ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿರುವ ಟ್ರೆವರ್ ಹಾನ್ಸ್ ಕೇನ್ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.
‘‘ಕೇನ್ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಅದು ಅವರ ವೈಯಕ್ತಿಕ ನಿರ್ಧಾರ ಮತ್ತು ಕ್ರಿಕೆಟ್ ಅಸ್ಟ್ರೇಲಿಯಾ ಅದನ್ನು ಬೆಂಬಲಿಸುತ್ತದೆ. ಅವರ ನಿರ್ಧಾರವನ್ನ ನಾವು ಅರ್ಥಮಾಡಿಕೊಳ್ಳಬಲ್ಲೆವು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಇರಲು ಇಷ್ಟಪಡುತ್ತಾರೆ,’’ ಎಂದು ಹಾನ್ಸ್ ಹೇಳಿದ್ದಾರೆ.
ಓದುಗರಿಗೆ ನೆನೆಪಿರಬಹುದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೇನ್ ಅವರನ್ನು ಐಪಿಎಲ್ 2020 ಸೀಸನ್ಗೆ ಅವರನ್ನು ಹೈರ್ ಮಾಡಿತ್ತು. ಆದರೆ, ಹೆರಿಗೆ ಸಂದರ್ಭದಲ್ಲಿ ಪತ್ನಿಯೊಂದಿಗಿರಲು ಬಯಸಿ ಆಸ್ಟ್ರೇಲಿಯಾಗೆ ವಾಪಸ್ಸು ಹೋಗಿದ್ದರು. ಕೇನ್ ರಾಜಸ್ತಾನ್ ರಾಯಲ್ಸ್ ತಂಡಕ್ಕೂ ಆಡಿದ್ದಾರೆ.
ಕೇನ್ ಪ್ರತಿಭಾವಂತ ವೇಗದ ಬೌಲರ್ ಅಗಿದ್ದರೂ ತಮ್ಮ ರಾಷ್ಟ್ರದ ಪರ ಇನ್ನೂ ಟೆಸ್ಟ್ಗೆ ಪಾದಾರ್ಪಣೆ ಮಾಡಿಲ್ಲ. ಆದರೆ, 25 ಒಡಿಐ ಮತ್ತು 21 ಟಿ20ಐ ಪಂದ್ಯಗಳನ್ನು ಆಸ್ಟ್ರೇಲಿಯಾಗೆ ಆಡಿದ್ದಾರೆ. 50 ಒವರ್ಗಳ ಮ್ಯಾಚ್ಗಳಲ್ಲಿ 39 ಮತ್ತು 20 ಓವರ್ಗಳ ಪಂದ್ಯಗಳಲ್ಲಿ 22 ವಿಕೆಟ್ಗಳನ್ನು ಪಡೆದಿದ್ದಾರೆ.
ಅವರ ಸ್ಥಾನಕ್ಕೆ ಆಯ್ಕೆಯಾಗಿರುವ 33-ವರ್ಷದ ಟೈ ಕೂಡ ಬಹಳ ಅನುಭವಿ ಬೌಲರ್ ಏನಲ್ಲ. ಅವರು 7 ಒಡಿಐ ಮತ್ತು 26 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಅವರು ಚೆನೈ ಸೂಪರ್ ಕಿಂಗ್ಸ್. ಗುಜರಾತ್ ಲಯನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಪರ ಟೀಮುಗಳನ್ನು ಪ್ರತಿನಿಧಿಸಿದ್ದಾರೆ.