ಯಾರೆ ಆದರೂ ಸರಿ ಕ್ರೀಡೆಯಲ್ಲಿ ವಿಶ್ವ ದಾಖಲೆ ನಿರ್ಮಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಹಲವು ವರ್ಷಗಳ ಕಠಿಣ ಅಭ್ಯಾಸ ಬೇಕಾಗುತ್ತದೆ. ಆದರೆ ಅಮೆರಿಕದ ಈ ಓಟಗಾರನಿಗೆ ಒಂದಲ್ಲ 4 ವಿಶ್ವ ದಾಖಲೆಗಳನ್ನು ನಿರ್ಮಿಸಲು ಕೇವಲ 45 ನಿಮಿಷಗಳು ಬೇಕಾಯಿತು. ಮಧ್ಯಾಹ್ನ 3: 15 ರಿಂದ ಸಂಜೆ 4:00 ರವರೆಗೆ ಅವರು ಈ ಅದ್ಭುತ ಪ್ರದರ್ಶನವನ್ನು ನೀಡಿದ ಈ ಆಟಗಾರ ವಿಶ್ವ ದಾಖಲೆ ನಿರ್ಮಿಸಿದ. ಜೆಸ್ಸಿ ಓವೆನ್ಸ್ ಈ ಮಹಾನ್ ಆಟಗಾರನ ಹೆಸರು ಆತ ತಮ್ಮ ದಾಖಲೆಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಶೀರ್ಷಿಕೆ ದಿ ಮ್ಯಾಜಿಕ್ 45 ಮಿನಿಟ್ಸ್ ಎವರ್ ಇನ್ ಸ್ಪೋರ್ಟ್.
ಈ ಕಥೆಯು 1935 ರ ಬಿಗ್ ಟೆನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ಗಳದ್ದಾಗಿದೆ (ಆನ್ ಅರ್ಬರ್‌ನಲ್ಲಿ 1935 ಬಿಗ್ ಟೆನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್). 21 ವರ್ಷದ ಅಮೆರಿಕದ ಓಟಗಾರ ಜೆಸ್ಸಿ ಓವೆನ್ಸ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ, ನಂತರ ಲಾಂಗ್ ಜಂಪ್‌ನಲ್ಲಿ, ನಂತರ 220ಮೀಟರ್ ಓಟದ ಸ್ಪರ್ಧೆಯಲ್ಲಿ, ಮತ್ತು ಅಂತಿಮವಾಗಿ 220 ಮೀಟರ್ ಹರ್ಡಲ್ಸ್ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಈ ಎಲ್ಲಾ ದಾಖಲೆಗಳ ಒಂದು ಮುಖ್ಯಾಂಶವೆಂದರೆ, ಅಂದಿನ ಸ್ಪರ್ಧೆ ನಡೆಯುವ ಸಮಯದಲ್ಲಿ ಓವೆನ್ಸ್ ಬೆನ್ನಿನ ಗಾಯದಿಂದ ಬಳಲುತ್ತಿದ್ದರು. ಅದನ್ನು ಮೀರಿ ಓವೆನ್ಸ್ ಅದ್ಭುತ ಪ್ರದರ್ಶನ ನೀಡಿದರು.
ಮೊದಲನೆಯದು ಮಧ್ಯಾಹ್ನ 3: 15 ಕ್ಕೆ 100 ಮೀಟರ್ ಓಟದ ಸ್ಪರ್ಧೆ. ಇದರಲ್ಲಿ ಓವೆನ್ಸ್ ಆರಂಭಿಕ 30 ಗಜಗಳಷ್ಟು ದಾಟುತ್ತಿದ್ದಂತೆ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ಅವರು ಕೇವಲ 9.4 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿದರು, ವಿಶ್ವ ದಾಖಲೆಯನ್ನು ಸಮಗೊಳಿಸಿದರು.
ಸ್ವಲ್ಪ ಸಮಯದ ನಂತರ, ಓವೆನ್ಸ್ ಮಧ್ಯಾಹ್ನ 3: 25 ಕ್ಕೆ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಅವರು ಸುಮಾರು 26 ಅಡಿ 8 ಇಂಚುಗಳಷ್ಟು ಜಿಗಿದಿದ್ದರು. ಇಂದಿಗೂ ಈ ದಾಖಲೆ ಏಳನೇ ಸ್ಥಾನದಲ್ಲಿದೆ.
ಎರಡು ವಿಶ್ವ ದಾಖಲೆಗಳನ್ನು ಸ್ಥಾಪಿಸಿದ ನಂತರ ಮಧ್ಯಾಹ್ನ 3:34 ಕ್ಕೆ 220 ಮೀಟರ್ ಓಟದಲ್ಲಿ ಓವೆನ್ಸ್ ಮೂರನೇ ದಾಖಲೆ ನಿರ್ಮಿಸಿದರು. ಇಡೀ ಓಟವನ್ನು 20.3 ಸೆಕೆಂಡುಗಳಲ್ಲಿ ಓಡುವ ಮೂಲಕ ಓವೆನ್ಸ್ 20.6 ಸೆಕೆಂಡುಗಳ ಹಳೆಯ ದಾಖಲೆಯನ್ನು ಮುರಿದರು.
220 ಕಡಿಮೆ ಹರ್ಡಲ್ ಸ್ಪರ್ಧೆಯನ್ನು 22.6 ಸೆಕೆಂಡುಗಳಲ್ಲಿ ಸಂಜೆ 4 ಗಂಟೆಗೆ ಮುಗಿಸುವ ಮೂಲಕ ಓವೆನ್ಸ್ ಅಂತಿಮವಾಗಿ 23.2 ಸೆಕೆಂಡುಗಳ ದಾಖಲೆಯನ್ನು ಮುರಿದರು.