CWG 2022: ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮಹಿಳಾ ಸ್ಟಾರ್ ಕ್ರಿಕೆಟರ್​ಗೆ ಕೊರೊನಾ

CWG 2022: ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತ ಭಾರೀ ಹಿನ್ನಡೆ ಅನುಭವಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯೊಬ್ಬರು ಬರ್ಮಿಂಗ್‌ಹ್ಯಾಮ್‌ಗೆ ವಿಮಾನ ಹತ್ತುವ ಮುನ್ನವೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

CWG 2022: ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮಹಿಳಾ ಸ್ಟಾರ್ ಕ್ರಿಕೆಟರ್​ಗೆ ಕೊರೊನಾ
ಭಾರತ ಮಹಿಳಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jul 21, 2022 | 9:26 PM

ಕಾಮನ್‌ವೆಲ್ತ್ ಗೇಮ್ಸ್ (Commonwealth Games) ಆರಂಭಕ್ಕೂ ಮುನ್ನವೇ ಭಾರತ ಭಾರೀ ಹಿನ್ನಡೆ ಅನುಭವಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ (Indian women’s cricket team) ಸದಸ್ಯೆಯೊಬ್ಬರು ಬರ್ಮಿಂಗ್‌ಹ್ಯಾಮ್‌ಗೆ ವಿಮಾನ ಹತ್ತುವ ಮುನ್ನವೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್​ಪ್ರೆಸ್ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಜುಲೈ 29 ರಂದು ಆಡಬೇಕಾಗಿದೆ.

ಜುಲೈ 29 ರಿಂದ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿದ್ದು, ಆಗಸ್ಟ್ 7 ರಂದು ಕಂಚಿನ ಪದಕ ಮತ್ತು ಚಿನ್ನದ ಪದಕದ ಪಂದ್ಯಗಳು ನಡೆಯಲಿವೆ. ಸುದೀರ್ಘ ಸಮಯದ ನಂತರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಥಾನ ಪಡೆದಿದೆ. ಈ ಪಂದ್ಯಗಳಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾರ್ಬಡೋಸ್ ಇವೆ. ಮತ್ತೊಂದೆಡೆ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.

1998 ರ ನಂತರ ಮತ್ತೆ ಬರುತ್ತಿದೆ

ಇದನ್ನೂ ಓದಿ
Image
CWG 2022, Cricket T20: ಭಾರತದಿಂದ ಬಾರ್ಬಡೋಸ್‌ವರೆಗೆ ಎಲ್ಲಾ ತಂಡಗಳು, ಪಂದ್ಯ, ಸ್ವರೂಪದ ಪೂರ್ಣ ವಿವರ
Image
IND vs WI: ಹೊಸಬರಿಗೆ ಹೆಚ್ಚಿನ ಅವಕಾಶ; ಕೆರಿಬಿಯನ್ ದೈತ್ಯರನ್ನು ಮಣಿಸುವ ಧವನ್ ಪಡೆಯ ಸಂಭಾವ್ಯ XI ಹೀಗಿದೆ
Image
WI vs IND: ಭಾರತ-ವಿಂಡೀಸ್ ಪಂದ್ಯ ಯಾವ ಚಾನೆಲ್​ನಲ್ಲಿ ನೇರಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸುದೀರ್ಘ ಸಮಯದ ನಂತರ ಕ್ರಿಕೆಟ್ ಮರಳಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಆಟಗಳಲ್ಲಿ ಮೊದಲ ಬಾರಿಗೆ 1998 ರಲ್ಲಿ ಕ್ರಿಕೆಟ್ ತನ್ನ ಸ್ಥಾನವನ್ನು ಪಡೆದುಕೊಂಡಿತು. ನಂತರ ಪುರುಷರ ಕ್ರಿಕೆಟ್‌ ಸೇರ್ಪಡೆಗೊಂಡಿತು. ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ, ಚಾಂಪಿಯನ್ ಪಟ್ಟಕ್ಕೇರಿತ್ತು. ಇದಾದ ಬಳಿಕ ಈ ವರ್ಷ ಮತ್ತೆ ಕ್ರಿಕೆಟ್ ಸೇರ್ಪಡೆಯಾಗಿದ್ದರೂ ಈ ಬಾರಿ ಮಹಿಳಾ ಕ್ರಿಕೆಟ್​ಗೆ ಸ್ಥಾನ ಸಿಕ್ಕಿದೆ.

ಭಾರತ ತಂಡದಿಂದ ನಿರೀಕ್ಷೆಗಳು

ಈ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ನಡೆದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದಕ್ಕೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು 2-1 ಅಂತರದಿಂದ ಸೋಲಿಸಿತ್ತು. ಕಾಮನ್‌ವೆಲ್ತ್ ಗೇಮ್ಸ್​ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ತಂಡದ ಕಮಾಂಡ್ ಹರ್ಮನ್‌ಪ್ರೀತ್ ಕೌರ್ ಕೈಯಲ್ಲಿದೆ. ಸ್ಮೃತಿ ಮಂಧಾನ ಅವರನ್ನು ತಂಡದ ಉಪನಾಯಕಿಯನ್ನಾಗಿ ಮಾಡಲಾಗಿದೆ.

ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡ – ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್ ಮೇಘನಾ, ತಾನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್‌ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್ ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ.

Published On - 9:16 pm, Thu, 21 July 22