ಕ್ರಿಕೆಟ್ ವಿಶ್ವದಲ್ಲೇ ಹೆಚ್ಚು ಜನರು ಮೆಚ್ಚುವ ಕ್ರೀಡೆಗಳಲ್ಲಿ ಒಂದಾಗಿದೆ. ಫುಟ್ಬಾಲ್, ರಗ್ಬಿ, ಟೆನಿಸ್, ಬ್ಯಾಡ್ಮಿಂಟನ್ ಅಭಿಮಾನಿಗಳ ಮಧ್ಯೆ, ಜಂಟಲ್ಮೆನ್ ಆಟವು ಪ್ರಪಂಚದಾದ್ಯಂತ ತನ್ನ ಸ್ಥಾನಮಾನ ಮತ್ತು ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಜೊತೆಗೆ ಉಪಖಂಡ ಮತ್ತು ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಈ ಆಟವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡೆಸುತ್ತದೆ. ಆದರೆ ಪ್ರತಿ ಕ್ರಿಕೆಟಿಂಗ್ ಆಡುವ ರಾಷ್ಟ್ರದ ತಂಡವನ್ನು ಆಯಾ ಮಂಡಳಿಗಳು ನಿರ್ವಹಿಸುತ್ತವೆ.
ಸುಗಮ ಕಾರ್ಯನಿರ್ವಹಣೆಯಿಂದ ದೇಶೀಯ ರಚನೆಯ ಬಗ್ಗೆ ಕಾಳಜಿ ವಹಿಸುವುದು. ಪ್ರಾಯೋಜಕತ್ವವನ್ನು ತರುವುದು, ಅವರ ಆಟಗಾರರಿಗೆ ಪಾವತಿ ಮತ್ತು ಇತರ ಸಂಪನ್ಮೂಲಗಳನ್ನು ನೋಡಿಕೊಳ್ಳುವುದು. ಆಟಕ್ಕೆ ಹೆಚ್ಚಿನ ಅಭಿಮಾನಿಗಳನ್ನು ಸೇರಿಸುವುದು, ದೊಡ್ಡ ಟಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದು. ಕಿರಿಯ-ಹಿರಿಯ ಅಥವಾ ಪುರುಷರ / ಮಹಿಳಾ ಕ್ರಿಕೆಟ್ ಕಾರ್ಯವನ್ನು ನೋಡಿಕೊಳ್ಳುವುದು. ಇಂತಹ ಹಲವು ಕೆಲಸಗಳನ್ನು ಈ ಮಂಡಳಿಗಳು ಮಾಡುತ್ತವೆ.
ಹೆಚ್ಚಿನ ಆದಾಯವನ್ನು ಗಳಿಸುವುದು
ನಿಸ್ಸಂದೇಹವಾಗಿ, ಪ್ರತಿ ಮಂಡಳಿಗೆ ಅವೆಲ್ಲಕ್ಕಿಂತ ದೊಡ್ಡ ವಿಚಾರವೆಂದರೆ ಹೆಚ್ಚಿನ ಆದಾಯವನ್ನು ಗಳಿಸುವುದು ಮತ್ತು ಅವರ ವಿತ್ತೀಯ ಸಂಪನ್ಮೂಲಗಳನ್ನು ನಿರ್ವಹಿಸುವುದು. ದಿನದ ಕೊನೆಯಲ್ಲಿ, ಕ್ರೀಡೆಯು ಬ್ಯಾಟ್ ಮತ್ತು ಬಾಲ್ ಮತ್ತು ಎಲ್ಲ ಆಟಗಾರರ ನಡುವೆ ಇರಬಹುದು, ಆದರೆ ಪ್ರತಿ ಕ್ರಿಕೆಟಿಂಗ್ ಮಂಡಳಿಗೂ ಅತ್ಯಂತ ಅಗತ್ಯವಾದ ಅಂಶವೆಂದರೆ ಅವರು ವಾರ್ಷಿಕವಾಗಿ ಗಳಿಸುವ ಒಟ್ಟು ಗಳಿಕೆಯಾಗಿ ಉಳಿದಿದೆ. ಮೇಲೆ ತಿಳಿಸಿದ, ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರತಿಯೊಂದು ಅಂಶವನ್ನು ನಿರ್ವಹಿಸಲು ಈ ಆದಾಯ ಹೆಚ್ಚಿನ ಸಹಾಯ ಮಾಡುತ್ತದೆ.
ಕೋವಿಡ್ -19 ಸಾಂಕ್ರಾಮಿಕವು ವಿಶ್ವದಾದ್ಯಂತ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹಾನಿಯನ್ನುಂಟುಮಾಡುತ್ತಿರುವುದರಿಂದ, ಇದು ಪ್ರತಿ ಕ್ರಿಕೆಟ್ ಮಂಡಳಿಯನ್ನು ತೊಂದರೆಗೀಡುಮಾಡಿದೆ. ಆದರೆ ಪ್ರತಿಷ್ಠಿತ ಮಂಡಳಿಗಳ ವಾರ್ಷಿಕ ಆದಾಯವನ್ನು ಗಮನಿಸಿದ ಮೇಲೆ ಈ ಎಲ್ಲಾ ಲೆಕ್ಕಾಚಾರಗಳು ಸುಳ್ಳು ಎಂದು ಬಾವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಬಿಸಿಸಿಐ ಎಂದಿನಂತೆ ತನ್ನ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಉಳಿದಂತೆ ಇತರ ಕ್ರಿಕೆಟ್ ಮಂಡಳಿಗಳ ಆದಾಯದ ವರದಿ ಹೀಗಿದೆ.
ಕ್ರಿಕೆಟ್ ಮಂಡಳಿ ಹಾಗೂ ಗಳಿಸಿರುವ ಆದಾಯ
ಪ್ರಮುಖ ಕ್ರಿಕೆಟ್ ಮಂಡಳಿ | 2021 ರಲ್ಲಿ ಗಳಿಸಿರುವ ಆದಾಯ |
BCCI (ಭಾರತ) | 3,730 ಕೋಟಿ |
CA (ಆಸ್ಟ್ರೇಲಿಯಾ) | 2,843 ಕೋಟಿ |
ECB (ಇಂಗ್ಲೆಂಡ್) | 2,135 ಕೋಟಿ |
PCB (ಪಾಕಿಸ್ತಾನ) | 811 ಕೋಟಿ |
BCB (ಬಾಂಗ್ಲಾದೇಶ) | 802 ಕೋಟಿ |
CSA (ದಕ್ಷಿಣ ಆಫ್ರಿಕಾ) | 485 ಕೋಟಿ |
NZC (ನ್ಯೂಜಿಲೆಂಡ್) | 210 ಕೋಟಿ |
WICB (ವೆಸ್ಟ್ ಇಂಡಿಸ್) | 116 ಕೋಟಿ |
ZCB (ಜಿಂಬಾಬ್ವೆ) | 113 ಕೋಟಿ |
SLC (ಶ್ರೀಲಂಕಾ) | 100 ಕೋಟಿ |
Published On - 4:42 pm, Sat, 29 May 21