ ಭಾಗವೂ ಅಲ್ಲ ಎಂಬುದು ಸ್ಪಷ್ಟವಾಗಿದೆ.