Rachin Ravindra: ರಾಹುಲ್ + ಸಚಿನ್= ರಚಿನ್ ಅಲ್ಲ..!
Rachin Ravindra: ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಹೊಂದಿಲ್ಲದಿದ್ದರೂ, ರಚಿನ್ ರವೀಂದ್ರ ಕ್ರಿಕೆಟ್ ಅನ್ನೇ ವೃತ್ತಿಜೀವನವನ್ನಾಗಿ ಆಯ್ಕೆ ಮಾಡಿರುವುದು ವಿಶೇಷ. ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್ನಲ್ಲಿ ಮೂರು ಭರ್ಜರಿ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಾರಿಯ ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಯುವ ಆಟಗಾರರಲ್ಲಿ ರಚಿನ್ ರವೀಂದ್ರ ಕೂಡ ಒಬ್ಬರು. ಅದರಲ್ಲೂ ಬಲಿಷ್ಠ ತಂಡಗಳ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಯುವ ಎಡಗೈ ದಾಂಡಿಗ ಹಲವು ದಾಖಲೆಗಳನ್ನು ಸೃಷ್ಟಿಸಿದ್ದರು.
ಈ ದಾಖಲೆಗಳ ಬೆನ್ನಲ್ಲೇ ಭಾರತೀಯ ಮೂಲದ ರಚಿನ್ ರವೀಂದ್ರ ಮನೆಮಾತಾಗಿದ್ದರು. ಇದರ ಬೆನ್ನಲ್ಲೇ ರಚಿನ್ ಹೆಸರಿನ ಸಿಕ್ರೇಟ್ ಕೂಡ ಬಹಿರಂಗವಾಗಿತ್ತು. ರಾಹುಲ್ ದ್ರಾವಿಡ್ (RA) ಹಾಗೂ ಸಚಿನ್ (CHIN) ತೆಂಡೂಲ್ಕರ್ ಅವರ ಹೆಸರನ್ನು ಸಂಯೋಜಿಸಿ ಅವರಿಗೆ ಹೆಸರಿಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೆ ಅದೆಲ್ಲವೂ ಸುಳ್ಳು ಸುದ್ದಿ ಎಂದಿದ್ದಾರೆ ರಚಿನ್ ಅವರ ತಂದೆ ರವೀಂದ್ರ ಕೃಷ್ಣಮೂರ್ತಿ. ಈ ಬಗ್ಗೆ ಮಾತನಾಡಿರುವ ರವೀಂದ್ರ ಅವರು, ರಚಿನ್ ಜನಿಸಿದಾಗ, ನನ್ನ ಹೆಂಡತಿ ಮಗನಿಗೆ ಈ ಹೆಸರನ್ನು ಸೂಚಿಸಿದ್ದಳು. ಹೆಸರು ಚಿಕ್ಕದಾಗಿ, ಉಚ್ಛರಿಸಲು ಕೂಡ ಸುಲಭವಾಗಿದ್ದರಿಂದ ನಮಗೆಲ್ಲರಿಗೂ ಇಷ್ಟವಾಯಿತು. ಹೀಗಾಗಿ ರಚಿನ್ ಎಂದು ನಾಯಕರಣ ಮಾಡಲಾಯಿತು.
ಇದಾಗಿ ಕೆಲ ವರ್ಷಗಳ ಬಳಿಕವಷ್ಟೇ ರಚಿನ್ ಎನ್ನುವುದು ರಾಹುಲ್+ಸಚಿನ್ ಹೆಸರಿನ ಸಮ್ಮಿಳಿತ ಎಂಬುದು ನಮಗೂ ತಿಳಿಯಿತು. ಇದರ ಹೊರತಾಗಿ ರಾಹುಲ್ – ಸಚಿನ್ ಹೆಸರುಗಳನ್ನು ಸೇರಿಸಿ ನಾವು ಉದ್ದೇಶಪೂರ್ವಕವಾಗಿ ರಚಿನ್ ಎಂದು ನಾಮಕರಣ ಮಾಡಿರಲಿಲ್ಲ ಎಂದು ರವೀಂದ್ರ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ನಲ್ಲಿ ಹೊಸ ಇತಿಹಾಸ ಬರೆದ ರಚಿನ್ ರವೀಂದ್ರ
ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಹೊಂದಿಲ್ಲದಿದ್ದರೂ, ರಚಿನ್ ರವೀಂದ್ರ ಕ್ರಿಕೆಟ್ ಅನ್ನೇ ವೃತ್ತಿಜೀವನವನ್ನಾಗಿ ಆಯ್ಕೆ ಮಾಡಿರುವುದು ವಿಶೇಷ. ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್ನಲ್ಲಿ ಮೂರು ಭರ್ಜರಿ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.