Aaron Finch: ಮೈದಾನದಲ್ಲಿ ಅಂಪೈರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಆ್ಯರೋನ್ ಫಿಂಚ್: ನಿಷೇಧದ ಭೀತಿಯಲ್ಲಿ ಆಸೀಸ್ ನಾಯಕ

| Updated By: Vinay Bhat

Updated on: Oct 11, 2022 | 11:15 AM

AUS vs ENG T20I: ಫಿಂಚ್ ಬಳಿಸಿದ ಅನುಚಿತ ಭಾಷೆ ICC ನೀತಿ ಸಂಹಿತೆಯ ನಿಯಮ 1 ಉಲ್ಲಂಘಿಸಿರುವುದಾಗಿದೆ. ಜೊತೆಗೆ ICC ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದ್ದಾಗಿದೆ.

Aaron Finch: ಮೈದಾನದಲ್ಲಿ ಅಂಪೈರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಆ್ಯರೋನ್ ಫಿಂಚ್: ನಿಷೇಧದ ಭೀತಿಯಲ್ಲಿ ಆಸೀಸ್ ನಾಯಕ
Aaron Finch and Umpire
Follow us on

ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ (Australia vs England) ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಮೊದಲ ಪಂದ್ಯದಲ್ಲಿ ಕಾಂಗರೂ ಪಡೆ ತವರಿನಲ್ಲೇ ಸೋಲಿನ ಮುಖಭಂಗ ಅನುಭವಿಸಿದೆ. ಪರ್ತ್​ನಲ್ಲಿ ನಡೆದ ಹೈಸ್ಕೋರ್ ಪಂದ್ಯದಲ್ಲಿ 209 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಆಸೀಸ್ 9 ರನ್​ಗಳಿಂದ ಸೋಲುಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 0-1 ಅಂತರದ ಹಿನ್ನಡೆ ಅನುಭವಿಸಿದೆ. ಇದರ ನಡುವೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ (Aaron Finch) ಅಂಪೈರ್​ಗೆ ನಿಂದಿಸಿದ ಘಟನೆ ನಡೆದಿದ್ದು ನಿಷೇಧದ (Ban) ಭೀತಿಯಲ್ಲಿದ್ದಾರೆ.

ಆಸ್ಟ್ರೇಲಿಯಾ ಬೌಲಿಂಗ್​ನ 9ನೇ ಓವರ್​ನಲ್ಲಿ ಕ್ಯಾಮ್ರೋನ್ ಗ್ರಿನ್ ಶಾರ್ಟ್ ಬಾಲ್ ಹಾಕಿದ್ದು ಜೋಸ್ ಬಟ್ಲರ್ ಅಪ್ಪರ್ ಕಟ್ ಹೊಡೆಯಲು ಯತ್ನಿಸಿದರು. ಆದರೆ, ಚೆಂಡು ಸರಿಯಾಗಿ ಬ್ಯಾಟ್​ಗೆ ಸಿಕ್ಕದೆ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕೈ ಸೇರಿತು. ಅತ್ತ ವೇಡ್ ಚೆಂಡು ಬ್ಯಾಟ್​ಗೆ ತಾಗಿರಬಹುದು, ಔಟೆಂದು ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದರು.

ಇದನ್ನೂ ಓದಿ
IND vs SA 3rd ODI: ನಿರ್ಣಾಯಕ ಕದನಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ: ಫೋಟೋ ನೋಡಿ
Virat Kohli: ವಿರಾಟ್ ಕೊಹ್ಲಿಗೆ ಸ್ಪೆಷಲ್ ಟ್ರೈನಿಂಗ್ ನೀಡುತ್ತಿರುವ ಕೋಚ್ ರಾಹುಲ್ ದ್ರಾವಿಡ್: ನೆಟ್​ನಲ್ಲಿ ಏನು ಮಾಡ್ತಿದ್ದಾರೆ ನೋಡಿ
IND vs SA: ಇಂದು ಭಾರತ- ದ. ಆಫ್ರಿಕಾ ಮೂರನೇ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜು
Shreyas Iyer: ಏಕದಿನ ಕ್ರಿಕೆಟ್​ನ ಚೇಸ್ ಮಾಸ್ಟರ್ ಶ್ರೇಯಸ್ ಅಯ್ಯರ್..! ಅಂಕಿಅಂಶಗಳು ಅದನ್ನೇ ಹೇಳುತ್ತಿವೆ

ಈ ಸಂದರ್ಭ ನಾಯಕ ಫಿಂಚ್ ರಿವ್ಯೂ ತೆಗೆದುಕೊಳ್ಳಬೇಕೇ ಎಂದು ಸಹ ಆಟಗಾರರಲ್ಲಿ ಕೇಳುತ್ತಾರೆ. ಆದರೆ, ಅವರಿಗೆ ಖಚಿತ ಉತ್ತರ ಬರುವುದಿಲ್ಲ. ಆಗ ಸ್ವತಃ ಫಿಂಚ್ ಅಂಪೈರ್ ಬಳಿ ಹೋಗಿ ಈ ಕ್ಯಾಚ್ ವಿಕೆಟ್‌ ಕೀಪರ್ ಮ್ಯಾಥ್ಯೂ ವೇಡ್‌ ಹಿಡಿದಿದ್ದಾರೆಯೇ ಎಂದು ಕೇಳಿದರು. ಫಿಂಚ್​ಗೆ ಆನ್-ಫೀಲ್ಡ್ ಅಂಪೈರ್‌ಗಳು ಸರಿಯಾದ ಉತ್ತರವನ್ನು ನೀಡಲಿಲ್ಲ, ಅಲ್ಲದೆ ಡಿಆರ್‌ಎಸ್ ಕೂಡ ಮೀರಿ ಹೋಯಿತು. ಇದರಿಂದ ಕೋಪಗೊಂಡ ಫಿಂಚ್ ಅಂಪೈರ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

 

ಫಿಂಚ್ ಬಳಿಸಿದ ಅನುಚಿತ ಭಾಷೆ ICC ನೀತಿ ಸಂಹಿತೆಯ ನಿಯಮ 1 ಉಲ್ಲಂಘಿಸಿರುವುದಾಗಿದೆ. ಜೊತೆಗೆ ICC ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದ್ದಾಗಿದೆ. ಫಿಂಚ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಆದರೂ ಒಂದು ಡಿಮೆರಿಟ್ ಪಾಯಿಂಟ್ ಪಡೆದುಕೊಂಡಿದ್ದಾರೆ. ಕಳೆದ 24 ತಿಂಗಳುಗಳಲ್ಲಿ ಇದು ಫಿಂಚ್‌ನ ಮೊದಲ ಅಪರಾಧವಾಗಿದ್ದರೂ, ಸರಣಿಯ ಉಳಿದ ಅವಧಿಯಲ್ಲಿ ಅಥವಾ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ನಲ್ಲಿ ಈ ಘಟನೆ ಮರುಕಳಿಸಿದರೆ ಫಿಂಚ್ ಅಮಾನತುಗೊಳ್ಳುವ ಸಂಭವವಿದೆ. ಐಸಿಸಿ ನಿಯಮದ ಪ್ರಕಾರ 24-ತಿಂಗಳ ಅವಧಿಯಲ್ಲಿ ಆಟಗಾರನು ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಅಂಕಗಳನ್ನು ಪಡೆದುಕೊಂಡರೆ ಅವರು ನಿಷೇಧಕ್ಕೆ ಒಳಗಾಗುತ್ತಾರೆ.

ಪ್ರಥಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್‌ ಪೇರಿಸಿತು. ಬಟ್ಲರ್‌ 32 ಎಸೆತಗಳಲ್ಲಿ 8 ಫೋರ್, 6 ಸಿಕ್ಸರ್ ಸಿಡಿಸಿ 68 ರನ್‌ ಬಾರಿಸಿದರು. ಅಲೆಕ್ಸ್ ಹೇಲ್ಸ್‌ 51 ಎಸೆತಗಳಲ್ಲಿ 12 ಫೋರ್, 3 ಸಿಕ್ಸರ್​ನೊಂದಿಗೆ 84 ರನ್‌ ಚಚ್ಚಿದರು. ಇವರು ಮೊದಲ ವಿಕೆಟ್‌ಗೆ 132 ರನ್‌ ಸೇರಿಸಿದರು. ಇದರಿಂದ ತಂಡ ಬೃಹತ್‌ ಮೊತ್ತ ಪೇರಿಸಿತು.

ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 200 ರನ್‌ ಗಳಿಸಿ ಸೋಲು ಕಂಡಿತು. ಡೇವಿಡ್‌ ವಾರ್ನರ್‌ 44 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್​ನೊಂದಿಗೆ 73 ರನ್‌ ಗಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮಾರ್ಕಸ್‌ ಸ್ಟೋಯಿನಿಸ್ (35 ರನ್‌, 15 ಎ) ಅವರು ಭರ್ಜರಿ ಆಟವಾಡಿ ತಂಡವನ್ನು ಗೆಲುವಿನ ಸನಿಹ ತಂದರೂ ಸಾಧ್ಯವಾಗಲಿಲ್ಲ. ಮಾರ್ಕ್‌ ವುಡ್‌ (34ಕ್ಕೆ 3) ಹಾಗೂ ಸ್ಯಾಮ್‌ ಕರನ್‌ (35ಕ್ಕೆ 2) ಕೊನೆಯ ಓವರ್‌ಗಳಲ್ಲಿ ಬಿಗುವಾದ ಬೌಲಿಂಗ್‌ ನಡೆಸಿದ ಪರಿಣಾಮ ಇಂಗ್ಲೆಂಡ್ 8 ರನ್​ಗಳ ರೋಚಕ ಜಯ ಸಾಧಿಸಿತು.

Published On - 11:15 am, Tue, 11 October 22