India vs England: ಕಿಂಗ್ ಕೊಹ್ಲಿ- ಬಟ್ಲರ್ ವಾಕ್ಸಮರ! ವಿರಾಟ ರೂಪಕ್ಕೆ ಬೆದರಿದ ಬಟ್ಲರ್, ವಿಡಿಯೋ ನೋಡಿ!
India vs England: ಔಟಾದ ಬಳಿಕ ಡಗ್ ಔಟ್‌ಗೆ ಹಿಂದಿರುಗುತ್ತಿದ್ದ ಬಟ್ಲರ್, ವಿರಾಟ್ ಕಡೆ ತಿರುಗಿ ಏನನ್ನೋ ಹೇಳಿದರು, ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಸೆಲೆಬ್ರೇಷನ್ ಮೂಡ್ಗೆ ಬ್ರೇಕ್ ಹಾಕಿ ಬಟ್ಲರ್ ಕಡೆಗೆ ಅದೇನೊ ಹೇಳುತ್ತಾ ದಾವಿಸಿದರು.
ಅಹಮದಾಬಾದ್: ಇಂಡಿಯಾ- ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಕೊನೆಯ ಟಿ 20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ಸರಣಿಯನ್ನು 3-2ರಿಂದ ವಶಪಡಿಸಿಕೊಂಡಿತು. 5 ನೇ ಟಿ 20 ಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಯಕ ಭುವನೇಶ್ವರ್ ಕುಮಾರ್ ಎಂದರೆ ತಪ್ಪಾಗಲಾರದು. ಆದರೆ, ಸರಣಿಯ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿಯ ಸಮಯೋಜಿತ ಆಟವೇ ಪ್ರಮುಖ ಕಾರಣವಾಗಿದೆ. ಅಂತಿಮ ಟಿ 20 ಯಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಇಂಗ್ಲೆಂಡ್‌ಗೆ 225 ರನ್ ಗಳ ಗೆಲುವಿನ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 188 ರನ್ ಗಳಿಸಲ್ಲಷ್ಟೇ ಶಕ್ತವಾಯಿತು. ಆದರೆ ಇಲ್ಲಿ ವಿಚಾರವಿರುವುದು ಪಂದ್ಯದ ಸೋಲು ಅಥವಾ ಗೆಲುವಿನ ಬಗ್ಗೆ ಅಲ್ಲ. ಬದಲಾಗಿ, ನಡೆಯುತ್ತಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ನಡುವೆ ಬಹಿರಂಗವಾಗಿ ನಡೆದ ಮಾತಿನ ಚಕಮಕಿಯ ಬಗ್ಗೆ.
ಅಂದ ಹಾಗೆ, ಇತ್ತೀಚಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ನಡುವಿನ ಜಗಳ ಸಾಮಾನ್ಯವಾಗಿದೆ. ಹಾಗೆಯೇ ನಿನ್ನೆಯ ಪಂದ್ಯದಲ್ಲಿ ವಿರಾಟ್ ಮತ್ತು ಬಟ್ಲರ್ ಅವರ ಮಾತಿನ ಚಕಮಕಿಯು ಅಷ್ಟೇ ಪ್ರಬಲವಾಗಿತ್ತು. ಇಬ್ಬರೂ ಬಹಿರಂಗವಾಗಿ ಮಾತಿಗಿಳಿದಿದ್ದರು. ವಿರಾಟ್ ಕೊಹ್ಲಿ ಕೂಡ ಜೋಸ್ ಬಟ್ಲರ್ ವಿರುದ್ಧ ಮೈದಾನದಲ್ಲಿ ಗುಡುಗಿದ್ದು ಎಲ್ಲರೆದೆಯಲ್ಲೂ ನಡುಕ ಹುಟ್ಟಿಸಿತ್ತು.
13 ನೇ ಓವರ್‌ನಲ್ಲಿ ನಡೆದ ಪ್ರಸಂಗ ವಾಸ್ತವವಾಗಿ, ಈ ಇಡೀ ಪ್ರಸಂಗ ಇಂಗ್ಲೆಂಡ್ ಇನ್ನಿಂಗ್ಸ್ನ 13 ನೇ ಓವರ್‌ನಲ್ಲಿ ನಡೆಯಿತು. 225 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಆಘಾತ ಎದುರಿಸಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಜೋಸ್ ಬಟ್ಲರ್ ಔಟಾಗಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್‌ನ ಸ್ಕೋರ್ 130 ರನ್ ಆಗಿತ್ತು. ಬಟ್ಲರ್ ವಿಕೆಟ್ ಬಳಿಕ ಮೈದಾನದಲ್ಲಿ ಯತ ಪ್ರಕಾರವಾಗಿ ತಮ್ಮ ಅಗ್ರೇಶನ್ ಹೊರಹಾಕಿದ ಕೊಹ್ಲಿ ಆಟಗಾರರೊಂದಿಗೆ ಸೆಲೆಬ್ರೆಷನ್ ಮೂಡ್ನಲ್ಲಿದ್ದರು.
ಔಟಾದ ಬಳಿಕ ಡಗ್ ಔಟ್‌ಗೆ ಹಿಂದಿರುಗುತ್ತಿದ್ದ ಬಟ್ಲರ್, ವಿರಾಟ್ ಕಡೆ ತಿರುಗಿ ಏನನ್ನೋ ಹೇಳಿದರು, ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಸೆಲೆಬ್ರೇಷನ್ ಮೂಡ್ಗೆ ಬ್ರೇಕ್ ಹಾಕಿ ಬಟ್ಲರ್ ಕಡೆಗೆ ಅದೇನೊ ಹೇಳುತ್ತಾ ದಾವಿಸಿದರು. ಕೊಹ್ಲಿಯ ಬರುವಿಕೆಯನ್ನ ಗಮನಿಸಿದ ಬಟ್ಲರ್ ಸಹ ಡಗ್ಔಟ್ನಿಂದ ವಾಪಸ್ಸ್ ತಿರುಗಿ ಕೊಹ್ಲಿ ಮಾತಿಗೆ ಪ್ರತ್ಯುತ್ತರ ನೀಡಲು ಆರಂಭಿಸಿದರು. ಕೆಲ ಸಮಯದವರೆಗೆ ಈ ಇಬ್ಬರ ನಡುವಿನ ಮಾತಿನ ಚಕಮಕಿ ಮುಂದುವರೆದಿತ್ತು. ಕೊಹ್ಲಿಯ ಮಾತಿನ ಬರಕ್ಕೆ ಹೆದರಿದ ಬಟ್ಲರ್, ಪೆವಿಲಿಯನ್ ಅತ್ತ ಪೆಚ್ಚುಮೊರೆ ಹಾಕಿಕೊಂಡು ಸಾಗಿದರು. ಆದರೆ ಈ ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
— Aditya Das (@lodulalit001) March 20, 2021
ಉತ್ತಮ ಇನ್ನಿಂಗ್ಸ್ ಆಡಿದ ಬಟ್ಲರ್ ಜೋಸ್ ಬಟ್ಲರ್ 225 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಇಂಗ್ಲೆಂಡ್‌ಗೆ ಉತ್ತಮ ಆರಂಭವನ್ನು ನೀಡಿದರು. ಜೋಸ್ ಬಟ್ಲರ್ 34 ಎಸೆತಗಳಲ್ಲಿ 52 ರನ್‌ಗಳಿಗೆ ಔಟಾದರು, ಇದರಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿವೆ. ಬಟ್ಲರ್ ಅವರ ಬ್ಯಾಟಿಂಗ್ ಸ್ಟ್ರೈಕ್ ದರ 152.94 ಆಗಿತ್ತು.
ಬಟ್ಲರ್ ಹೋರಾಟ ವ್ಯರ್ಥ ಜೋಸ್ ಬಟ್ಲರ್ ಇಂಗ್ಲೆಂಡ್‌ಗೆ ಉತ್ತಮ ಆರಂಭವನ್ನು ನೀಡಿದರು, ಆದರೆ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಸರಣಿಯನ್ನು ಕಳೆದುಕೊಳ್ಳಲು ಇದು ಒಂದು ದೊಡ್ಡ ಕಾರಣವಾಯಿತು. ಇಂಗ್ಲೆಂಡ್ ಪರ ಬಟ್ಲರ್ ಹೊರತಾಗಿ, ಡೇವಿಡ್ ಮಲನ್ ಅರ್ಧಶತಕದೊಂದಿಗೆ 68 ರನ್ ಗಳಿಸಿದರು.
ಇದನ್ನೂ ಓದಿ:India vs England: T20 ಕ್ರಿಕೆಟ್ನಲ್ಲಿ ಕೊಹ್ಲಿ, ರಾಹುಲ್ಗಿಂತ ವೇಗವಾಗಿ 1000 ರನ್ ಪೂರೈಸಿದ ಡೇವಿಡ್ ಮಲನ್