AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

BCCI Releases 2026 IPL Phase 2 Dates & Venues: ಬಿಸಿಸಿಐ 2026 ರ ಐಪಿಎಲ್‌ನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. 50 ಲೀಗ್ ಹಂತದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಪ್ರಮುಖ ನಗರಗಳಲ್ಲಿ ನಡೆಯಲಿವೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ರೋಮಾಂಚಕ ಪಂದ್ಯಗಳು ಜರುಗಲಿವೆ.

IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Ipl 2026
ಪೃಥ್ವಿಶಂಕರ
|

Updated on:Mar 26, 2026 | 7:24 PM

Share

2026 ರ ಐಪಿಎಲ್​ನ (IPL 2026) ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಇಂದು ಪ್ರಕಟಿಸಿದೆ. 50 ಪಂದ್ಯಗಳನ್ನು ಒಳಗೊಂಡ ಲೀಗ್ ಹಂತದ ಉಳಿದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24, 2026 ರವರೆಗೆ ಭಾರತದ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ್ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಉಳಿದಂತೆ ಪ್ಲೇಆಫ್‌ ಸುತ್ತಿನ 4 ಪಂದ್ಯಗಳ ವೇಳಾಪಟ್ಟಿಯನ್ನು ಕೊನೆಯ ವಾರದಲ್ಲಿ ಘೋಷಿಸಲಾಗುವುದು. ಆದಾಗ್ಯೂ ಈ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 84 ಕ್ಕೆ ಹೆಚ್ಚಿಸಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಿಸಿಸಿಐ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದೆ 74 ಪಂದ್ಯಗಳಿಗೆ ಸೀಮಿತಗೊಳಿಸಿದೆ.

8 ಡಬಲ್ ಹೆಡರ್ ಪಂದ್ಯಗಳು

ಟೂರ್ನಿಯ ಎರಡನೇ ಹಂತ ಏಪ್ರಿಲ್ 13 ರಂದು ಆರಂಭವಾಗಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಹಂತದಲ್ಲಿ ಒಟ್ಟು ಎಂಟು ಡಬಲ್-ಹೆಡರ್‌ಗಳು, ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಎಂದಿನಂತೆ ಮಧ್ಯಾಹ್ನದ ಪಂದ್ಯಗಳು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾದರೆ, ಸಂಜೆ ಪಂದ್ಯಗಳು ಸಂಜೆ 7:30 ಕ್ಕೆ ಪ್ರಾರಂಭವಾಗಲಿವೆ. ಇನ್ನು ತಂಡಗಳ ತವರು ಮೈದಾನಗಳಿಗೆ ಸಂಬಂಧಿಸಿದಂತೆ, ಪಂಜಾಬ್ ಕಿಂಗ್ಸ್ ತಮ್ಮ ತವರು ಪಂದ್ಯಗಳನ್ನು ನ್ಯೂ ಚಂಡೀಗಢ ಮತ್ತು ಧರ್ಮಶಾಲಾದಲ್ಲಿ ಆಡಲಿದೆ. ರಾಜಸ್ಥಾನ ರಾಯಲ್ಸ್ ಜೈಪುರದಲ್ಲಿ ನಾಲ್ಕು ತವರು ಪಂದ್ಯಗಳನ್ನು ಆಡಲಿದೆ.ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರಿನಲ್ಲಿ ಮೂರು ತವರು ಪಂದ್ಯಗಳು ಮತ್ತು ರಾಯ್‌ಪುರದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ಎರಡನೇ ಹಂತದ ವೇಳಾಪಟ್ಟಿ

21. ಏಪ್ರಿಲ್ 13 (ಸೋಮವಾರ): ರಾಜಸ್ಥಾನ ರಾಯಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)

22. ಏಪ್ರಿಲ್ 14 (ಮಂಗಳವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)

23. ಏಪ್ರಿಲ್ 15 (ಬುಧವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)

24. ಏಪ್ರಿಲ್ 16 (ಗುರುವಾರ): ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)

25. ಏಪ್ರಿಲ್ 17 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)

26. ಏಪ್ರಿಲ್ 18 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಮಧ್ಯಾಹ್ನ 3:30)

27. ಏಪ್ರಿಲ್ 18 (ಶನಿವಾರ): ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)

28. ಏಪ್ರಿಲ್ 19 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಮಧ್ಯಾಹ್ನ 3:30)

29. ಏಪ್ರಿಲ್ 19 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)

30. ಏಪ್ರಿಲ್ 20 (ಸೋಮವಾರ): ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)

31. ಏಪ್ರಿಲ್ 21 (ಮಂಗಳವಾರ): ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)

32. ಏಪ್ರಿಲ್ 22 (ಬುಧವಾರ): ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)

33. ಏಪ್ರಿಲ್ 23 (ಗುರುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)

34. ಏಪ್ರಿಲ್ 24 (ಶುಕ್ರವಾರ): ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)

35. ಏಪ್ರಿಲ್ 25 (ಶನಿವಾರ): ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಡೆಲ್ಲಿ (ಮಧ್ಯಾಹ್ನ 3:30)

36. ಏಪ್ರಿಲ್ 25 (ಶನಿವಾರ): ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)

37. ಏಪ್ರಿಲ್ 26 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಮಧ್ಯಾಹ್ನ 3:30)

38. ಏಪ್ರಿಲ್ 26 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)

39. ಏಪ್ರಿಲ್ 27 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)

40. ಏಪ್ರಿಲ್ 28 (ಮಂಗಳವಾರ): ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)

41. ಏಪ್ರಿಲ್ 29 (ಬುಧವಾರ): ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)

42. ಏಪ್ರಿಲ್ 30 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)

43. ಮೇ 01 (ಶುಕ್ರವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)

44. ಮೇ 02 (ಶನಿವಾರ): ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)

45. ಮೇ 03 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಮಧ್ಯಾಹ್ನ 3:30)

46. ​​ಮೇ 03 (ಭಾನುವಾರ): ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)

47. ಮೇ 04 (ಸೋಮವಾರ): ಲಕ್ನೋ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)

48. ಮೇ 05 (ಮಂಗಳವಾರ): ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)

49. ಮೇ 06 (ಬುಧವಾರ): ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)

50. ಮೇ 07 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)

51. ಮೇ 08 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)

52. ಮೇ 09 (ಶನಿವಾರ): ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)

53. ಮೇ 10 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಮಧ್ಯಾಹ್ನ 3:30)

54. ಮೇ 10 (ಭಾನುವಾರ): ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)

55. ಮೇ 11 (ಸೋಮವಾರ): ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)

56. ಮೇ 12 (ಮಂಗಳವಾರ): ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)

57. ಮೇ 13 (ಬುಧವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)

58. ಮೇ 14 (ಗುರುವಾರ): ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)

59. ಮೇ 15 (ಶುಕ್ರವಾರ): ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)

60. ಮೇ 16 (ಶನಿವಾರ): ಗುಜರಾತ್ ಟೈಟಾನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)

61. ಮೇ 17 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಮಧ್ಯಾಹ್ನ 3:30)

62. ಮೇ 17 (ಭಾನುವಾರ): ರಾಜಸ್ಥಾನ ರಾಯಲ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)

63. ಮೇ 18 (ಸೋಮವಾರ): ಸನ್‌ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)

64. ಮೇ 19 (ಮಂಗಳವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)

65. ಮೇ 20 (ಬುಧವಾರ): ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)

66. ಮೇ 21 (ಗುರುವಾರ): ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)

67. ಮೇ 22 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)

68. ಮೇ 23 (ಶನಿವಾರ): ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)

69. ಮೇ 24 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಮಧ್ಯಾಹ್ನ 3:30)

70. ಮೇ 24 (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Thu, 26 March 26

Follow Us