Shreyas Iyer: ಏಕದಿನ ಕ್ರಿಕೆಟ್ನ ಚೇಸ್ ಮಾಸ್ಟರ್ ಶ್ರೇಯಸ್ ಅಯ್ಯರ್..! ಅಂಕಿಅಂಶಗಳು ಅದನ್ನೇ ಹೇಳುತ್ತಿವೆ
Shreyas Iyer: ಗುರಿಯನ್ನು ಬೆನ್ನಟ್ಟಿದ ಕೊನೆಯ 12 ಇನ್ನಿಂಗ್ಸ್ಗಳಲ್ಲಿ ಅಯ್ಯರ್ ಆರು ಬಾರಿ 50 ರ ಗಡಿ ದಾಟಿದ್ದಾರೆ. ಈ ಆರು ಇನ್ನಿಂಗ್ಸ್ ಗಳಲ್ಲಿ ಅಯ್ಯರ್, ಕೊಹ್ಲಿಯಂತೆ ಚೇಸಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
Shreyas Iyer and Virat Kohli
Follow us
ಕ್ರಿಕೆಟ್ ದುನಿಯಾದಲ್ಲಿ ವಿರಾಟ್ ಕೊಹ್ಲಿಯನ್ನು ಚೇಸ್ ಮಾಸ್ಟರ್ ಎಂದು ಕರೆಯಲಾಗುತ್ತದೆ. ಗುರಿಯನ್ನು ಬೆನ್ನಟ್ಟಿದ ಹಲವು ಸಮಯದಲ್ಲಿ ಟೀಂ ಇಂಡಿಯಾ ಪರ ಕೊಹ್ಲಿ ಏಕಾಂಗಿಯಾಗಿ ನಿಂತು ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಕೊಹ್ಲಿಗೆ ಚೇಸ್ ಮಾಸ್ಟರ್ ಎಂಬ ಹೆಸರು ಬಂದಿದೆ. ಆದರೆ ಇತ್ತೀಚಿಗೆ ಟೀಂ ಇಂಡಿಯಾದ ಮತ್ತೊಬ್ಬ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆದ ಶ್ರೇಯಸ್ ಅಯ್ಯರ್, ಕೊಹ್ಲಿಯ ಚೇಸ್ ಮಾಸ್ಟರ್ ಬಿರುದನ್ನು ತಮ್ಮತ್ತ ವಾಲುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕಳೆದ ಕೆಲವು ಇನ್ನಿಂಗ್ಸ್ಗಳಲ್ಲಿ ಶ್ರೇಯಸ್ ನೀಡಿರುವ ಪ್ರದರ್ಶನವೇ ನಿದರ್ಶನವಾಗಿದೆ.
ಅಕ್ಟೋಬರ್ 9 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಯ್ಯರ್ ಅಜೇಯ 113 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 278 ರನ್ಗಳ ಬೆನ್ನತ್ತಿದ್ದು, ಅಯ್ಯರ್ ಅವರ ಇನ್ನಿಂಗ್ಸ್ನ ಆಧಾರದ ಮೇಲೆ ತಂಡಕ್ಕೆ ಜಯ ಒಲಿಯಿತು.
ಟೀಂ ಇಂಡಿಯಾ ರನ್ ಚೇಸ್ ಮಾಡುವಾಗಲೆಲ್ಲ ಅಯ್ಯರ್ ಅವರ ಸರಾಸರಿ ಉತ್ತಮವಾಗಿದೆ. ESPNcricinfo ವೆಬ್ಸೈಟ್ನ ವರದಿಯ ಪ್ರಕಾರ, ತಂಡ ಗುರಿಯನ್ನು ಬೆನ್ನಟ್ಟುವಾಗ ಅಯ್ಯರ್ ಅವರು 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿರುವುದು ಉಲ್ಲೇಖವಾಗಿದೆ.
ಅಲ್ಲದೆ ಏಕದಿನ ಕ್ರಿಕೆಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅಯ್ಯರ್ ಅವರ ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿದೆ. ಈ ಸಮಯದಲ್ಲಿ, ಅಯ್ಯರ್ 106 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದು, ಗುರಿಯನ್ನು ಬೆನ್ನಟ್ಟಿದ ಕೊನೆಯ 12 ಇನ್ನಿಂಗ್ಸ್ಗಳಲ್ಲಿ ಅಯ್ಯರ್ ಆರು ಬಾರಿ 50 ರ ಗಡಿ ದಾಟಿದ್ದಾರೆ. ಈ ಆರು ಇನ್ನಿಂಗ್ಸ್ ಗಳಲ್ಲಿ ಅಯ್ಯರ್ ಕೊಹ್ಲಿಯಂತೆ ಚೇಸಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.