ಕೊರೊನಾ ಕಾಟ: ​ಐಪಿಎಲ್ ಟೂರ್ನಿಯಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್, ಆರ್​ಸಿಬಿ ತಂಡಕ್ಕೂ ಬರೆ; ಇಬ್ಬರು ಸ್ವದೇಶಕ್ಕೆ ವಾಪಸ್​

Ravichandran Ashwin withdraws from IPL: ಕೊರೊನಾ ಕಾಟ: ​ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್​. ಈ ಮಧ್ಯೆ, ಇಡೀ ದೇಶವೇ ಕೊರೊನಾದಿಂದ ನಲುಗುತ್ತಿರುವಾಗ ಐಪಿಎಲ್ ನಗುತ್ತಿರುವುದರ ಬಗ್ಗೆ ಕ್ರಿಕೆಟ್​ ಪ್ರೇಮಿಗಳೂ ಸೇರಿದಂತೆ ಎಲ್ಲೆಡೆಯೂ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಕೊರೊನಾದಿಂದಾಗಿ ಹಾಲಿ ಟೂರ್ನಿಯನ್ನು ಇಲ್ಲಿಗೇ ನಿಲ್ಲಿಸಿ ಎಂದು ಜನ ಕೇಳತೊಡಗಿದ್ದಾರೆ. ಹಾಲಿ ಐಪಿಎಲ್ ಟೂರ್ನಿ ಮೇ 30 ರವರೆಗೂ ನಡೆಯಲಿದೆ.

ಕೊರೊನಾ ಕಾಟ: ​ಐಪಿಎಲ್ ಟೂರ್ನಿಯಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್, ಆರ್​ಸಿಬಿ ತಂಡಕ್ಕೂ ಬರೆ; ಇಬ್ಬರು ಸ್ವದೇಶಕ್ಕೆ ವಾಪಸ್​
ಆರ್​. ಅಶ್ವಿನ್​
Follow us
ಸಾಧು ಶ್ರೀನಾಥ್​
|

Updated on:Apr 26, 2021 | 1:01 PM

ಕೆಚ್ಚೆದೆಯ ಆಟಗಾರ ಎಂದೇ ಕ್ರಿಕೆಟ್​ ಪ್ರೇಮಿಗಳಿಂದ ಗುರುತಿಸಲ್ಪಟ್ಟಿರುವ ಆರ್​ ಅಶ್ವಿನ್​ ಅವರು ಈ ಬಾರಿಯ ಐಪಿಎಲ್ 2021 ಗೆ ಗುಡ್​ ಬೈ ಹೇಳಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಸಕ್ತ ​ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ತಾವು ದೂರ ಸರಿಯುತ್ತಿರುವುದಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಆಡುವ ಸ್ಪಿನ್ನರ್ ತಮ್ಮ ನಿರ್ಧಾರ ಘೋಷಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ.. ಕೊರೊನಾ ಕಾಟ ಎಂಬುದಾಗಿ ಅವರು ಹೇಳಿದ್ದಾರೆ. ಕೊರೊನಾ ಸೋಂಕಿನಿಂದ ತಮ್ಮ ಕುಟುಂಬಸ್ಥರು ಬಳಲುತ್ತಿದ್ದಾರೆ. ಹಾಗಾಗಿ, ಈ ಪರಿಸ್ಥಿತಿಯಲ್ಲಿ ನಾನು ಅವರ ಜೊತೆಗೆ ಇರಬೇಕಾಗಿದೆ. ಹಾಗಾಗಿ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಟ್ವೀಟ್​ ಮಾಡಿ ಅಶ್ವಿನ್ ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​ ಅಶ್ವಿನ್​ ಅವರ ಈ ನಿರ್ಧಾರವನ್ನು ಸ್ವಾಗತಿಸಿ, ಟ್ವೀಟ್​ ಮಾಡಿದ್ದಾರೆ.

ಕೆಚ್ಚೆದೆಯ ಆಟಗಾರ 34 ವರ್ಷದ ಆರ್​ ಅಶ್ವಿನ್​ ಐಪಿಎಲ್ ಟೂರ್ನಿಯಿಂದ ದೂರ ಸರಿದಿರುವುದರಿಂದ ತಾವು ಆಡುವ ತಂಡ ಡೆಲ್ಲಿ ಕ್ಯಾಪಿಟಲ್ಸ್​ಗೆ ಭಾರಿ ಹೊಡೆತ ಬಿದ್ದಂತಾಗಿದೆ. ಜೊತೆಗೆ ಐಪಿಎಲ್ ಟೂರ್ನಿಗೂ ಇದು ನುಂಗಲಾರದ ತುತ್ತಾಗಿದೆ. ಆದರೆ ಕೊರೊನಾ ಮಾರಿ ದಿನೇದಿನೆ ದೇಶದಲ್ಲಿ ತನ್ನ ಕದಂಬಬಾಹುಗಳನ್ನು ಚಾಚುತ್ತಿರುವಾಗ ಪರಿಸ್ಥಿತಿ ಭೀಕರವೆನಿಸುತ್ತಿದೆ. 77 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅಶ್ವಿನ್​ ರವಿಚಂದ್ರನ್, 111 ODIs, 46 T20 Internationals ಪಂದ್ಯಗಳನ್ನು ಆಡಿದ್ದಾರೆ.

ಈ ಮಧ್ಯೆ, ಇಡೀ ದೇಶವೇ ಕೊರೊನಾದಿಂದ ನಲುಗುತ್ತಿರುವಾಗ ಐಪಿಎಲ್ ನಗುತ್ತಿರುವುದರ ಬಗ್ಗೆ ಕ್ರಿಕೆಟ್​ ಪ್ರೇಮಿಗಳೂ ಸೇರಿದಂತೆ ಎಲ್ಲೆಡೆಯೂ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಕೊರೊನಾದಿಂದಾಗಿ ಹಾಲಿ ಟೂರ್ನಿಯನ್ನು ಇಲ್ಲಿಗೇ ನಿಲ್ಲಿಸಿ ಎಂದು ಜನ ಕೇಳತೊಡಗಿದ್ದಾರೆ. ಹಾಲಿ ಐಪಿಎಲ್ ಟೂರ್ನಿ ಮೇ 30 ರವರೆಗೂ ನಡೆಯಲಿದೆ.

(Delhi Capitals spinner Ravichandran Ashwin withdraws from IPL to support family over COVID-19)

ಕೊರೊನಾ ಕಾಟವು ಆರ್​ಸಿಬಿ ತಂಡಕ್ಕೂ ಬರೆ ಹಾಕಿದೆ. ತಂಢದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಸ್ವದೇಶಕ್ಕೆ ವಾಪಸ್​ ಆಗಿದ್ದಾರೆ. ಆರ್​ಸಿಬಿ ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಕೇನ್ ರಿಚರ್ಡ್​ಸನ್ ಮತ್ತು ಅಡಂ ಜಂಪಾ ಅವರಿಬ್ಬರೂ ಕೊರೊನಾ ಸೋಂಕಿನ ಪ್ರಮಾಣ ಮಾರಣಾಂತಿಕವಾಗಿ ಹೆಚ್ಚುತ್ತಿರುವುದರಿಂದ ಸ್ವದೇಶಕ್ಕೆ ಮರಳಿದ್ದಾರೆ.

Published On - 10:15 am, Mon, 26 April 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ