ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 12 ನೇ ಪದಕ: ಬೆಳ್ಳಿ ಗೆದ್ದ 17ರ ಬಾಲಕಿ ನೇಹಾ ಠಾಕೂರ್

Neha Thakur clinched silver medal: ನೇಹಾ ಠಾಕೂರ್ ಒಟ್ಟು 32 ಅಂಕಗಳೊಂದಿಗೆ ಮುಗಿಸುವ ಮೂಲಕ ಪರಾಕ್ರಮ ಪ್ರದರ್ಶಿಸಿದರು. 11 ರೇಸ್​ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿದರು. ಆದಾಗ್ಯೂ, ಇವರ ಪ್ರಯಾಣವು ಸಂಪೂರ್ಣವಾಗಿ ಸುಗಮವಾಗಿರಲಿಲ್ಲ. ಐದನೇ ರೇಸ್‌ನಲ್ಲಿ ನೀಡಿದ ಪ್ರದರ್ಶನವು ಕಳಪೆ ಆಗಿತ್ತು. ಕೇವಲ ಐದು ಅಂಕಗಳನ್ನು ಗಳಿಸಿದರು.

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 12 ನೇ ಪದಕ: ಬೆಳ್ಳಿ ಗೆದ್ದ 17ರ ಬಾಲಕಿ ನೇಹಾ ಠಾಕೂರ್
Neha Thakur
Follow us
Vinay Bhat
|

Updated on: Sep 26, 2023 | 12:19 PM

ಭಾರತದ ನೇಹಾ ಠಾಕೂರ್ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 (Asian Games 2023) ರಲ್ಲಿ ಬಾಲಕಿಯರ ಡಿಂಗಿ ILCA4 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇದು ನೌಕಾಯಾನದಲ್ಲಿ ಭಾರತದ ಮೊದಲ ಪದಕ ಮತ್ತು ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಒಟ್ಟಾರೆ 12 ನೇ ಪದಕವಾಗಿದೆ. ಭೋಪಾಲ್‌ನ ನ್ಯಾಷನಲ್ ಸೈಲಿಂಗ್ ಸ್ಕೂಲ್‌ನಿಂದ ಹೊರಹೊಮ್ಮಿದ ನೇಹಾ, ಒಟ್ಟು 32 ಅಂಕಗಳೊಂದಿಗೆ ಮುಗಿಸುವ ಮೂಲಕ ತನ್ನ ಪರಾಕ್ರಮ ಪ್ರದರ್ಶಿಸಿದರು. 11 ರೇಸ್​ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿದರು.

ನೇಹಾ ಅವರಿಗಿಂತ ಕೇವಲ ಒಂದು ಅಂಕ ಕಡಿಮೆ ಗಳಿಸಿದ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್‌ ಚಿನ್ನದ ಪದಕ ವಿಜೇತರಾದರು. ನೌಕಾಯಾನದಲ್ಲಿ, ನಾವಿಕನು ಭಾಗವಹಿಸಿದ ಎಲ್ಲಾ ರೇಸ್‌ಗಳನ್ನು ಗಣನೆಗೆ ತೆಗೆದುಕೊಂಡು ಜಯಶಾಲಿಯನ್ನು ತೀರ್ಮಾನಿಸಲಾಗುತ್ತದೆ.

ವಿಶ್ವಕಪ್​ನಲ್ಲಿ ಸೆಮಿಫೈನಲ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಇರ್ಫಾನ್ ಪಠಾಣ್

ಇದನ್ನೂ ಓದಿ
Image
ರಾಜ್ಕೋಟ್​ನಲ್ಲಿ ರನ್ ಮಳೆ: ಸೌರಾಷ್ಟ್ರ ಸ್ಟೇಡಿಯಂ ಪಿಚ್ ರಿಪೋರ್ಟ್ ನೋಡಿ
Image
ವಿಶ್ವಕಪ್​ನಿಂದ ಅಕ್ಷರ್ ಪಟೇಲ್ ಹೊರಕ್ಕೆ?: ಬಿಸಿಸಿಐಯಿಂದ ಬಿಗ್ ಅಪ್ಡೇಟ್
Image
IND vs AUS ಮೂರನೇ ಏಕದಿನಕ್ಕೆ ಮಳೆಯ ಕಾಟ?: ರಾಜ್ಕೋಟ್ ಹವಾಮಾನ ಹೀಗಿದೆ
Image
ನಾಳೆ ತೃತೀಯ ಏಕದಿನ: ಇನ್ನೂ ತಂಡ ಸೇರಿಕೊಳ್ಳದ ರೋಹಿತ್ ಶರ್ಮಾ?

ಬಾಲಕಿಯರ ಡಿಂಗಿ ILCA-4 ವಿಭಾಗದಲ್ಲಿ 11 ಕಠಿಣ ರೇಸ್‌ಗಳು ಇದ್ದವು. ತೀವ್ರ ಪೈಪೋಟಿಯ ನಡುವೆಯೂ ನೇಹಾ ಪ್ರಾಬಲ್ಯ ಮೆರೆದರು, ಒಟ್ಟು 32 ಅಂಕಗಳನ್ನು ಕಲೆಹಾಕಿದರು. ಆದಾಗ್ಯೂ, ಇವರ ಪ್ರಯಾಣವು ಸಂಪೂರ್ಣವಾಗಿ ಸುಗಮವಾಗಿರಲಿಲ್ಲ. ಐದನೇ ರೇಸ್‌ನಲ್ಲಿ ನೀಡಿದ ಪ್ರದರ್ಶನವು ಕಳಪೆ ಆಗಿತ್ತು. ಕೇವಲ ಐದು ಅಂಕಗಳನ್ನು ಗಳಿಸಿದರು. ಈ ಸ್ಕೋರ್ ಅನ್ನು ಕಡೆಗಣಿಸಿ ಒಟ್ಟು ಅಂಕಗಳಿಂದ ಕಳೆದಾಗ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.

19ನೇ ಏಷ್ಯನ್ ಗೇಮ್ಸ್​ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಬಾಚಿಕೊಂಡಿತು. ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿದ ಭಾರತದ ಶೂಟರ್‌ಗಳು ವಿಶ್ವ ದಾಖಲೆಯನ್ನೂ ಮುರಿದಿದರು. ರೋಯಿಂಗ್‌ನಲ್ಲೂ ಭಾರತಕ್ಕೆ ಕಂಚಿನ ಪದಕ ಲಭಿಸಿತು. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಫೈನಲ್​ನಲ್ಲಿ ಗೆಲ್ಲುವ ಮೂಲಕ ಚಿನ್ನ ಗೆದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ