ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಗೆದ್ದಾಗಿದೆ, ಈ ಹಿನ್ನೆಲೆಯಲ್ಲಿ ನಾಳೆ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಭಾರತ ಅಡುವ ಇಲೆವೆನ್ನಲ್ಲಿ ಪ್ರಯೋಗಗಳನ್ನು ಮಾಡುವ ಸಾಧ್ಯತೆಯಿದೆಯೇ?
ಮೂಲಗಳ ಪ್ರಕಾರ, ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಟೀಮಿನ ಅಗ್ರಮಾನ್ಯ ಬೌಲರ್ ಜಸ್ಪ್ರೀತ್ ಬುಮ್ರಾ ಆವರನ್ನು ನಾಳೆ ಆಡಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ನಡೆಯಲಿರುವುದರಿಂದ ಅದಕ್ಕೆ ಮೊದಲು ಈ ಆವೃತ್ತಿಯ ಕೆಲ ಪಂದ್ಯಗಳನ್ನು ಅವರು ಆಡಲೆಂಬ ಅಭಿಪ್ರಾಯ ಟೀಮ್ ಮ್ಯಾನೇಜ್ಮೆಂಟ್ ಹೊಂದಿದೆ.
ಓದುಗರಿಗೆ ಗೊತ್ತಿದೆ, ಆಸ್ಟ್ರೇಲಿಯ ಸಿಡ್ನಿಯಲ್ಲಿ ನಡೆದ ಮೊದಲೆರಡು 50-ಓವರ್ಗಳ ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ ರವಿವಾರದ ಟಿ20 ಐ ಪಂದ್ಯದ ಜೊತೆಗೆ ಸರಣಿಯನ್ನೂ ಸೋತಿರುವುದು ಅದರ ಆತ್ಮಗೌರವಕ್ಕೆ ಭಾರೀ ಹೊಡೆತ ನೀಡಿದೆ. ಈ ದೃಷ್ಟಿಯಲ್ಲಿ ಅದು ನಾಳಿನ ಪಂದ್ಯವನ್ನು ಗೆಲ್ಲಲು ತನ್ನಿಡೀ ಸಾಮರ
್ಥ್ಯವನ್ನು ವಿನಿಯೋಗಿಸಲಿದೆ. 50-ಓವರ್ಗಳ ಕೊನೆ ಪಂದ್ಯ ಮತ್ತು ಎರಡು ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಭಾರತಕ್ಕೆ ನಾಳಿನ ಪಂದ್ಯವನ್ನು ಗೆದ್ದು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆ ಇಟ್ಟುಕೊಂಡಿದೆ.
ಹಾಗಾದರೆ, ಕೊನೆಯ ಪಂದ್ಯಕ್ಕೆ ಭಾರತದ ಟೀಮ್ ಕಾಂಪೊಸಿಷನ್ ಹೇಗಿರಬಹುದು ಅಂತ ನೋಡುವ.
ಆರಂಭಿಕ ಜೋಡಿಯನ್ನು ಪ್ರಾಯಶಃ ಬದಲಾಯಿಸಲಿಕ್ಕಿಲ್ಲ. ಶಿಖರ್ ಧವನ್ ಮತ್ತು ಕೆ ಎಲ್ ರಾಹುಲ್ ಉತ್ತಮ ಆರಂಭಗಳನ್ನು ಒದಗಿಸಲು ವಿಫಲರಾದರೂ ವೈಯಕ್ತಿಕವಾಗಿ ಅವರು ತಲಾ ಒಂದೊಂದು ಅರ್ಧ ಶತಕವನ್ನು ಬಾರಿಸಿದ್ದಾರೆ. ಮಾಯಾಂಕ್ ಅಗರ್ವಾಲ್ ಅವರನ್ನು ಆಡಿಸುವ ಯೋಚನೆ ಟೀಮ್ ಮ್ಯಾನೇಜ್ಮೆಂಟ್ ಬಂದರೂ ಹಾಗೆ ಮಾಡುವ ಸಾಧ್ಯತೆಗಳಿಲ್ಲ. ಯಾಕೆಂದರೆ, ಸೀಮಿತ ಓವರ್ಗಳ ಸರಣಿಯ ನಂತರ ಶಿಖರ್ ಸ್ವದೇಶಕ್ಕೆ ಮರಳಲಿದ್ದಾರೆ, ಅವರು ಟೆಸ್ಟ್ಗಳನ್ನು ಆಡುವ ತಂಡದಲ್ಲಿಲ್ಲ. ಅದರೆ, ಮಾಯಾಂಕ್ ಟೆಸ್ಟ್ ಟೀಮಿನಲ್ಲಿದ್ದಾರೆ.
ರಾಹುಲ್ ವಿಕೆಟ್ಗಳ ಹಿಂದೆಯೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರನ್ನು ಬದಲಾವಣೆ ಮಾಡಲಾರರು. ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ, ಆದರೆ ಪಂದ್ಯ ಮುಗಿಯುವವರೆಗೆ ಬ್ಯಾಟ್ಮಾಡಲು ವಿಫಲರಾಗುತ್ತಿದ್ದಾರೆ. ನಾಳೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶವಿದೆ ಕೊಹ್ಲಿಗಿದೆ. ಹಾಗಾಗಿ ಅವರು ರಾಹುಲ್ಗೆ ನಾಯಕತ್ವವಹಿಸಿ ರೆಸ್ಟ್ ಮಾಡಲಾರರು.
ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಐಪಿಎಲ್ನಲ್ಲಿ ತೋರಿದ ಸ್ಪರ್ಶವನ್ನು ಪುನರಾವರ್ತಿಸಲು ವಿಫಲರಾಗಿದ್ದಾರೆ. ಆದರೆ ಅವರು ಶಿಖರ್ ಅವರಂತೆ ಟೆಸ್ಟ್ ಟೀಮಿನಲ್ಲಿ ಅವರೂ ಇಲ್ಲ. ಹಾಗಾಗಿ ಅವರಿಗೆ ವಿಶ್ವಕಪ್ಗೆ ಮೊದಲು ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಸಿಗಬಹುದು, ಅಂದರೆ ನಾಳಿನ ಪಂದ್ಯದಲ್ಲಿ ಅವರನ್ನು ಆಡಿಸಬಹುದು.
ಸಂಜು ಸ್ಯಾಮ್ಸನ್ ತಮಗೆ ನೀಡಿದ ಅವಕಾಶಗಳನ್ನು ಹಾಳು ಮಾಡಿಕೊಂಡರೆಂದೇ ಹೇಳಬಹುದು. ಎರಡು ಪಂದ್ಯಗಳಲ್ಲೂ ಅವರು ಒಂದೊಂದು ಸಿಕ್ಸರ್ ಬಾರಿಸಿದರೂ ದೊಡ್ಡ ಸ್ಕೋರ್ ದಾಖಲಿಸಲಿಲ್ಲ. ಅವರನ್ನು ಡ್ರಾಪ್ ಮಾಡಿ ಕರ್ನಾಟಕದ ಹುಡುಗ ಮನೀಶ್ ಪಾಂಡೆ ಅವರನ್ನು ಆಡಿಸಬಹುದು.
ಎರಡನೇ ಪಂದ್ಯವನ್ನು ಭಾರತಕ್ಕೆ ಗೆದ್ದುಕೊಟ್ಟ ಹಾರ್ದಿಕ್ ಪಾಂಡ್ಯ ಆವರನ್ನು ರೆಸ್ಟ್ ತೆಗೆದುಕೊಳ್ಳಿ ಎಂದು ಹೇಳುವ ಪ್ರಮೇಯವೇ ಉದ್ಭವಿಸದು. ಆದರೆ ಮೊದಲ ಪಂದ್ಯದಲ್ಲಿ ವಿರೋಚಿತ ಆಟವಾಡಿದ ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರು ನಾಳೆ ಆಡಲಾರರು.
ಎರಡನೆ ಟಿ20 ಪಂದ್ಯದಲ್ಲಿ ದುಬಾರಿಯಾದ ವಾಷಿಂಗ್ಟನ್ ಸುಂದರ್ ನಿಶ್ಚಿತವಾಗಿಯೂ ನಾಳಿನ ಪಂದ್ಯ ಆಡಲಿದ್ದಾರೆ. ಅವರನ್ನೂ ವಿಶ್ವಕಪ್ಗೆ ತಯಾರು ಮಾಡಬೇಕಿದೆ.
ಬೌಲರ್ಗಳಲ್ಲಿ ಬುಮ್ರಾ ಅವರನ್ನು ಆಡಿಸಬೇಕಾದರೆ, ಟಿ20 ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಲು ವಿಫಲರಾಗಿರುವ ದೀಪಕ್ ಚಹರ್ ಅವರನ್ನು ಕೈಬಿಡಬೇಕಾಗುತ್ತದೆ. ನಟರಾಜನ್ ಅವರನ್ನಾಗಲೀ ಅಥವಾ ಶಾರ್ದಲ್ ಠಾಕುರ್ ಅವರನ್ನಾಗಲಿ ಹೊರಗೆ ಕೂರಿಸುವುದು ಒಳ್ಳೆ ಕ್ರಮವೆನಿಸಲಾರದು. ಸುಂದರ್ ಅವರ ಜೊತೆಗಾರ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಲ್ ಆಡಲಿದ್ದಾರೆ.
ಪ್ರಾಯಶಃ ಈ ಕಾಂಪೊಸಿಷನ್ ಜೊತೆಗೆ ನಾಳೆ ಟೀಮ್ ಇಂಡಿಯ ಮೈದಾನಕ್ಕಿಳಿಯಬಹುದು.