IPL 2021: ಐಪಿಎಲ್​ನಲ್ಲಿ ಆರಂಭಿಕನಾಗಿ ಬ್ಯಾಟ್​ ಬೀಸಲಿದ್ದೇನೆ.. RCB ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಕಿಂಗ್ ಕೊಹ್ಲಿ!

IPL 2021: ಹೌದು, ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ. ನೋಡಿ, ನಾನು ಈ ಹಿಂದೆ ಬೇರೆ ಬೇರೆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ, ಆದರೆ ನಾವು ಈಗ ಬಹಳ ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ನನಗೆ ಅನಿಸುತ್ತದೆ.

IPL 2021: ಐಪಿಎಲ್​ನಲ್ಲಿ ಆರಂಭಿಕನಾಗಿ ಬ್ಯಾಟ್​ ಬೀಸಲಿದ್ದೇನೆ.. RCB ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಕಿಂಗ್ ಕೊಹ್ಲಿ!
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Mar 21, 2021 | 1:09 PM

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಐದನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿರಾಟ್ ಕೊಹ್ಲಿ ಆಡಿರುವ 83 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳನೇ ಬಾರಿಗೆ ಓಪನರ್​ ಆಗಿ ಬ್ಯಾಟಿಂಗ್​ಗೆ ಇಳಿದಿದ್ದರು. ಕೊಹ್ಲಿಯ ಈ ನಡೆ ಟೀಂ ಇಂಡಿಯಾಕ್ಕೆ ಶುಭಶಕುನವಾಗಿಯೇ ಕಂಡುಬಂತು. ಏಕೆಂದರೆ ರೋಹಿತ್​ ಜೊತೆ ಬ್ಯಾಟಿಂಗ್​ ಇಳಿದ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಈ ಸರಣಿಯಲ್ಲಿ ಟೀಂ ಇಂಡಿಯಾ ಓಪನಿಂಗ್​ ಸಮಸ್ಯೆಯನ್ನು ಎದುರಿಸಿತ್ತು. ರೋಹಿತ್​ ಜೊತೆ ಇನ್ನಿಂಗ್ಸ್​ ಆರಂಭಿಸುತ್ತಿದ್ದ ಕನ್ನಡಿಗ ರಾಹುಲ್​ ಜಾಸ್ತಿ ಹೊತ್ತು ಮೈದಾನದಲ್ಲಿ ನಿಲ್ಲುತ್ತಿರಲಿಲ್ಲ. ಇದರಿಂದ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದೆ ಅಲ್ಪ ರನ್​ಗಳಿಗೆ ಇನ್ನಿಂಗ್ಸ್​ ಮುಗಿಸುತ್ತಿತ್ತು.

ಬೌಲರ್ಗಳ ಮೇಲೆ ಸವಾರಿ ಮಾಡಿದ ಜೋಡಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಅದ್ಭುತ ಓಪನಿಂಗ್ ನೀಡಿ ಭದ್ರ ಬುನಾದಿ ಹಾಕಿಕೊಟ್ರು. ಇಂಗ್ಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದ ಈ ಜೋಡಿ, 56 ಬಾಲ್ಗಳಲ್ಲಿ 94 ರನ್ಗಳ ಜೊತೆಯಾಟವಾಡಿತು. ಕೊಹ್ಲಿಗಿಂತ ವೇಗವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, 34 ಬಾಲ್ನಲ್ಲಿ 64 ರನ್ಗಳಿಸಿದ್ರು.

ರೋಹಿತ್ 64 ರನ್ಗಳಿಸಿ ಔಟಾಗುತ್ತಿದ್ದಂತೆ ಕೊಹ್ಲಿ ಜತೆ ಸೇರಿದ ಸೂರ್ಯಕುಮಾರ್ ಯಾದವ್ 32 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ರು. ಮತ್ತೊಂದೆಡೆ ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ, ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ, ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ಕಾರಣವಾದ್ರು.

ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ.. ಪಂದ್ಯದ ಗೆಲುವಿನ ಬಳಿಕ ಮಾತಾನಾಡಿದ ನಾಯಕ ಕೊಹ್ಲಿ ಹೌದು, ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ. ನೋಡಿ, ನಾನು ಈ ಹಿಂದೆ ಬೇರೆ ಬೇರೆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ, ಆದರೆ ನಾವು ಈಗ ಬಹಳ ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ನನಗೆ ಅನಿಸುತ್ತದೆ. ಹೀಗಾಗಿ ಇಬ್ಬರು ಶ್ರೇಷ್ಠ ಆಟಗಾರರಿಗೆ ಆಡಲು ಅತಿ ಹೆಚ್ಚು ಎಸೆತಗಳು ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಹಾಗಾಗಿ ನಾನು ಖಂಡಿತವಾಗಿಯೂ ಓಪನರ್​ ಆಗಿ ರೋಹಿತ್‌ ಜೊತೆ ಉತ್ತಮ ಜೊತೆಯಾಟ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಇಬ್ಬರಲ್ಲಿ ಒಬ್ಬರು ಕ್ರೀಸ್‌ನಲ್ಲಿ ಇದ್ದರೂ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸ ಸಿಗಲಿದೆ. ಇದರಿಂದ ತಂಡದ ಮೊತ್ತವೂ ಹೆಚ್ಚಲಿದೆ. ಆಟಗಾರರು ಭಯಬಿಟ್ಟು ಮೈದಾನದಲ್ಲಿ ಬ್ಯಾಟ್​ ಬೀಸುತ್ತಾರೆ. ಹೀಗಾಗಿ ಇದನ್ನೇ ಮುಂದುವರಿಯಲು ಇಚ್ಚಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಒಮ್ಮೆಯೂ ಪ್ರಶಸ್ತಿಯನ್ನು ಆರ್​ಸಿಬಿ ಗೆದ್ದಿಲ್ಲ ಐಪಿಎಲ್‌ 2021 ಟೂರ್ನಿ ಏಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎದುರು ವಿರಾಟ್‌ ಕೊಹ್ಲಿ ಮುಂದಾಳತ್ವದ ಆರ್‌ಸಿಬಿ ತಂಡ ಪೈಪೋಟಿ ನಡೆಸಲಿದೆ. ಇದುವರೆಗೆ ಒಮ್ಮೆಯೂ ಪ್ರಶಸ್ತಿಯನ್ನು ಆರ್​ಸಿಬಿ ಗೆದ್ದಿಲ್ಲ. ಹೀಗಾಗಿ ಕೊಹ್ಲಿಯ ಈ ನಿರ್ಧಾರದಿಂದ ಆರ್​ಸಿಬಿ ತಂಡದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಆರ್​ಸಿಬಿ ಆರಂಭಿಕ ಆಟಗಾರ ದೇವದತ್ತ್ ಪಡಿಕಲ್​ ಜೊತೆ ಕೊಹ್ಲಿ ಇನ್ನಿಂಗ್ಸ್​ ಆರಂಭಿಸಿದರೆ ಎಡ ಮತ್ತು ಬಲ ಬ್ಯಾಟಿಂಗ್​ ಕಾಂಭಿನೇಷನ್​ನಲ್ಲಿ ಆರ್​ಸಿಬಿ ಬೃಹತ್​ ಮೊತ್ತ ಕಲೆಹಾಕಬಹುದಾಗಿದೆ.

ಇದನ್ನೂ ಓದಿ: IPL 2021: ಹೊಸ ಜರ್ಸಿ ಅನಾವರಣಗೊಳಿಸಿದ ಡೆಲ್ಲಿ ಕ್ಯಾಪಿಟಲ್ಸ್​.. ಜರ್ಸಿಯಲ್ಲಿನ ಬಣ್ಣಗಳ ವಿವರಣೆ ಹೀಗಿದೆ!

Published On - 1:06 pm, Sun, 21 March 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್