ಕಾಮನ್‌ವೆಲ್ತ್ ಗೇಮ್ಸ್‌ಗೆ (Commonwealth Games) ಕ್ಷಣಗಣನೆ ಆರಂಭವಾಗಿದೆ. ಸ್ಪರ್ಧಾ ಸ್ಥಳಕ್ಕೆ ಕ್ರೀಡಾಪಟುಗಳು ಬರಲಾರಂಭಿಸಿದ್ದಾರೆ. ಜುಲೈ 28 ರಂದು ಬರ್ಮಿಂಗ್ಹ್ಯಾಮ್‌ನ ಹೊಸದಾಗಿ ನವೀಕರಿಸಿದ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 11 ದಿನಗಳ ಬಹು-ಕ್ರೀಡಾ ಕಾರ್ಯಕ್ರಮದ ಅಧಿಕೃತ ಆರಂಭವಾಗಲಿದೆ. ಭಾರತ ತಂಡವು 30,000 ಪ್ರೇಕ್ಷಕರ ಮುಂದೆ ದೇಶದ ಧ್ವಜವನ್ನು ಹಿಡಿದು ವೇದಿಕೆಯಾದ್ಯಂತ ಸಾಗಲಿದೆ. ಆದರೆ ತ್ರಿವರ್ಣ ಧ್ವಜವನ್ನು ಯಾರು ಹಾರಿಸುತ್ತಾರೆ? ಎಂಬುದು ಪ್ರಶ್ನೆಯಾಗಿದೆ. ನೀರಜ್ ಚೋಪ್ರಾ (Neeraj Chopra) ಹೆಸರು ಇಲ್ಲಿಯವರೆಗೂ ಕೇಳಿ ಬಂದಿತ್ತು. ಜಾವೆಲಿನ್‌ನಲ್ಲಿ ಕಳೆದ ವರ್ಷದ ಒಲಿಂಪಿಕ್ ಚಾಂಪಿಯನ್ ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು. ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಅವರ ಹೆಸರೂ ಧ್ವಜಧಾರಿಯಾಗಿ ಕೇಳಿಬರುತ್ತಿದೆ. ನೀರಜ್ ಅಥವಾ ಸಿಂಧೂ ಅಲ್ಲ, ಆದರೆ ಭಾರತೀಯ ಒಲಿಂಪಿಕ್ ಸಂಸ್ಥೆ ಇನ್ನೂ ಯಾರ ಹೆಸರನ್ನು ಅಂತಿಮಗೊಳಿಸಿಲ್ಲ.
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೇಶದಿಂದ 215 ಕ್ರೀಡಾಪಟುಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಸ್ಪರ್ಧೆಯ ಆರಂಭದ ಮೊದಲು, ಹಲವಾರು ಕಾಮನ್‌ವೆಲ್ತ್ ಅಥ್ಲೀಟ್‌ಗಳು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿ ಐವರು ತಂಡದಿಂದ ಹೊರಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಪ್ಯಾರಾ ಅಥ್ಲೀಟ್‌ಗಳೂ ಇದ್ದಾರೆ. ಈ ನಡುವೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಧ್ವಜಧಾರಿ ವಿಚಾರದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಒಲಿಂಪಿಕ್ ಚಾಂಪಿಯನ್ ನೀರಜ್ 2018 ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದರು. ಆ ವರ್ಷ, ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ತ್ರಿವರ್ಣ ಧ್ವಜವನ್ನು ಹೊತ್ತಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ನೀರಜ್ ಹೆಸರು ಸದ್ದು ಮಾಡಿತ್ತು. ಆದರೆ ಉದ್ಘಾಟನಾ ಸಮಾರಂಭದ ದಿನ ನೀರಜ್ ಲಭ್ಯರಾಗುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಮೊದಲಿಗೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಈಗತಾನೇ ಮುಗಿದಿದ್ದು, ಜಾವೆಲಿನ್ ಥ್ರೋ ಅರ್ಹತಾ ಹಂತವು ಆಗಸ್ಟ್ 5 ರಂದು ಪ್ರಾರಂಭವಾಗಲಿದೆ. ಆದ್ದರಿಂದ ನೀರಜ್ ಇತರರಿಗಿಂತ ಸ್ವಲ್ಪ ತಡವಾಗಿ ಬರ್ಮಿಂಗ್ಹ್ಯಾಮ್ ತಲುಪಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಈ ನಿಟ್ಟಿನಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಡಾ. ಅನಿಲ್ ಖನ್ನಾ ಮಾತನಾಡಿ, ವಿಶ್ವ ಅಥ್ಲೆಟಿಕ್ಸ್ ಈಗಷ್ಟೇ ಮುಗಿದಿದೆ ಹಾಗಾಗಿ ನೀರಜ್ ಚೋಪ್ರಾ ಯಾವಾಗ ಇಲ್ಲಿಗೆ ಆಗಮಿಸುತ್ತಾರೆ ಎಂಬುದನ್ನು ಕಾದುನೋಡಬೇಕು ಎಂದಿದ್ದಾರೆ. ಹೀಗಾಗಿ ಮಾರ್ಚ್‌ಪಾಸ್ಟ್‌ನಲ್ಲಿ ಭಾರತದ ಧ್ವಜಧಾರಿ ಯಾರು ಎಂಬುದು ಮುಂದಿನ 24 ಗಂಟೆಗಳಲ್ಲಿ ಅಂತಿಮವಾಗಲಿದೆ.” ನೀರಜ್ ಒಬ್ಬರೇ ಲಭ್ಯವಿಲ್ಲದಿದ್ದರೆ ಧ್ವಜಾರೋಹಣದ ಜವಾಬ್ದಾರಿಯನ್ನು ಪಿವಿ ಸಿಂಧು ಅವರಿಗೆ ನೀಡಲಾಗುವುದು. ಬ್ಯಾಡ್ಮಿಂಟನ್ ತಂಡವು ಈಗಾಗಲೇ ಗೇಮ್ಸ್ ವಿಲೇಜ್ ತಲುಪಿದೆ. ಅಲ್ಲದೆ ಸಿಂಧು 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜಧಾರಿಯಾಗಿದ್ದರು.
ಮೇಲಿನ ಎರಡು ಹೆಸರುಗಳ ಹೊರತಾಗಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ರವಿಕುಮಾರ್ ದಹಿಯಾ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅಥವಾ ಬಾಕ್ಸರ್ ಲೊವ್ಲಿನಾ ಬಾರ್ಗೋಹಿನ್, ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಝರಿನ್ ಕೂಡ ಧ್ವಜಧಾರಿ ಲಿಸ್ಟ್ನಲ್ಲಿದ್ದಾರೆ.
Published On - 8:10 pm, Mon, 25 July 22