Ravichandran Ashwin Profile: ಭಾರತದಲ್ಲಿ ಆಂಗ್ಲರ ವಿರುದ್ಧ ಮಿಂಚಿದ್ದ ಅಶ್ವಿನ್ ಅವರ ನೆಲದಲ್ಲಿ ಭಾರತಕ್ಕೆ ನೆರವಾಗುತ್ತಾರಾ?

ICC World Test Championship 2021: ಒಟ್ಟು ಆಂಗ್ಲರ ವಿರುದ್ಧ 88 ವಿಕೆಟ್ ಪಡೆದಿರುವ ಅಶ್ವಿನ್ 55 ರನ್ ನೀಡಿ 6 ವಿಕೆಟ್ ತೆಗೆದಿರುವುದು ಒಂದು ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿದೆ.

Ravichandran Ashwin Profile: ಭಾರತದಲ್ಲಿ ಆಂಗ್ಲರ ವಿರುದ್ಧ ಮಿಂಚಿದ್ದ ಅಶ್ವಿನ್ ಅವರ ನೆಲದಲ್ಲಿ ಭಾರತಕ್ಕೆ ನೆರವಾಗುತ್ತಾರಾ?
ಆರ್​. ಅಶ್ವಿನ್​
Follow us
ಪೃಥ್ವಿಶಂಕರ
| Updated By: Skanda

Updated on: May 31, 2021 | 9:59 AM

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂತಹ ಸಂದರ್ಭದಲ್ಲೂ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಆಟಗಾರನೆಂದು ಈಗ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಟೀಂ ಇಂಡಿಯಾ ಪರ ತಮ್ಮ ಆಲ್​ರೌಂಡರ್​ ಆಟದಿಂದ ಇಂಗ್ಲೆಂಡ್ ವಿರುದ್ದ ಟೆಸ್ಟ್ ಗೆಲ್ಲಿಸಿಕೊಟ್ಟ ಶ್ರೇಯಾ ಅಶ್ವಿನ್​ಗೂ ಸಲ್ಲಬೇಕಿದೆ. ಕ್ರಿಕೆಟ್​ ಪ್ರೇಮಿಗಳು ಅಶ್ವಿನ್ ಅವರ ಇತ್ತೀಚಿನ ಹವ್ಯಾಸವೊಂದನ್ನು ಗಮನಿಸಿರಬಹುದು. ಭಾರತ ಟೆಸ್ಟ್ ಪಂದ್ಯವೊಂದನ್ನು ಗೆದ್ದಾಗ ನೆನಪಿಗೋಸ್ಕರ ಅವರ ಒಂದು ಸ್ಟಂಪ್ ತೆಗೆದುಕೊಳ್ಳುತ್ತಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅಶ್ವಿನ್ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅಶ್ವಿನ್​, 30 ವಿಕೆಟ್ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರು 30 ವಿಕೆಟ್​ಗಳನ್ನು ಪಡೆದಿದ್ದು, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 31 ವಿಕೆಟ್ ಪಡೆದಿದ್ದರು.

ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರ ಕರಾರುವಕ್ ದಾಳಿಗೆ ನಲುಗಿದ ಆಂಗ್ಲರು ಇನ್ನಿಂಗ್ಸ್ ಹಾಗೂ 25 ರನ್​ಗಳಿಂದ ಸೋಲು ಕಂಡಿದ್ದು, ಭಾರತ ಲಂಡನ್​ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ಗೆ ಪ್ರವೇಶ ಪಡೆದಿದೆ.

ನ್ಯೂಜಿಲೆಂಡ್ ವಿರುದ್ಧ ಅಶ್ವಿನ್ ಬೌಲಿಂಗ್ ನ್ಯೂಜಿಲೆಂಡ್ ವಿರುದ್ಧ 6 ಪಂದ್ಯಗಳನ್ನಾಡಿರುವ ಅಶ್ವಿನ್ 264.5 ಓವರ್ ಬೌಲಿಂಗ್ ಮಾಡಿ 815 ರನ್ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ 49 ಮೆಡನ್ ಓವರ್​ಗಳಿವೆ. ಒಟ್ಟು ಕಿವೀಸ್ ವಿರುದ್ಧ 48 ವಿಕೆಟ್ ಪಡೆದಿರುವ ಅಶ್ವಿನ್ 59 ರನ್ ನೀಡಿ 7 ವಿಕೆಟ್ ತೆಗೆದಿರುವುದು ಒಂದು ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿದೆ. ಒಂದು ಪಂದ್ಯದಲ್ಲಿ 5 ವಿಕೆಟ್​ಗಳನ್ನು 6 ಬಾರಿ ತೆಗೆದಿರುವ ಅಶ್ವಿನ್ 10 ವಿಕೆಟ್​ಗಳನ್ನು 3 ಬಾರಿ ತೆಗೆದಿದ್ದಾರೆ(ಎರಡು ಇನ್ನಿಂಗ್ಸ್ ಸೇರಿ)

ಇಂಗ್ಲೆಂಡ್ ವಿರುದ್ಧ ಅಶ್ವಿನ್ ಬೌಲಿಂಗ್ ಇಂಗ್ಲೆಂಡ್ ವಿರುದ್ಧ 19 ಪಂದ್ಯಗಳನ್ನಾಡಿರುವ ಅಶ್ವಿನ್ 907.2 ಓವರ್ ಬೌಲಿಂಗ್ ಮಾಡಿ 2516 ರನ್ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ 159 ಮೆಡನ್ ಓವರ್​ಗಳಿವೆ. ಒಟ್ಟು ಆಂಗ್ಲರ ವಿರುದ್ಧ 88 ವಿಕೆಟ್ ಪಡೆದಿರುವ ಅಶ್ವಿನ್ 55 ರನ್ ನೀಡಿ 6 ವಿಕೆಟ್ ತೆಗೆದಿರುವುದು ಒಂದು ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿದೆ. ಒಂದು ಪಂದ್ಯದಲ್ಲಿ 5 ವಿಕೆಟ್​ಗಳನ್ನು 6 ಬಾರಿ ತೆಗೆದಿರುವ ಅಶ್ವಿನ್ 10 ವಿಕೆಟ್​ಗಳನ್ನು 1 ಬಾರಿ ತೆಗೆದಿದ್ದಾರೆ(ಎರಡು ಇನ್ನಿಂಗ್ಸ್ ಸೇರಿ)

ಇಂಗ್ಲೆಂಡ್ ವಿರುದ್ಧ ಅಶ್ವಿನ್ ಬ್ಯಾಟಿಂಗ್ ಇಂಗ್ಲೆಂಡ್ ವಿರುದ್ಧ 19 ಪಂದ್ಯಗಳನ್ನಾಡಿರುವ ಅಶ್ವಿನ್ 970 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅಮೋಘ ಶತಕವು ಸೇರಿದೆ. 37.31 ರ ಸರಾಸರಿಯಲ್ಲಿ ರನ್ ಗಳಿಸಿರುವ ಅಶ್ವಿನ್ 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇದರಿಂದ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಆಲ್​ರೌಂಡರ್ ಪ್ರದರ್ಶನ ನೀಡಿರುವುದನ್ನು ನಾವು ಕಾಣಬಹುದಾಗಿದೆ.

ಮುರಳೀಧರನ್ ನಂತರ ವೇಗವಾಗಿ 400 ವಿಕೆಟ್ ಪಡೆದ ಅಶ್ವಿನ್ 400 ವಿಕೆಟ್ ಪಡೆಯುವ ವಿಷಯದಲ್ಲಿ ಅಶ್ವಿನ್ ಅನೇಕ ಅನುಭವಿಗಳನ್ನು ಹಿಂದಿಕ್ಕಿದ್ದಾರೆ. 400 ವಿಕೆಟ್ ಪಡೆದ ವಿಶ್ವದ ಎರಡನೇ ಅತಿ ವೇಗದ ಬೌಲರ್ ಎಂಬ ಹೆಗ್ಗಳಿಕೆ ಅಶ್ವಿನ್​ ಪಾಲಾಗಿದೆ. ಅಶ್ವಿನ್ ತಮ್ಮ 77ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮುರಳೀಧರನ್ 72 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡ್‌ನ ಬೌಲರ್ ರಿಚರ್ಡ್ ಹ್ಯಾಡ್ಲಿಯ ದಾಖಲೆಯನ್ನು ಮುರಿಯುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. 80 ಟೆಸ್ಟ್ ಪಂದ್ಯಗಳಲ್ಲಿ ಹ್ಯಾಡ್ಲಿ 400 ವಿಕೆಟ್ ಗಳಿಸಿದ್ದರು. ಹೆಡ್ಲಿಯೊಂದಿಗೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಸಹ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಶ್ರೀಲಂಕಾದ ರಂಗನಾ ಹೆರಾತ್ ಕೂಡ 84 ಟೆಸ್ಟ್ ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದಾರೆ.

600 ವಿಕೆಟ್ ಪಡೆದ ಭಾರತದ ಐದನೇ ಬೌಲರ್ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ 600 ಅಂತರರಾಷ್ಟ್ರೀಯ ವಿಕೆಟ್​ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ ಭಾರತದ ಐದನೇ ಬೌಲರ್ ಎನಿಸಿಕೊಂಡರು. ಟೆಸ್ಟ್‌ನಲ್ಲಿ 400 ವಿಕೆಟ್‌ಗಳಲ್ಲದೆ ಅಶ್ವಿನ್, ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ ಮತ್ತು ಟಿ 20 ಯಲ್ಲಿ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್​ಗು ಮೊದಲು ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ. ಮಾಜಿ ನಾಯಕ ಕುಂಬ್ಳೆ 956 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಇವರ ನಂತರ ಹರ್ಭಜನ್ 711 ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಈ ಇಬ್ಬರ ನಂತರ 687 ವಿಕೆಟ್ ಪಡೆದ ವಿಶ್ವ ವಿಜೇತ ನಾಯಕ ಕಪಿಲ್ ದೇವ್ ಮತ್ತು 610 ವಿಕೆಟ್ ಪಡೆದ ಜಹೀರ್ ಖಾನ್ ಹೆಸರು ಸಹ ಇದೆ.

ಇದನ್ನೂ ಓದಿ: ಈ ವ್ಯವಸ್ಥೆಯನ್ನು ಬದಲಾಯಿಸಬೇಕು.. 2 ಹೆಣ್ಣು ಮಕ್ಕಳ ತಂದೆಯಾಗಿ ನನಗೆ ಆತಂಕ ಶುರುವಾಗಿದೆ; ಕ್ರಿಕೆಟಿಗ ಆರ್. ಅಶ್ವಿನ್ 

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ