ಐಸಿಸಿ ಏಕದಿನ ವಿಶ್ವಕಪ್ 2023 ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಇದೀಗ ನಾಲ್ಕು ತಂಡಗಳು ಸೆಮಿಫೈನಲ್ನಲ್ಲಿ ಕಾದಾಟ ನಡೆಸಲು ಸಜ್ಜಾಗಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಬಹುದು ಎಂದು ನಂಬಲಾಗಿದ್ದ ಪಾಕಿಸ್ತಾನ ತಂಡ ತೀರಾ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಾಗಿದೆ. ಪಾಕ್ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಇನ್ನೂ ನಿಂತಿಲ್ಲ. ಇದೀಗ ಪಾಕ್ ಮಾಜಿ ಆಟಗಾರ ಅಬ್ದುಲ್ ರಝಾಕ್ (Abdul Razzaq) ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನ ತಂಡವನ್ನು ಟೀಕಿಸುವ ಭರದಲ್ಲಿ ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ.
ತಮ್ಮದೇ ಆದ ಉದಾಹರಣೆಯನ್ನು ನೀಡಿರುವ ರಝಾಕ್, ”ಮಾಜಿ ನಾಯಕ ಯೂನಿಸ್ ಖಾನ್ ತಂಡಕ್ಕೆ ಕೊಡುಗೆ ಸಲ್ಲಿಸುವ ಬಗ್ಗೆ ಉತ್ತಮ ಉದ್ದೇಶವನ್ನು ಹೊಂದಿದ್ದರು, ಹೀಗಾಗಿ ಅವರು ತಮ್ಮ ನಾಯಕ ಪಾಕಿಸ್ತಾನಕ್ಕೆ ಅರ್ಹರಾಗಿದ್ದರು,” ಎಂದು ಹೇಳಿದ್ದಾರೆ. ನಂತರ ರಝಾಕ್ ಪ್ರಸ್ತುತ ಪಾಕಿಸ್ತಾನಿ ಮಂಡಳಿ ಮತ್ತು ತಂಡದ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ತನ್ನ ನಾಲಿಗೆ ಹರಿಬಿಟ್ಟು, ”ಈಗ ಐಶ್ವರ್ಯಾ ರೈ ಅವರನ್ನು ಮದುವೆ ಆಗಬೇಕು, ಸುಂದರವಾದ ಮಗು ಬೇಕು ಅಂದ್ರೆ ಅದು ಆಗುತ್ತಾ,” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Shameful example given by Abdul Razzaq. #AbdulRazzaq #CWC23 pic.twitter.com/AOboOVHoQU
— Shaharyar Ejaz 🏏 (@SharyOfficial) November 13, 2023
ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ರಝಾಕ್ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡುವಾಗ ವೇದಿಕೆ ಮೇಲೆ ಪಾಕಿಸ್ತಾನದ ಮಾಜಿ ಆಟಗಾರರು ಕೂಡ ಇದ್ದರು. ಮಾಜಿ ನಾಯಕರಾದ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ಅವರು ರಝಾಕ್ ಹೇಳಿಕೆಗೆ ನಕ್ಕರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಫೈನಲ್ಗೆ ತಲುಪಿದಾಗ, ಎಲ್ಲವೂ ಮತ್ತೆ ಶುರುವಾಗುತ್ತೆ: ಕೇನ್ ವಿಲಿಯಮ್ಸನ್
ರಝಾಕ್ ಅವರ ಈ ವಿವಾದಾತ್ಮಕ ಹೇಳಿಕೆಗೆ ಸ್ವತಃ ಪಾಕಿಸ್ತಾನದ ಕೆಲ ಆಟಗಾರರೇ ಖಂಡಿಸಿದ್ದಾರೆ. ಮಾಜಿ ವೇಗಿ ಶೋಯೆಬ್ ಅಖ್ತರ್, “ಯಾವ ಮಹಿಳೆಗೂ ಈ ರೀತಿ ಅಗೌರವ ತೋರಬಾರದು. ಅವನ ಪಕ್ಕದಲ್ಲಿ ಕುಳಿತವರು ನಗುವುದು ಮತ್ತು ಚಪ್ಪಾಳೆ ತಟ್ಟುವ ಬದಲು ಇದನ್ನು ವಿರೋಧಿಸಬೇಕಿತ್ತು,” ಎಂದು ಟ್ವೀಟ್ ಮಾಡಿದ್ದಾರೆ.
I highly condemn the inappropriate joke/comparison made by Razzaq.
No woman should be disrespected like this.
People seated beside him should have raised their voice right away rather than laughing & clapping.— Shoaib Akhtar (@shoaib100mph) November 14, 2023
A typical mindset, off-topic, completely lost when they’re talking. I’ve so much respect for Razzaq’s cricketing career for Pakistan, but his statement is absolutely shameful. This isn’t a stage drama. Stop making us embarrassed in front of the world. Think before you talk.
— Ihtisham Ul Haq (@iihtishamm) November 13, 2023
ಏತನ್ಮಧ್ಯೆ, ವಿಶ್ವಕಪ್ ಪ್ರಾರಂಭವಾದಾಗ, ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಪಾಕಿಸ್ತಾನವನ್ನು ಕ್ರಿಕೆಟ್ ಶಿಶುಗಳಾದ ಅಫ್ಘಾನಿಸ್ತಾನ ತಂಡ ಕೂಡ ಸೋಲಿಸಿತು. ಪಾಕಿಸ್ತಾನ ತಂಡದ ಒಟ್ಟಾರೆ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ ಬಾಬರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Wed, 15 November 23