NBAಗೆ ಆಯ್ಕೆಯಾದ ಮೊದಲ ಭಾರತೀಯ ಆಟಗಾರ ಸತ್ನಮ್ ಸಿಂಗ್ ಭಮ್ರಾ ಬೆನ್ನತ್ತಿದ ಡೋಪಿಂಗ್ ವಿವಾದ

ಭಾರತದಲ್ಲಿ ಅನೇಕ ಹೆಸರಾಂತ ಕ್ರೀಡಾಪಟುಗಳ ಹೆಸರು ಡೋಪಿಂಗ್ ವಿವಾದದಲ್ಲಿ ಕೇಳಿಬರುತ್ತಿದೆ. ಡೋಪಿಂಗ್ ವಿವಾದದಲ್ಲಿ ಭಾರತೀಯ ಕ್ರೀಡಾಪಟುಗಳು ಕಳೆದ ವರ್ಷದಲ್ಲಿ ರಷ್ಯಾ ಮತ್ತು ಅಮೇರಿಕಾವನ್ನು ಹಿಂದಿಕ್ಕಿದ್ದಾರೆ ಎಂದು ಶಿಸ್ತು ಸಮಿತಿ ಹೇಳಿದೆ.

NBAಗೆ ಆಯ್ಕೆಯಾದ ಮೊದಲ ಭಾರತೀಯ ಆಟಗಾರ ಸತ್ನಮ್ ಸಿಂಗ್ ಭಮ್ರಾ ಬೆನ್ನತ್ತಿದ ಡೋಪಿಂಗ್ ವಿವಾದ
ಸತ್ನಂ ಸಿಂಗ್ ಭಮ್ರಾ
Follow us
ಪೃಥ್ವಿಶಂಕರ
|

Updated on:Dec 25, 2020 | 1:43 PM

ಭಾರತದಲ್ಲಿ ಅನೇಕ ಹೆಸರಾಂತ ಕ್ರೀಡಾಪಟುಗಳ ಹೆಸರು ಡೋಪಿಂಗ್ ವಿವಾದದಲ್ಲಿ ಕೇಳಿಬರುತ್ತಿದೆ. ಡೋಪಿಂಗ್ ವಿವಾದದಲ್ಲಿ ಭಾರತೀಯ ಕ್ರೀಡಾಪಟುಗಳು ಕಳೆದ ವರ್ಷದಲ್ಲಿ ರಷ್ಯಾ ಮತ್ತು ಅಮೇರಿಕಾವನ್ನು ಹಿಂದಿಕ್ಕಿದ್ದಾರೆ ಎಂದು ಶಿಸ್ತು ಸಮಿತಿ ಹೇಳಿದೆ.

ಡೋಪಿಂಗ್ ಆರೋಪಿತರಲ್ಲಿ ಎನ್‌ಬಿಎ (ನ್ಯಾಷನಲ್ ಬ್ಯಾಸ್ಕೆಟ್​ಬಾಲ್ ಅಸೊಸಿಯೇಷನ್) ತಂಡಕ್ಕೆ ಸೇರ್ಪಡೆಯಾದ ಮೊದಲ ಭಾರತೀಯ ಆಟಗಾರ ಸತ್ನಂ ಸಿಂಗ್ ಭಮ್ರಾ ಅವರ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ. ಕಳೆದ ವರ್ಷ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಭಮ್ರಾ ಅವರು ವಿಫಲರಾದ ಕಾರಣ ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಶಿಸ್ತಿನ ಸಮಿತಿ ಎರಡು ವರ್ಷಗಳ ಕಾಲ ಎನ್​ಬಿಎ ಆಟದಿಂದ ನಿಷೇಧಿಸಿತ್ತು.

ಕಳೆದ ವರ್ಷ ತಾತ್ಕಾಲಿಕ ಅಮಾನತು ಕಳೆದ ವರ್ಷ ನವೆಂಬರ್‌ನಲ್ಲಿ 25 ವರ್ಷದ ಭಮ್ರಾ ಅವರಿಗೆ ತಾತ್ಕಾಲಿಕ ಅಮಾನತು ವಿಧಿಸಲಾಗಿತ್ತು. ದಕ್ಷಿಣ ಏಷ್ಯಾ ಕ್ರೀಡಾಕೂಟದ ತಯಾರಿ ಶಿಬಿರದಲ್ಲಿ ಅವರು ನಾಡಾ ನಡೆಸುವ ಪರೀಕ್ಷೆಯಿಂದ ಹೊರಗುಳಿದಿದ್ದರು. 2015ರಲ್ಲಿ ಎನ್‌ಬಿಎ ತಂಡಕ್ಕೆ ಸೇರ್ಪಡೆಗೊಂಡಿದ್ದ ಭಮ್ರಾ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು ಜೊತೆಗೆ ನಾಡಾವನ್ನು, ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ವಿಚಾರಣೆಗೆ ಒಳಪಡಿಸಬೇಕೆಂದು ವಿನಂತಿಸಿದ್ದರು.

ನಾಡಾ ನಡೆಸಿದ ವಿಚಾರಣೆಯಲ್ಲಿ ಹಿಜೆನಮೈನ್ ಬೀಟಾ-2 ಅಗೊನಿಸ್ಟ್​ ಸೇವಿಸಿದ ಆರೋಪದಲ್ಲಿ ಬಾಸ್ಕೆಟ್‌ಬಾಲ್ ಆಟಗಾರ ಸತ್ನಮ್ ಸಿಂಗ್ ಭಮ್ರಾ ತಪ್ಪಿತಸ್ಥರೆಂದು ನಾಡಾ ಗುರುವಾರ ಟ್ವೀಟ್ ಮಾಡಿದೆ. ಹೀಗಾಗಿ ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ.

ಮುಂದಿನ ವರ್ಷ ನಿಷೇಧ ಅಂತ್ಯ.. ಭಮ್ರಾ ಅವರ ಅಮಾನತು 2019ರಿಂದ ಪ್ರಾರಂಭವಾಗಿರುವುದರಿಂದ ಮುಂದಿನ ವರ್ಷ ನವೆಂಬರ್ 19 ರಂದು ಕೊನೆಗೊಳ್ಳಲ್ಲಿದೆ. ವಾಡಾ ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿರುವ ಹಿಜೆನಮೈನ್​ನನ್ನು ಭಮ್ರಾ ಅವರು ಸೇವಿಸಿರುವುದು ಸಕಾರಾತ್ಮಕವಾಗಿ ಕಂಡುಬಂದಿರುವುದರಿಂದ ಭಮ್ರಾ ಅವರಿಗೆ ನಿಷೇಧ ಹೇರಿದೆ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಐದು ವರ್ಷಗಳ ಹಿಂದೆ ಭಮ್ರಾ ಅವರು ಎನ್‌ಬಿಎ ಆಟದಲ್ಲಿ ಸೇರ್ಪಡೆಗೊಂಡು ಇತಿಹಾಸ ನಿರ್ಮಿಸಿದರು. ನಂತರ ಅವರು ಟೆಕ್ಸಾಸ್ ಲೆಜೆಂಡ್ಸ್ ಆಫ್ ಡಲ್ಲಾಸ್ ಮೇವರಿಕ್ಸ್ ಜೊತೆ ಎರಡು ವರ್ಷಗಳ ಕಾಲ ಡೆವಲಪ್‌ಮೆಂಟ್ ಲೀಗ್‌ನಲ್ಲಿ ಆಡಿದ್ದಾರೆ.

Published On - 1:39 pm, Fri, 25 December 20

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ