
ಚೀನಾ ನೆಲದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದೆ. ಈ ಬಾರಿ ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ ಪದಕಗಳ ಚೀಲಕ್ಕೆ ಮತ್ತೊಂದು ಚಿನ್ನದ ಪದಕವನ್ನು ತುಂಬಿವೆ. ಶೂಟಿಂಗ್ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ (25m Pistol Team Event) ಚಿನ್ನ ಗೆದ್ದಿದ್ದಾರೆ. ಭಾರತದ ಮನು, ಇಶಾ ಮತ್ತು ರಿದಮ್ (Manu Bhaker, Esha Singh and Rhythm Sangwan) ಅವರು 25 ಮೀಟರ್ ಪಿಸ್ತೂಲ್ ಟೀಮ್ ಇವೆಂಟ್ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದು ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ ಗೆದ್ದ ನಾಲ್ಕನೇ ಚಿನ್ನದ ಪದಕವಾಗಿದೆ. ಅಲ್ಲದೆ ಕೇವಲ ಶೂಟಿಂಗ್ನಲ್ಲಿಯೇ ಭಾರತಕ್ಕೆ ಸಿಕ್ಕ ಎರಡನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಇವೆಂಟ್ನಲ್ಲಿ ಭಾರತ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿತ್ತು. ಆದರೆ, ಈ ಬಾರಿ ಭಾರತ ಚಿನ್ನಕ್ಕೆ ಗುರಿಯಾಗಿದ್ದು ರೈಫಲ್ನಿಂದಲ್ಲ, ಪಿಸ್ತೂಲ್ನಿಂದ.
ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ 12 ನೇ ಪದಕ: ಬೆಳ್ಳಿ ಗೆದ್ದ 17ರ ಬಾಲಕಿ ನೇಹಾ ಠಾಕೂರ್
ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಒಟ್ಟಾಗಿ 1790 ಅಂಕಗಳನ್ನು ಗಳಿಸಿದರು. ಶೂಟಿಂಗ್ನಲ್ಲಿ ಚಿನ್ನ ಗೆದ್ದ ಭಾರತದ ಮೂವರು ಪುತ್ರಿಯರಲ್ಲಿ ಮನು ಭಾಕರ್ ಅತ್ಯಧಿಕ 590 ಅಂಕಗಳನ್ನು ಗಳಿಸಿದರು. ಈ ಟೀಮ್ ಈವೆಂಟ್ನಲ್ಲಿ ಭಾರತ ಚಿನ್ನದ ಪದಕ ಗೆದ್ದರೆ, ಚೀನಾ ಬೆಳ್ಳಿ ಪದಕ ಗೆದ್ದಿತು. ಹಾಗೆಯೇ ದಕ್ಷಿಣ ಕೊರಿಯಾ ಕಂಚಿನ ಪದಕವನ್ನು ಗೆದ್ದುಕೊಂಡಿತು.
25 ಮೀಟರ್ ಪಿಸ್ತೂಲ್ ಟೀಮ್ ಈವೆಂಟ್ನಲ್ಲಿ ಚಿನ್ನ ಗೆಲ್ಲುವ ಮೊದಲು, ಭಾರತೀಯ ಮಹಿಳೆಯರು 50 ಮೀಟರ್ ರೈಫಲ್ 3 ಸ್ಥಾನಗಳ ಶೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅರ್ಥಾತ್, ನಾಲ್ಕನೇ ದಿನದ ಮೊದಲ ಪದಕ ಬೆಳ್ಳಿಯದ್ದಾಗಿದ್ದರೆ ಎರಡನೇ ಪದಕ ಚಿನ್ನವಾಗಿತ್ತು. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸೇರಿದಂತೆ ಮೂವರು ಮಹಿಳಾ ಶೂಟರ್ಗಳು ಒಟ್ಟಾಗಿ ಭಾರತಕ್ಕೆ ಬೆಳ್ಳಿ ಗೆದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Wed, 27 September 23