IPL 2024: CSK ತಂಡದಿಂದ ಬೆನ್ ಸ್ಟೋಕ್ಸ್ ಔಟ್..!
IPL 2024: ಮುಂಬರುವ ಐಪಿಎಲ್ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿಯ ಪರ್ಸ್ ನೀಡಲಾಗುತ್ತಿದೆ. ಕಳೆದ ಬಾರಿಯ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು 95 ಕೋಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ 5 ಕೋಟಿ ರೂ. ಅನ್ನು ಹೆಚ್ಚಿಸಲಾಗಿದ್ದು, ಅದರಂತೆ 100 ಕೋಟಿಯೊಳಗೆ ಆಟಗಾರರನ್ನು ಖರೀದಿಸಬಹುದು.
ಐಪಿಎಲ್ 2024 ರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡಲು ಸಿಎಸ್ಕೆ ಫ್ರಾಂಚೈಸಿ ನಿರ್ಧರಿಸಿದೆ. ಕಳೆದ ಸೀಸನ್ನಲ್ಲಿ ಸಿಎಸ್ಕೆ ಫ್ರಾಂಚೈಸಿಯು ಇಂಗ್ಲೆಂಡ್ ಆಟಗಾರನನ್ನು ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಫಿಟ್ನೆಸ್ ಸಮಸ್ಯೆಯ ಕಾರಣ ಸ್ಟೋಕ್ಸ್ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ.
ಈ ಎರಡು ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 15 ರನ್. ಹಾಗೆಯೇ 1 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಸ್ಟೋಕ್ಸ್ ಅವರನ್ನು ರಿಲೀಸ್ ಮಾಡಲು ಸಿಎಸ್ಕೆ ಫ್ರಾಂಚೈಸಿ ನಿರ್ಧರಿಸಿದೆ. ಬೆನ್ ಸ್ಟೋಕ್ಸ್ ಅವರನ್ನು ಬಿಡುಗಡೆ ಮಾಡುವುದರಿಂದ ಸಿಎಸ್ಕೆ ಫ್ರಾಂಚೈಸಿಯ ಬಿಡ್ಡಿಂಗ್ ಖಾತೆಗೆ 16.25 ಕೋಟಿ ರೂ. ಸೇರ್ಪಡೆಯಾಗಲಿದೆ. ಈ ಮೊತ್ತದಲ್ಲಿ ಸಿಎಸ್ಕೆ ಬಿಗ್ ಬಿಡ್ಡಿಂಗ್ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಐಪಿಎಲ್ನಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಬೆನ್ ಸ್ಟೋಕ್ಸ್ ಇದುವರೆಗೆ ಒಟ್ಟು 45 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 935 ರನ್ ಕಲೆಹಾಕಿದರೆ, 28 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
100 ಕೋಟಿ ಪರ್ಸ್:
ಮುಂಬರುವ ಐಪಿಎಲ್ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿಯ ಪರ್ಸ್ ನೀಡಲಾಗುತ್ತಿದೆ. ಕಳೆದ ಬಾರಿಯ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು 95 ಕೋಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ 5 ಕೋಟಿ ರೂ. ಅನ್ನು ಹೆಚ್ಚಿಸಲಾಗಿದ್ದು, ಅದರಂತೆ 100 ಕೋಟಿಯೊಳಗೆ ಆಟಗಾರರನ್ನು ಖರೀದಿಸಬಹುದು.