ಕೊಹ್ಲಿ- ಅನುಷ್ಕಾ ನಡುವೆ ಬ್ಯಾಟ್ ಬ್ಯಾಲೆಂನ್ಸ್ ಚಾಲೆಂಜ್; ದಂಪತಿಗಳ ಸವಾಲಿನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

|

Updated on: Jul 03, 2021 | 7:17 PM

ವಿಶೇಷವೆಂದರೆ, ಅನುಷ್ಕಾ ಶರ್ಮಾ ಅವರು ಕ್ರಿಕೆಟ್‌ಗೆ ಸಂಬಂಧಿಸಿದ ಈ ಸವಾಲನ್ನು ಕೊಹ್ಲಿಗಿಂತ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಸಹ ಅವರನ್ನು ಹೊಗಳಿದ್ದಾರೆ.

ಕೊಹ್ಲಿ- ಅನುಷ್ಕಾ ನಡುವೆ ಬ್ಯಾಟ್ ಬ್ಯಾಲೆಂನ್ಸ್ ಚಾಲೆಂಜ್; ದಂಪತಿಗಳ ಸವಾಲಿನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ
ವಿರಾಟ್, ಅನುಷ್ಕಾ
Follow us on

ವಿರಾಟ್ ಕೊಹ್ಲಿಯನ್ನು ಕೇವಲ ಬ್ಯಾಟ್ಸ್‌ಮನ್‌ ಆಗಿ ಅಭಿಮಾನಿಗಳು ಇಷ್ಟಪಡುವುದು ಮಾತ್ರವಲ್ಲ, ಅನುಷ್ಕಾ ಶರ್ಮಾ ಅವರೊಂದಿಗೆ ಮಾಡುವ ಕೀಟಲೆಯನ್ನು ಸಹ ಜನ ಇಷ್ಟಪಡುತ್ತಾರೆ. ಮದುವೆಯಾದಾಗಿನಿಂದ, ಇಬ್ಬರೂ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸುದ್ದಿಯಾಗುತ್ತಲೆ ಇರುತ್ತಾರೆ. ಅನುಷ್ಕಾ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ ಅವರೊಂದಿಗಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ವಿಶೇಷ ಸವಾಲನ್ನು ಪೂರ್ಣಗೊಳಿಸಲು ಪಣ ತೊಟ್ಟಿದ್ದಾರೆ. ಇವರ ಈ ಚಾಲೆಂಜ್ ಕಂಡ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.

ವಿಶೇಷವೆಂದರೆ, ಅನುಷ್ಕಾ ಶರ್ಮಾ ಅವರು ಕ್ರಿಕೆಟ್‌ಗೆ ಸಂಬಂಧಿಸಿದ ಈ ಸವಾಲನ್ನು ಕೊಹ್ಲಿಗಿಂತ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಸಹ ಅವರನ್ನು ಹೊಗಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೂ ಮುಂಚೆಯೇ ಅನುಷ್ಕಾ ಶರ್ಮಾ ವಿರಾಟ್ ಅವರೊಂದಿಗಿನ ಅನೇಕ ಚಾಲೆಂಜ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಮತ್ತು ಅನುಷ್ಕಾ ನಡುವೆ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್
ವೀಡಿಯೊದಲ್ಲಿ, ಇಬ್ಬರೂ ಬ್ಯಾಟ್​ಗಳನ್ನು ಎರಡು ಬೆರಳುಗಳಲ್ಲಿ ಹಿಡಿದುಕೊಳ್ಳುವ ಸವಾಲನ್ನು ಪೂರ್ಣಗೊಳಿಸುತ್ತಿದ್ದಾರೆ. ಅನುಷ್ಕಾ ಒಂದು ಕಡೆ ಮತ್ತು ವಿರಾಟ್ ಇನ್ನೊಂದು ಕಡೆ ನಿಂತು ಈ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡುವಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೆ, ಅನುಷ್ಕಾ ಅದನ್ನು ಬಹಳ ಸುಲಭವಾಗಿ ಸಮತೋಲನಗೊಳಿಸುತ್ತಿದ್ದರು. ಬ್ಯಾಟ್ ಅನ್ನು ಸಮತೋಲನಗೊಳಿಸುವುದರ ಜೊತೆಗೆ, ಕೊಹ್ಲಿ ತಮ್ಮ ಫೋನ್ ಬಳಸುತ್ತಿರುವುದು ಕಂಡುಬಂತು. ಈ ವೀಡಿಯೊವನ್ನು ಹಂಚಿಕೊಂಡ ಅನುಷ್ಕಾ, ವಿರಾಟ್ ಅವರೊಂದಿಗೆ ಟಕಾ ತಕ್ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಮಾಡುವುದನ್ನು ನಾನು ತುಂಬಾ ಆನಂದಿಸಿದೆ. ಈ ರೀತಿಯ ಚಾಲೆಂಜನ್ನು ನೀವು ಪೂರ್ಣಗೊಳಿಸಿ ಎಂದು ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಮತ್ತು ಅನುಷ್ಕಾ ಅವರ ಅಭಿಮಾನಿಗಳು ಈ ಪೋಸ್ಟ್ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅಭಿಮಾನಿಗಳು ಸಹ ಅನುಷ್ಕಾ ಅವರನ್ನು ಸಾಕಷ್ಟು ಹೊಗಳಿದ್ದಾರೆ.

ಕೊಹ್ಲಿ ಅವರೊಂದಿಗೆ ಇಂಗ್ಲೆಂಡ್‌ನಲ್ಲಿರುವ ಅನುಷ್ಕಾ ಶರ್ಮಾ
ಅನುಷ್ಕಾ ಮತ್ತು ವಿರಾಟ್ ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ಮಗಳು ವಮಿಕಾಗೆ ಜನ್ಮ ನೀಡಿದಾಗಿನಿಂದ, ಅನುಷ್ಕಾ ವಿರಾಟ್ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಜೊತೆಗೆ ಅನುಷ್ಕಾ ಕೂ ತನ್ನ ಮತ್ತು ವಿರಾಟ್ ಅವರ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಕಾಲಕಾಲಕ್ಕೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಇಬ್ಬರೂ ತಮ್ಮ ಮಗಳ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಇದುವರೆಗೂ ಹಂಚಿಕೊಂಡಿಲ್ಲ.