
ಭಾರತದ ಹಿರಿಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಇಂದಿಗೆ 20 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 24 2000 ದಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

2000 ನೇ ಇಸವಿಯಲ್ಲಿ, ದೆಹಲಿ ಮತ್ತು ಇರಾನ್‌ನ ರಾಜಧಾನಿಯಾದ ಟೆಹ್ರಾನ್‌ನಲ್ಲಿ FIDE ವಿಶ್ವ ಚಾಂಪಿಯನ್‌ಶಿಪ್ ನಡೆಯಿತು. ಚಾಂಪಿಯನ್‌ಶಿಪ್‌ನ ಮೊದಲ ಆರು ಸುತ್ತುಗಳು ದೆಹಲಿಯಲ್ಲಿ ನಡೆದರೆ ಅಂತಿಮ ಪಂದ್ಯ ಟೆಹ್ರಾನ್‌ನಲ್ಲಿ ನಡೆಯಿತು. ಫೈನಲ್‌ನಲ್ಲಿ ವಿಶ್ವನಾಥನ್, ಸ್ಪೇನ್‌ನ ಅಲೆಕ್ಸೆಜ್ ಶಿರೋವ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು.

ಆನಂದ್ 17 ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್ ಆಗಿದಲ್ಲದೆ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಗೂ ಏಷ್ಯಾದ ಮೊದಲ ಆಟಗಾರ ಸಹ ಆಗಿದ್ದರು.

ವಿಶ್ವನಾಥನ್ ಆನಂದ್
Published On - 5:14 pm, Thu, 24 December 20