CWG 2022, Cricket T20: ಭಾರತದಿಂದ ಬಾರ್ಬಡೋಸ್‌ವರೆಗೆ ಎಲ್ಲಾ ತಂಡಗಳು, ಪಂದ್ಯ, ಸ್ವರೂಪದ ಪೂರ್ಣ ವಿವರ
CWG 2022, Cricket T20: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಕ್ರಿಕೆಟ್ ಎಂಟ್ರಿಕೊಟ್ಟಿದ್ದರೆ, ಮಹಿಳಾ ಕ್ರಿಕೆಟ್ ಕೂಡ ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಅಖಾಡಕ್ಕಿಳಿಯುತ್ತಿದೆ.
ಕಾಮನ್‌ವೆಲ್ತ್ ಗೇಮ್ಸ್‌ಗೆ (Commonwealth Games) ಮರಳಲು ಕ್ರಿಕೆಟ್ ಸಜ್ಜಾಗಿದೆ, ಜುಲೈ 29 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ (T20 format) ಕ್ರಿಕೆಟ್ ಎಂಟ್ರಿಕೊಟ್ಟಿದ್ದರೆ, ಮಹಿಳಾ ಕ್ರಿಕೆಟ್ ಕೂಡ ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಅಖಾಡಕ್ಕಿಳಿಯುತ್ತಿದೆ.
1998 ರಲ್ಲಿ ಮಲೇಷಿಯಾದ ಕೌಲಾಲಂಪುರ್‌ನಲ್ಲಿ ಈ ಕ್ರೀಡೆಯನ್ನು ಒಮ್ಮೆ ಮಾತ್ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲಾಗಿತ್ತು. ಆಗ ಪುರುಷರ ತಂಡಗಳು ಮಾತ್ರ ಸ್ಪರ್ಧಿಸಿದ್ದವು ಮತ್ತು ಪಂದ್ಯಾವಳಿಯನ್ನು 50-ಓವರ್‌ಗಳ ಸ್ವರೂಪದಲ್ಲಿ ಆಡಲಾಯಿತು. ಇಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಹೊರಹೊಮ್ಮಿತು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದವು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು ಎಂಟು ಮಹಿಳಾ ತಂಡಗಳು ಸ್ಪರ್ಧಿಸಲಿದ್ದು, ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ICC ವೆಬ್‌ಸೈಟ್‌ನ ಪ್ರಕಾರ ಈ ಬಾರಿ ಪಂದ್ಯಗಳನ್ನು T20 ಮಾದರಿಯಲ್ಲಿ ಆಡಲಾಗುತ್ತಿದೆ.
ತಂಡಗಳು
ಗುಂಪು ಎ: ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಬಾರ್ಬಡೋಸ್
ಗುಂಪು ಬಿ: ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ
ಫಾರ್ಮ್ಯಾಟ್
ಪ್ರತಿ ತಂಡವು ತನ್ನ ಗುಂಪಿನ ಇತರ ಮೂರು ತಂಡಗಳೊಂದಿಗೆ ಒಮ್ಮೆ ಆಡುತ್ತದೆ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾರ್ಬಡೋಸ್ ಎ ಗುಂಪಿನಲ್ಲಿದ್ದರೆ, ಬಿ ಗುಂಪು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಶ್ರೀಲಂಕಾವನ್ನು ಒಳಗೊಂಡಿದೆ.
ಎಲ್ಲಾ 16 ಪಂದ್ಯಗಳು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಪಂದ್ಯಗಳು ಜುಲೈ 29 ರಂದು ಪ್ರಾರಂಭವಾಗಲಿದ್ದು, ಅಂತಿಮ ಮತ್ತು ಮೂರನೇ ಸ್ಥಾನದ ಪ್ಲೇಆಫ್ ಪಂದ್ಯವನ್ನು ಆಗಸ್ಟ್ 7 ರಂದು ನಿಗದಿಪಡಿಸಲಾಗಿದೆ. ಆಗಸ್ಟ್ 1 ಮತ್ತು ಆಗಸ್ಟ್ 5 ರಂದು ದಿನಕ್ಕೆ ಎರಡು ಪಂದ್ಯಗಳನ್ನು ಆಡಲಾಗುತ್ತದೆ. ಮೊದಲ ಪಂದ್ಯ IST ಮಧ್ಯಾಹ್ನ 3.30ಕ್ಕೆ ಮತ್ತು ಎರಡನೇ ಪಂದ್ಯ ರಾತ್ರಿ 10.30ಕ್ಕೆ ಆರಂಭವಾಗಲಿದೆ.
CWG 2022 ರಲ್ಲಿ ಭಾರತದ ಪಂದ್ಯಗಳು
– ಆಸ್ಟ್ರೇಲಿಯಾ, ಶುಕ್ರವಾರ, ಜುಲೈ 29 ಸಂಜೆ 4.30 IST – ಪಾಕಿಸ್ತಾನ, ಭಾನುವಾರ, ಜುಲೈ 31 ಸಂಜೆ 4.30 IST – ಬಾರ್ಬಡೋಸ್, ಬುಧವಾರ, ಆಗಸ್ಟ್ 3 11.30 pm IST
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡುತ್ತಿರುವ ಎಲ್ಲಾ ತಂಡಗಳ ವಿವರ ಇಲ್ಲಿದೆ:
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ತನಿಯಾ ಸಪ್ನಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್‌ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಎಸ್ ಜೆಮಿಮಾ ರೋಡ್ರಿಗಸ್, ಹರ್ಲೆನ್ ರಾಡ್ರಿಗಸ್, ರಾಧಾ ಯಾದವ್ .
ಆಸ್ಟ್ರೇಲಿಯಾ: ಮೆಗ್ ಲ್ಯಾನ್ನಿಂಗ್ (ನಾಯಕಿ), ರಾಚೆಲ್ ಹೇನ್ಸ್, ಡಾರ್ಸಿ ಬ್ರೌನ್, ನಿಕೋಲಾ ಕ್ಯಾರಿ, ಆಶ್ಲೀಗ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಅಲಿಸ್ಸಾ ಹೀಲಿ, ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನಾಬೆಲ್ ಸದರ್ಲ್ಯಾಂಡ್, ಅಮಂಡಾ-ಜೆಡೆಲ್ಯಾಂಡ್ ವೆಲ್ಲಿಂಗ್ಟನ್.
ಬಾರ್ಬಡೋಸ್: ಆಲಿಯಾ ಅಲೀನ್, ಶಾನಿಕಾ ಬ್ರೂಸ್, ಶಾಯ್ ಕ್ಯಾರಿಂಗ್ಟನ್, ಶಾಂಟೆ ಕ್ಯಾರಿಂಗ್ಟನ್, ಶಾಮಿಲಿಯಾ ಕಾನೆಲ್, ಡಿಯಾಂಡ್ರಾ ಡಾಟಿನ್, ಕೀಲಾ ಎಲಿಯಟ್, ಟ್ರಿಶನ್ ಹೋಲ್ಡರ್, ಕೈಸಿಯಾ ನೈಟ್, ಕಿಶೋನಾ ನೈಟ್, ಹೇಲಿ ಮ್ಯಾಥ್ಯೂಸ್, ಅಲಿಸಾ ಸ್ಕ್ಯಾಂಟಲ್ಬರಿ, ಷಕೆರಾ ಸೆಲ್ಮನ್.
ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಮಾಯಾ ಬೌಚಿಯರ್, ಕ್ಯಾಥರೀನ್ ಬ್ರಂಟ್, ಆಲಿಸ್ ಕ್ಯಾಪ್ಸೆ, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಸಾರಾ ಗ್ಲೆನ್, ಆಮಿ ಜೋನ್ಸ್, ಫ್ರೇಯಾ ಕೆಂಪ್, ನ್ಯಾಟ್ ಸ್ಕೈವರ್, ಬ್ರಯೋನಿ ಸ್ಮಿತ್, ಇಸ್ಸಿ ವಾಂಗ್, ಡ್ಯಾನಿ ವ್ಯಾಟ್.
ನ್ಯೂಜಿಲೆಂಡ್: ಸೋಫಿ ಡಿವೈನ್ (ನಾಯಕಿ), ಸುಜೀ ಬೇಟ್ಸ್, ಈಡನ್ ಕಾರ್ಸನ್, ಇಜ್ಜಿ ಗೇಜ್, ಕ್ಲೌಡಿಯಾ ಗ್ರೀನ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಹೇಲಿ ಜೆನ್ಸನ್, ಫ್ರಾನ್ ಜೊನಾಸ್, ಅಮೆಲಿಯಾ ಕೆರ್, ರೋಸ್ಮರಿ ಮೈರ್, ಜೆಸ್ ಮ್ಯಾಕ್‌ಫಾಡಿನ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ತಾಹು, ಲಿಯಾ ತಾಹು.
ಪಾಕಿಸ್ತಾನ: ಬಿಸ್ಮಾ ಮರೂಫ್ (ನಾಯಕಿ), ಐಮನ್ ಅನ್ವರ್, ಅಲಿಯಾ ರಿಯಾಜ್, ಅನಮ್ ಅಮೀನ್, ಆಯೇಶಾ ನಸೀಮ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಇರಾಮ್ ಜಾವೇದ್, ಕೈನಾತ್ ಇಮ್ತಿಯಾಜ್, ಮುನೀಬಾ ಅಲಿ ಸಿದ್ದಿಕಿ, ನಿದಾ ದಾರ್, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ತುಬಾ ಹಸನ್.
ದಕ್ಷಿಣ ಆಫ್ರಿಕಾ: ಸುನೆ ಲೂಸ್ (ನಾಯಕಿ), ಕ್ಲೋಯ್ ಟ್ರಯಾನ್, ಅನ್ನೆಕೆ ಬಾಷ್, ತ್ರಿಶಾ ಚೆಟ್ಟಿ, ನಾಡಿನ್ ಡಿ ಕ್ಲರ್ಕ್, ಮಿಗ್ನಾನ್ ಡು ಪ್ರೀಜ್, ಲಾರಾ ಗುಡಾಲ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ನಾನ್‌ಕುಲುಲೆಕೊ ಮ್ಲಾಬಾ, ತುಮಿ, ಲಾರಾ ವೊಲ್ವಾರ್ಡ್ಟ್.
ಶ್ರೀಲಂಕಾ: ಚಮರಿ ಅಟಾಪಟು (ನಾಯಕಿ), ಹಾಸಿನಿ ಪೆರೆರಾ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಮಲ್ಶಾ ಶೆಹಾನಿ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅಮಾ ಕಾಂಚನಾ, ಅಚಿನಿ ಕುಲಸೂರಿಯಾ, ಇನೋಕಾ ರಣವೀರ, ಉದೇಶಿಕಾ ಪ್ರಬೋಧನಿ,ಸುಗಂದಿಕಾ ಕುಮಾರಿ, ರಶ್ಮಿ ಡಿ ಸಿಲ್ವಾ, ಓಷದಿ ರಣಸಿಂಗ್, ಅನುಷ್ಕಾ ಸಂಜೀವನಿ.
ಇಲ್ಲಿ ಗಮನಿಸಿ: ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಸಾರ ಮಾಡಲಿದೆ.
Published On - 3:19 pm, Thu, 21 July 22