India vs England: ರಾಹುಲ್ ಕಳಪೆ ಫಾರ್ಮ್​ ಕೊಹ್ಲಿಗೆ ವರದಾನವಾಯ್ತು! ವಿರಾಟ್​ ಆರಂಭಿಕನಾಗಿ ಕಣಕ್ಕಿಳಿಯುವುದೇ ಬೆಸ್ಟ್​: ಗಾವಸ್ಕರ್

India vs England: ಕೊಹ್ಲಿಗೆ ಈ ಅದೃಷ್ಟ ಕನ್ನಡಿಗ ರಾಹುಲ್​ ಅವರ ಕಳಪೆ ಫಾರ್ಮ್​ ಮೂಲಕ ಒದಗಿಬಂದಿದೆ ಎಂದರು. ಏಕೆಂದರೆ ರಾಹುಲ್​ ಕಳಪೆ ಫಾರ್ಮ್​ನಿಂದ ಬಳಲಿದರಿಂದಲೇ ಕೊಹ್ಲಿ ಅರಂಭಿಕನಾಗಿ ಕಣಕ್ಕಿಳಿದಿದ್ದು ಎಂದರು.

India vs England: ರಾಹುಲ್ ಕಳಪೆ ಫಾರ್ಮ್​ ಕೊಹ್ಲಿಗೆ ವರದಾನವಾಯ್ತು! ವಿರಾಟ್​ ಆರಂಭಿಕನಾಗಿ ಕಣಕ್ಕಿಳಿಯುವುದೇ ಬೆಸ್ಟ್​: ಗಾವಸ್ಕರ್
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Mar 21, 2021 | 11:23 AM

ಅಹಮದಾಬಾದ್: ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ ಗೆಲುವಿನ ಕೇಕೆ ಹಾಕಿರುವ ಕೊಹ್ಲಿ ಪಡೆ ಸರಣಿ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಅದ್ಭುತ ಓಪನಿಂಗ್ ನೀಡಿ ಭದ್ರ ಬುನಾದಿ ಹಾಕಿಕೊಟ್ರು. ಇಂಗ್ಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದ ಈ ಜೋಡಿ, 56 ಬಾಲ್ಗಳಲ್ಲಿ 94 ರನ್ಗಳ ಜೊತೆಯಾಟವಾಡಿತು. ಕೊಹ್ಲಿಗಿಂತ ವೇಗವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, 34 ಬಾಲ್ನಲ್ಲಿ 64 ರನ್ಗಳಿಸಿದ್ರು.

ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ.. ರೋಹಿತ್ 64 ರನ್ಗಳಿಸಿ ಔಟಾಗುತ್ತಿದ್ದಂತೆ ಕೊಹ್ಲಿ ಜತೆ ಸೇರಿದ ಸೂರ್ಯಕುಮಾರ್ ಯಾದವ್ 32 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ರು. ಮತ್ತೊಂದೆಡೆ ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ, ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ, ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ಕಾರಣವಾದ್ರು. ಪಾಂಡ್ಯಾ 17 ಬಾಲ್ನಲ್ಲಿ 39 ರನ್ಗಳಿಸಿದ್ರೆ, ನಾಯಕ ವಿರಾಟ್ ಕೇವಲ 52 ಬಾಲ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 80 ರನ್ಗಳಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ ಕೇವಲ ಕೇವಲ 2 ವಿಕೆಟ್ ನಷ್ಟಕ್ಕೆ 224 ರನ್ಗಳಿಸಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಹಾಗೂ ಕೊಹ್ಲಿಯ ಉತ್ತಮ ಜೊತೆಯಾಟದಿಂದಲೇ ನಿನ್ನೆಯ ಪಂದ್ಯದಲ್ಲಿ ಅಷ್ಟು ದೊಡ್ಡ ಮೊತ್ತದ ಟಾರ್ಗೆಟ್​ ನಿಡಲು ಸಾಧ್ಯವಾಯಿತು ಎಂಬುದು ಕ್ರಿಕೆಟ್​ ಪ್ರೇಮಿಗಳ ಮಾತಾಗಿದೆ. ಈ ಜೋಡಿ ಆರಂಭದಿಂದಲೂ ಆಂಗ್ಲ ವೇಗಿಗಳನ್ನು ಮನಬಂದಂತೆ ದಂಡಿಸಿದಲ್ಲದೆ, ತಂಡಕ್ಕೆ ಅವಶ್ಯಕವಾದ ಬೃಹತ್​ ಮೊತ್ತವನ್ನು ತಂದುಕೊಟ್ಟರು. ಈ ಇಬ್ಬರ ಜೊತೆಯಾಟವನ್ನು ಹೀಗೆ ಮುಂದುವರೆಸಿಕೊಂಡು ಹೋಗುವುದು ಒಳಿತು ಎಂಬುದು ಕ್ರಿಕಟ್​ ಪಂಡಿತರೆ ವಾದವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆ ನೀಡಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್​, ಕೊಹ್ಲಿಗೆ ಒಂದಿಷ್ಟು ಕಿವಿಮಾತು ಹೇಳಿದ್ದಾರೆ.

ಆರಂಭಿಕನಾಗಿ ಬ್ಯಾಟಿಂಗ್​ಗೆ ಇಳಿಯುವುದು ಒಳಿತು ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ನಿಮ್ಮ ಬೆಸ್ಟ್ ಬ್ಯಾಟ್ಸಮನ್ ಅತೀ ಹೆಚ್ಚು ಓವರ್​ಗಳನ್ನ ಎದುರಿಸಬೇಕಾಗಿದೆ. ಹೀಗಾಗಿ ನಾಯಕ ವಿರಾಟ್​ ಕೊಹ್ಲಿ ಟೀಂ ಇಂಡಿಯಾದ ಆರಂಭಿಕನಾಗಿ ಬ್ಯಾಟಿಂಗ್​ಗೆ ಇಳಿಯುವುದು ಒಳಿತು ಒಂದು ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿಗೆ ಈ ಅದೃಷ್ಟ ಕನ್ನಡಿಗ ರಾಹುಲ್​ ಅವರ ಕಳಪೆ ಫಾರ್ಮ್​ ಮೂಲಕ ಒದಗಿಬಂದಿದೆ ಎಂದರು. ಏಕೆಂದರೆ ರಾಹುಲ್​ ಕಳಪೆ ಫಾರ್ಮ್​ನಿಂದ ಬಳಲಿದರಿಂದಲೇ ಕೊಹ್ಲಿ ಅರಂಭಿಕನಾಗಿ ಕಣಕ್ಕಿಳಿದಿದ್ದು ಎಂದರು.

ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಲು​ ಬೆಸ್ಟ್​ ಉದಾಹರಣೆ ನೀಡಿದ ಗವಾಸ್ಕರ್, ಸಚಿನ್​ ಸೀಮಿತ ಓವರ್​ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲು ಪ್ರಾರಂಭಿಸಿದ ನಂತರ, ತೆಂಡೂಲ್ಕರ್​ ಆಟ ಹೇಗೆ ತಂಡಕ್ಕೆ ನೇರವಾಗಿತು ಎಂಬುದನ್ನು ನಿವು ಗಮನಿಸಬೇಕು ಎಂದರು. ಹೀಗಾಗಿ ತಂಡದ ಒಳಿತಿಗಾಗಿ ಕೊಹ್ಲಿ, ರಾಹುಲ್​ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವುದೇ ಉತ್ತಮ ಎಂದು ಸುನೀಲ್​ ಗಾವಸ್ಕರ್​ ಹೇಳಿಕೆ ನೀಡಿದ್ದಾರೆ.

ಬೃಹತ್​ ಟಾರ್ಗೆಟ್​ ಎದುರು ಮಂಡಿಯೂರಿದ ಇಂಗ್ಲೆಂಡ್ 225 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ಗೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದ್ರು. ಖಾತೆ ತೆರೆಯದೆ ಜೇಸನ್ ರಾಯ್ ವಿಕೆಟ್ ಒಪ್ಪಿಸಿದ್ರು. ಆದ್ರೆ 2ನೇ ವಿಕೆಟ್ಗೆ ಜೊತೆಯಾದ ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ 130 ರನ್ಗಳ ಜೊತೆಯಾಟವಾಡಿ ಇಂಗ್ಲೆಂಡ್, ಗೆಲುವಿನ ಆಸೆಯನ್ನ ಹೆಚ್ಚಿಸಿದ್ರು.

52 ರನ್ಗಳಿಸಿದ್ದ ಜೋಸ್ ಬಟ್ಲರ್ಗೆ 13ನೇ ಓವರ್ನಲ್ಲಿ ಭುವನೇಶ್ವರ್ ಗೇಟ್ ಪಾಸ್ ನೀಡಿದ್ರೆ, 68 ರನ್ಗಳಿಸಿದ್ದ ಮಲನ್ರನ್ನ 16ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಪೆವಿಲಿಯನ್ಗಟ್ಟಿದ್ರು. ನಂತರ ಬಂದ ನಾಯಕ ಇಯಾನ್ ಮಾರ್ಗನ್ಗೂ ಶಾರ್ದೂಲ್ ವಿಲನ್ ಆದ್ರು.

ಅಂತಿಮ ಬಾಲ್ ವರೆಗೂ ಇಂಗ್ಲೆಂಡ್ ಗೆಲುವಿಗಾಗಿ ಹೋರಾಡಿತಾದ್ರೂ, 8 ವಿಕೆಟ್ ನಷ್ಟಕ್ಕೆ 188 ರನ್ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಟೀಮ್ ಇಂಡಿಯಾ 36 ರನ್ಗಳ ಗೆಲುವು ದಾಖಲಿಸಿ, 3-2ರ ಅಂತರದಲ್ಲಿ ಸರಣಿಯನ್ನ ವಶಪಡಿಸಿಕೊಂಡಿತು. ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದ ಭುವನೇಶ್ವರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು.

ಇದನ್ನೂ ಓದಿ: India vs England 5th T20I live Score: ಸುಲಭ ಜಯದೊಂದಿಗೆ ಸರಣಿ ಮೇಲೆ ಒಡೆತನ ಸಾಧಿಸಿದ ಟೀಮ್ ಇಂಡಿಯಾ

Published On - 11:20 am, Sun, 21 March 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ