ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

ದೈಹಿಕವಾಗಿ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕವಾಗಿ ಆ ಕಷ್ಟಕೋಟಲೆಯಿಂದ ಹೊರಬರುವುದು ಕಷ್ಟಕಷ್ಟ. 5 ರಿಂದ 8ನೆಯ ದಿನಗಳಂದು ನಾನು ತುಂಬಾನೇ ಅನುಭವಿಸಿಬಿಟ್ಟೆ. ಎಲ್ಲರೂ ಕಣ್ಣಳತೆಯಲ್ಲೇ ಇದ್ದರೂ ಯಾರೂ ಏನೂ ಮಾಡುವುದಕ್ಕೆ ಆಗಲಿಲ್ಲ. ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ - ಪ್ರೀತಿ ಅಶ್ವಿನ್

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ
ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವಗಳನ್ನು ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ ಎಂದ ಕ್ರಿಕೆಟರ್ ಅಶ್ವಿನ್ ಅವರ ಪತ್ನಿ
Follow us
ಸಾಧು ಶ್ರೀನಾಥ್​
|

Updated on:May 01, 2021 | 3:36 PM

ಕೊರೊನಾ ಎಂಬ ಬ್ರಹ್ಮ ರಾಕ್ಷಸ ಕೆಚ್ಚೆದೆಯ ಕ್ರಿಕೆಟರ್ ರವಿಚಂದ್ರನ್​ ಅಶ್ವಿನ್​ ಅವರ ಕುಟುಂಬವನ್ನು ಹೈರಾಣಗೊಳಿಸಿದೆ. ಅಶ್ವಿನ್​ ಅವರ ಪತ್ನಿ ಪ್ರೀತಿ ನಾರಾಯಣ್ ತಮ್ಮ ಕುಟುಂಬ ಅನುಭವಿಸುತ್ತಿರುವ ದುರ್ಭರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರವಿಚಂದ್ರನ್​ ಅಶ್ವಿನ್ ಅವರು ತಮ್ಮ ಕುಟುಬದ ಪ್ರೀತಿ ಪಾತ್ರರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ತೊರೆದು ಪ್ರಸಕ್ತ ಐಪಿಎಲ್ 2021 ನಿಂದ ದೂರವಾಗಿದ್ದರು. ​

ತಮ್ಮ ಕುಟುಂಬಸ್ಥರ ಪೈಕಿ ಒಟ್ಟು 10 ಮಂದಿ ಈ ಕೊರೊನಾ ಮಹಾಮಾರಿಯ ವಿರುದ್ಧ ರುದ್ರಭೀಕರವಾಗಿ ಸೆಣೆಸಾಟ ನಡೆಸಿದ್ದೇವೆ. ಹಾಗಾಗಿಯೇ ಅಶ್ವಿನ್ ಅನಿವಾರ್ಯವಾಗಿ ಐಪಿಎಲ್ 2021 ಟೂರ್ನಿಯನ್ನು ಅರ್ಧಕ್ಕೇ ಬಿಟ್ಟುಬಂದರು ಎಂದು ಪ್ರೀತಿ ಅಶ್ವಿನ್ ಅವರು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕೊರೊನಾ ಮಹಾಮಾರಿ ಈಗಾಗಲೇ ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಅದೇ ರೀತಿ ವಿಶ್ವದ ಇತರೆಡೆ 30 ಲಕ್ಷ ಮಂದಿ ಪ್ರಾಣ ತೆತ್ತಿದ್ದಾರೆ.

ನಮ್ಮ ಕುಟುಂಬದಲ್ಲಿಯೇ ಆರು ಮಂದಿ ದೊಡ್ಡವರು ಮತ್ತು 4 ಚಿಕ್ಕ ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಇಬ್ಬೊಬ್ಬರೂ ಒಂದೊಂದು ನಗರದಲ್ಲಿ ಒಂದೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆವು. ಈ ಚಿಕ್ಕ ಚಿಕ್ಕ ಮಕ್ಕಳ ಮೂಲಕ ಮನೆ ಮಂದಿಗೆಲ್ಲ ಕೊರೊನಾ ಮೆತ್ತಿಕೊಂಡಿತು ಎಂದು ಪ್ರೀತಿ ಅಶ್ವಿನ್ ತಿಳಿಸಿದ್ದಾರೆ.

ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ:

ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ. ಇದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ಕೊರೊನಾ ವಿರುದ್ಧ ಹೋರಾಡುವುದಕ್ಕೆ ಒಳ್ಳೆಯ ಅವಕಾಶ ದೊರಕುತ್ತದೆ ಎಂದು ಅವರು ಉಚಿತ ಸಲಹೆ ನೀಡಿದ್ದಾರೆ.

ದೈಹಿಕವಾಗಿ ಹೇಗೋ ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕವಾಗಿ ಆ ಕಷ್ಟಕೋಟಲೆಯಿಂದ ಹೊರಬರುವುದು ಕಷ್ಟಕಷ್ಟ. 5 ರಿಂದ 8ನೆಯ ದಿನಗಳಂದು ನಾನು ತುಂಬಾನೇ ಅನುಭವಿಸಿಬಿಟ್ಟೆ. ಎಲ್ಲರೂ ಕಣ್ಣಳತೆಯಲ್ಲೇ ಇದ್ದರೂ ಯಾರೂ ಏನೂ ಮಾಡುವುದಕ್ಕೆ ಆಗಲಿಲ್ಲ. ಏಕಾಂಗಿ ಕಾಯಿಲೆ ಇದು. ಕಷ್ಟ ಹಂಚಿಕೊಳ್ಳುವ ಹಾಗಿಲ್ಲ. ದಯವಿಟ್ಟು ಎಲ್ಲ ರೀತಿಯ ಸಹಾಯ ಪಡೆಯಿರಿ ಎಂದು ಟ್ವೀಟ್​ ಮಾಡಿ ಪ್ರೀತಿ ಅಶ್ವಿನ್ ಹೇಳಿದ್ದಾರೆ.

(Ravichandran Ashwin Wife Prithi Shares how 10 of her Family members struggled With Covid 19) Also Read: ಕೊರೊನಾ ಕಾಟ: ​ಐಪಿಎಲ್ ಟೂರ್ನಿಯಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್, ಆರ್​ಸಿಬಿ ತಂಡಕ್ಕೂ ಬರೆ; ಇಬ್ಬರು ಸ್ವದೇಶಕ್ಕೆ ವಾಪಸ್​

Published On - 3:29 pm, Sat, 1 May 21